‘ಕಾಂತಾರ 2’ ಸಿನಿಮಾ ವಿರುದ್ಧ ಹೋರಾಟದ ಎಚ್ಚರಿಕೆ: ಕಾರಣ?
Rishab Shetty: ರಿಷಬ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ‘ಕಾಂತಾರ 2’ ಸಿನಿಮಾದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಎಚ್ಚರಿಕೆ ನೀಡಿದೆ.
ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ (Kantara) ಸಿನಿಮಾ 2022 ರ ಸೆಪ್ಟೆಂಬರ್ನಲ್ಲಿ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಯ್ತು. ‘ಕಾಂತಾರ’ ಸಿನಿಮಾನಲ್ಲಿ ತುಳುನಾಡಿನ ದೈವದ ಕತೆಯನ್ನು ತೋರಿಸಲಾಗಿತ್ತು. ಸಿನಿಮಾ ಬಿಡುಗಡೆ ಬಳಿಕ, ತುಳು ನಾಡಿನ ದೈವಗಳ ಬಗ್ಗೆ ರಾಜ್ಯ ಹಾಗೂ ರಾಷ್ಟ್ರದ ಇತರೆ ಭಾಗಗಳವರಿಗೆ ಪರಿಚಯವಾಯ್ತು. ಇದರ ಜೊತೆಗೆ ದೈವದ ಅನುಕರಣೆಯೂ ಸಹ ಹೆಚ್ಚಾಯ್ತು. ರೀಲ್ಸ್ಗಳಲ್ಲಿ, ಧಾರಾವಾಹಿಗಳಲ್ಲಿ ದೈವದ ವೇಷ ಹಾಕಿಕೊಂಡು ಪ್ರದರ್ಶನ ನೀಡುವ ಛಾಳಿ ಹೆಚ್ಚಾಗಿದ್ದು, ಇದು ತುಳು ನಾಡಿನ ಜನರ ಭಾವನೆಗಳಿಗೆ ಧಕ್ಕೆ ತರುತ್ತಿದೆ. ರಿಷಬ್ ಶೆಟ್ಟಿ ‘ಕಾಂತಾರ 2’ ಸಿನಿಮಾ ನಿರ್ದೇಶನದಲ್ಲಿ ತೊಡಗಿದ್ದು ಆ ಸಿನಿಮಾದ ವಿರುದ್ಧವೂ ಸಹ ಹೋರಾಟದ ಎಚ್ಚರಿಕೆಯನ್ನು ಕೆಲವರು ನೀಡಿದ್ದಾರೆ.
ಇತ್ತೀಚೆಗೆ ಧಾರಾವಾಹಿಯೊಂದರಲ್ಲಿ ದೈವದ ವೇಷ ಹಾಕಿಕೊಂಡು ನಟರೊಬ್ಬರು ಪ್ರದರ್ಶನ ನೀಡಿದ್ದರು. ಇದರ ವಿರುದ್ಧ ಅಸಮಾಧಾನ ಹೊಸ ಹಾಕಿರುವ ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆಯು ಮಂಗಳೂರು ಹಾಗೂ ಬಜ್ಪೆ ಪೊಲೀಸ್ ಠಾಣೆಗಳಲ್ಲಿ ದೂರು ಸಲ್ಲಿಸಿದೆ. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆಯ ಕೆಲ ಮುಖಂಡರು, ದೈವಾರಾದನೆ ಎಂಬುದು ಹಣ ಮಾಡುವ ದಂಧೆಯಾಗಿಬಿಟ್ಟಿದೆ ಕೆಲವರು ಮಾಡಿಕೊಂಡಿದ್ದಾರೆ. ನಾವು ‘ಕಾಂತಾರ 2’ ಸಿನಿಮಾದ ವಿರುದ್ಧವೂ ಸಹ ಪ್ರತಿಭಟನೆ ನಡೆಸಲಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ:ತಾವು ಕಲಿತ ಶಾಲೆ ದತ್ತು ಪಡೆದ ರಿಷಬ್ ಶೆಟ್ಟಿ: ಶಿಕ್ಷಕರು ಹೇಳಿದ್ದು ಹೀಗೆ
‘ರಿಷಬ್ ಶೆಟ್ಟಿಯವರಿಗೆ ದೈವದ ಬಗ್ಗೆ ಹೆಚ್ಚಾಗಿ ತಿಳಿದಂತಿಲ್ಲ. ಆದರೂ ಅವರು ಮಾಡಿದ್ದಾರೆ. ಉತ್ತರ ಕನ್ನಡ ಬಿಟ್ಟರೆ ಬೇರೆಡೆ ದೈವ ಎಂದರೇನು ಎಂಬುದು ಗೊತ್ತಿಲ್ಲ ‘ಕಾಂತಾರ’ ಸಿನಿಮಾದ ಬಳಿಕ ದೈವದ ಬಗ್ಗೆ ಬೇರೆಡೆ ಅಪಹಾಸ್ಯ ಮಾಡಲಾಗುತ್ತಿದೆ. ಪಂಜುರ್ಲಿ ಎಂದರೆ ಯಾರು ಅದರ ಮಹತ್ವವೇನು ಎಂಬುದು ಗೊತ್ತಿಲ್ಲದವರು ಅದಕ್ಕೆ ಅಪಮಾನ ಎಸಗುತ್ತಿದ್ದಾರೆ. ರಿಷಬ್ ಶೆಟ್ಟಿ ಇದಕ್ಕೆಲ್ಲ ಉತ್ತರ ಕೊಡಬೇಕಿತ್ತು ಆದರೆ ಕೊಟ್ಟಿಲ್ಲ. ಈಗ ಅವರು ‘ಕಾಂತಾರ 2’ ಮಾಡಲು ಹೊರಟಿದ್ದಾರೆ. ಅದರಲ್ಲಿ ದೈವದ ಬಗ್ಗೆ ಕತೆ ಇದ್ದರೆ ಖಂಡಿತ ಅದರ ವಿರುದ್ಧ ನಾವು ಪ್ರತಿಭಟನೆ, ಆ ಸಿನಿಮಾದ ವಿರುದ್ಧ ನಿಲ್ಲುತ್ತೇವೆ ಮಾಡುತ್ತೇವೆ’ ಎಂದಿದ್ದಾರೆ.
‘ದೈವದ ಕೆಲಸ ಮಾಡಲು ಮೂರು ಸಮುದಾಯಗಳಿವೆ. ನಲಿಕೆ, ಪರವ, ಪಂಬರ ಸಮುದಾಯದವರು ಮಾತ್ರ ದೈವದ ಕೆಲಸ ಮಾಡಬೇಕು. ಅದನ್ನು ಬಿಟ್ಟು ಬೇರೆ ಯಾರಾದರೂ ದೈವ ಮಾಡಿದರೆ ಅದು ಸರಿಯಲ್ಲ. ಬೇರೆಯವರಲ್ಲಿ ದೈವದ ಭಕ್ತಿ ಇರುವುದಿಲ್ಲ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ