AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರುತೆರೆಗೆ ಪ್ರವೇಶಿಸಿದ ‘ಕಾಂತಾರ’ ಚೆಲುವೆ ಸಪ್ತಮಿ ಗೌಡ

Sapthami Gowda: ಸಪ್ತಮಿ ಗೌಡ ಹಿರಿತೆರೆಯ ಬಲು ಬೇಡಿಕೆಯ ನಟಿ. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗಲೇ ಕಿರುತರೆಗೆ ಎಂಟ್ರಿ ಕೊಟ್ಟಿದ್ದಾರೆ ಸಪ್ತಮಿ ಗೌಡ.

ಕಿರುತೆರೆಗೆ ಪ್ರವೇಶಿಸಿದ ‘ಕಾಂತಾರ’ ಚೆಲುವೆ ಸಪ್ತಮಿ ಗೌಡ
ಮಂಜುನಾಥ ಸಿ.
|

Updated on: Feb 04, 2024 | 8:02 PM

Share

ಕಾಂತಾರ’ (Kantara) ಸಿನಿಮಾ ಮೂಲಕ ಸಪ್ತಮಿ ಗೌಡ (Saptami Gowda) ಅವರಿಗೆ ಅದೃಷ್ಟದ ಬಾಗಿಲು ತೆರೆದಿದೆ. ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಮಾಡಿದ್ದ ಪಾತ್ರ ವೈರಲ್ ಆಗಿತ್ತಾದರೂ ದೊಡ್ಡ ಆಫರ್​ಗಳೇನು ಅದರಿಂದ ದೊರಕಿರಲಿಲ್ಲ. ಆದರೆ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೆ ಸಪ್ತಮಿ ಗೌಡ ಅವರಿಗೆ ಅವಕಾಶಗಳ ಸುರಿಮಳೆಯೇ ಆಗುತ್ತಿದೆ. ಈಗಾಗಲೇ ಬಾಲಿವುಡ್​ನ ಒಂದು ಸಿನಿಮಾದಲ್ಲಿ ನಟಿಸಿರುವ ಸಪ್ತಮಿ ಗೌಡ, ಇದೀಗ ಕಿರುತೆರೆಗೆ ಎಂಟ್ರಿ ನೀಡಿದ್ದಾರೆ.

ಹಿರಿತೆರೆಯಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟರು ಕಿರುತೆರೆಗೆ ಕಾಲಿಡುವುದಿಲ್ಲ. ಬಂದರೂ ಸಹ ಅತಿಥಿಯಾಗಿ ಮಾತ್ರ. ಇದೀಗ ಸಪ್ತಮಿ ಗೌಡ ಸಹ ಅತಿಥಿಯಾಗಿಯೇ ಕಿರುತೆರೆಗೆ ಎಂಟ್ರಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಬಿಗ್​ಬಾಸ್​ಗೆ ಸಪ್ತಮಿ ಗೌಡ ಬಂದಿದ್ದರು. ಮುಟ್ಟಿನ ಕಪ್​ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸಪ್ತಮಿ ಗೌಡ, ಅದೇ ಕಾರ್ಯಕ್ಕಾಗಿ ಬಿಗ್​ಬಾಸ್ ಮನೆಗೆ ಬಂದು ಮುಟ್ಟಿನ ಕಪ್​ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದರು.

ಇದನ್ನೂ ಓದಿ:ಹಸಿರು ಸೀರೆಯುಟ್ಟು ಬಂದ ಸಪ್ತಮಿ ಗೌಡ, ಮುಡಿಯಲ್ಲಿ ಮಲ್ಲಿಗೆ ಮಿಸ್ಸಿಂಗ್

ಇದೀಗ ಮತ್ತೊಮ್ಮೆ ಕಿರುತೆರೆಗೆ ಸಪ್ತಮಿ ಗೌಡ ಎಂಟ್ರಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆಯೇ ‘ಜೀ ಕನ್ನಡ’ಕ್ಕಾಗಿ ಪ್ರೋಮೋ ಚಿತ್ರೀಕರಣದಲ್ಲಿ ಭಾಗಿಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಪ್ತಮಿ ಗೌಡ, ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಗಾಗಿ ಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯ ಪ್ರೊಮೋಟರ್ ರೀತಿ ಸಪ್ತಮಿ ಗೌಡ, ಧಾರಾವಾಹಿ ಬಗ್ಗೆ ಕಾಮೆಂಟ್ರಿ ಮಾಡಿದ್ದಾರೆ. ಧಾರಾವಾಹಿಗಳಲ್ಲಿ ಇತ್ತೀಚೆಗೆ ಸಿನಿಮಾ ನಟರನ್ನು ಅತಿಥಿಗಳನ್ನಾಗಿ ಕರೆತರುವ ಅಭ್ಯಾಸ ಹೆಚ್ಚಾಗಿದೆ. ನಟ ರವಿಚಂದ್ರನ್ ಸೇರಿದಂತೆ ಹಲವು ನಟರನ್ನು ಧಾರಾವಾಹಿಗಳಿಗಾಗಿ ಕರೆತರಲಾಗಿದೆ. ಇದೀಗ ಸಪ್ತಮಿ ಗೌಡ ಅವರನ್ನು ಶ್ರೀರಸ್ತು ಶುಭಮಸ್ತು ಧಾರಾವಾಗಿಗಾಗಿ ಕರೆ ತರಲಾಗಿದೆ.

ಸಪ್ತಮಿ ಗೌಡ ನಟಿಸಿರುವ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಇದೀಗ ದೊಡ್ಮನೆಯ ಯುವರಾಜ್ ಕುಮಾರ್ ನಟನೆಯ ‘ಯುವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಭಿಷೇಕ್ ಅಂಬರಿಶ್ ನಟನೆಯ ಹೊಸ ಸಿನಿಮಾದಲ್ಲಿಯೂ ಸಪ್ತಮಿ ನಾಯಕಿಯಾಗಿ ನಟಿಸಿದ್ದಾರೆ. ‘ಕಾಂತಾರ 2’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು ಆ ಸಿನಿಮಾದಲ್ಲಿ ಸಪ್ತಮಿ ಇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟೀಮ್ ಇಂಡಿಯಾ ಆಟಗಾರರ ಶತಕ ತಪ್ಪಿಸಲು ಮುಂದಾಗಿದ್ದ ಸ್ಟೋಕ್ಸ್
ಟೀಮ್ ಇಂಡಿಯಾ ಆಟಗಾರರ ಶತಕ ತಪ್ಪಿಸಲು ಮುಂದಾಗಿದ್ದ ಸ್ಟೋಕ್ಸ್
ವರಮಹಾಲಕ್ಷ್ಮೀ ಹಬ್ಬ ಆಚರಣೆ ದಿನಾಂಕ ಯಾವಾಗ? ಆಚರಣೆ ಹೇಗೆ , ಫಲಗಳೇನು?
ವರಮಹಾಲಕ್ಷ್ಮೀ ಹಬ್ಬ ಆಚರಣೆ ದಿನಾಂಕ ಯಾವಾಗ? ಆಚರಣೆ ಹೇಗೆ , ಫಲಗಳೇನು?
ಇಂದು ವಿನಾಯಕಿ ಚತುರ್ಥಿ: ದ್ವಾದಶ ರಾಶಿ ಭವಿಷ್ಯ ಹೇಗಿದೆ ನೋಡಿ
ಇಂದು ವಿನಾಯಕಿ ಚತುರ್ಥಿ: ದ್ವಾದಶ ರಾಶಿ ಭವಿಷ್ಯ ಹೇಗಿದೆ ನೋಡಿ
ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್