‘ನಾಗಿನ್’ ಧಾರಾವಾಹಿಯಲ್ಲಿ ನಟಿಸೋಕೆ ರೆಡಿ ಆದ ಅಂಕಿತಾ ಲೋಖಂಡೆ; ಸಿಗುತ್ತಿದೆ ಭರ್ಜರಿ ಸಂಭಾವನೆ?
‘ಬಿಗ್ ಬಾಸ್ ಹಿಂದಿ ಸೀಸನ್ 17’ ಇತ್ತೀಚೆಗೆ ಪೂರ್ಣಗೊಂಡಿದೆ. ಇದರಲ್ಲಿ ಫಿನಾಲೆ ತಲುಪಿದ್ದ ಅಂಕಿತಾ ಲೋಖಂಡೆ ‘ನಾಗಿನ್ 7’ ಶೋನಲ್ಲಿ ನಾಗಿಣಿ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಈ ಪಾತ್ರಕ್ಕಾಗಿ ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ. ಈ ಮೊದಲು ನಾಗಿನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದವರು ಪಡೆದ ಸಂಭಾವನೆಯನ್ನು ಅಂಕಿತಾ ಮೀರಿಸಲಿದ್ದಾರೆ ಎನ್ನಲಾಗಿದೆ.
ಹಿಂದಿಯಲ್ಲಿ ‘ನಾಗಿನ್ ಸೀಸನ್ 7’ ಬರೋಕೆ ರೆಡಿ ಆಗಿದೆ. ಈ ಮೊದಲು ಪ್ರಸಾರ ಕಂಡ ‘ನಾಗಿನ್’ ಧಾರಾವಾಹಿಗಳು ಸಾಕಷ್ಟು ಜನಪ್ರಿಯತೆ ಪಡೆದಿದ್ದವು. ಈಗ ‘ನಾಗಿನ್ 7’ (Naagin 7) ಲಾಂಚ್ ಮಾಡೋಕೆ ರೆಡಿ ಆಗಿದ್ದಾರೆ ನಿರ್ಮಾಪಕಿ ಏಕ್ತಾ ಕಪೂರ್. ‘ನಾಗಿನ್ 6’ನಲ್ಲಿ ತೇಜಸ್ವಿ ಪ್ರಕಾಶ್ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದರು. ಈಗ ಏಳನೇ ಸರಣಿಗೆ ಸಿದ್ಧತೆ ನಡೆದಿದೆ.
ಇತ್ತೀಚೆಗೆ ‘ಬಿಗ್ ಬಾಸ್ ಹಿಂದಿ ಸೀಸನ್ 17’ ಪೂರ್ಣಗೊಂಡಿದೆ. ಇದರಲ್ಲಿ ಫಿನಾಲೆ ತಲುಪಿದ್ದ ಅಂಕಿತಾ ಲೋಖಂಡೆ ಅವರು ‘ನಾಗಿನ್ 7’ ಶೋನಲ್ಲಿ ನಾಗಿಣಿ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಈ ಪಾತ್ರಕ್ಕಾಗಿ ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ. ಈ ಮೊದಲು ನಾಗಿನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದವರು ಪಡೆದ ಸಂಭಾವನೆಯನ್ನು ಅಂಕಿತಾ ಮೀರಿಸಲಿದ್ದಾರೆ ಎನ್ನಲಾಗಿದೆ. ಈ ಮೊದಲು ನಾಗಿನ್ ಪಾತ್ರ ಮಾಡಿದ್ದ ಕಲಾವಿದರ ಸಂಭಾವನೆ ವಿವರ ಇಲ್ಲಿದೆ.
ಮೌನಿ ರಾಯ್
ಮೌನಿ ರಾಯ್ ಅವರು ‘ನಾಗಿನ್ 1‘ ಹಾಗೂ 2ನೇ ಸೀಸನ್ನಲ್ಲಿ ನಾಗಿನ್ ಪಾತ್ರ ಮಾಡಿದ್ದರು. ಅವರಿಗೆ ಭರ್ಜರಿ ಜನಪ್ರಿಯತೆ ಸಿಕ್ಕಿತು. ಮೌನಿ ಅವರು ಪ್ರತಿ ಎಪಿಸೋಡ್ಗೆ 1-3 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಿದ್ದರು.
ಅದಾ ಖಾನ್
ಅದಾ ಖಾನ್ ಅವರು ‘ನಾಗಿನ್ 1’ರಲ್ಲಿ ಕಾಣಿಸಿಕೊಂಡಿದ್ದರು. ಮೌನಿ ರಾಯ್ ಪಾತ್ರದ ವಿರುದ್ಧ ಸೇಡು ತೀರಿಸಿಕೊಳ್ಳುವ ಪಾತ್ರದಲ್ಲಿ ಅದಾ ನಟಿಸಿದ್ದರು. ಇವರು ಪ್ರತಿ ಎಪಿಸೋಡ್ಗೆ 70 ಸಾವಿರ ರೂಪಾಯಿ ಚಾರ್ಜ್ ಮಾಡುತ್ತಿದ್ದರು.
ಸುರಭಿ ಜ್ಯೋತಿ
ಸುರಭಿ ಜ್ಯೋತಿ ಅವರು ‘ನಾಗಿನ್ 3’ನಲ್ಲಿ ನಟಿಸಿದ್ದರು. ಆ ಸೀಸನ್ ಸಾಕಷ್ಟು ದೊಡ್ಡ ಯಶಸ್ಸು ಪಡೆಯಿತು. ಅವರು ಪ್ರತಿ ಕಾಲ್ಶೀಟ್ಗೆ 60-80 ಸಾವಿರ ರೂಪಾಯಿ ಚಾರ್ಜ್ ಮಾಡುತ್ತಿದ್ದರು.
ನಿಯಾ ಶರ್ಮಾ
ನಟಿ ನಿಯಾ ಶರ್ಮಾ ಅವರು ‘ನಾಗಿನ್ 4’ರಲ್ಲಿ ಕಾಣಿಸಿಕೊಂಡಿದ್ದರು. ಕೊವಿಡ್ ಕಾರಣದಿಂದ ಈ ಶೋ ಹೆಚ್ಚು ದಿನ ಪ್ರಸಾರ ಕಾಣಲಿಲ್ಲ. ಅವರು ಒಂದು ದಿನಕ್ಕೆ 40,000-60,000 ರೂಪಾಯಿ ಚಾರ್ಜ್ ಮಾಡುತ್ತಿದ್ದರು.
ಮಹೇಕ್ ಚಹಾಲ್
ನಟಿ ಮಹೇಕ್ ಚಹಾಲ್ ಅವರು ‘ನಾಗಿನ್ 6’ರಲ್ಲಿ ನಟಿಸಿದ್ದರು. ಅವರು ಪ್ರತಿ ಎಪಿಸೋಡ್ಗೆ ಚಾರ್ಜ್ ಮಾಡುತ್ತಿದ್ದುದು ಬರೋಬ್ಬರಿ 1 ಲಕ್ಷ ರೂಪಾಯಿ.
ತೇಜಸ್ವಿ ಪ್ರಕಾಶ್
ತೇಜಸ್ವಿ ಪ್ರಕಾಶ್ ಅವರು ‘ಬಿಗ್ ಬಾಸ್ 15’ ವಿನ್ನರ್ ಆಗಿದ್ದರು. ಮನೆಯಲ್ಲಿ ಇರುವಾಗಲೇ ಅವರಿಗೆ ಈ ಧಾರಾವಾಹಿಯ ಆಫರ್ ಬಂದಿತ್ತು. ಅವರು ಪ್ರತಿ ಎಪಿಸೋಡ್ಗೆ 2 ಲಕ್ಷ ರೂಪಾಯಿ ಚಾರ್ಜ್ ಮಾಡಿದ್ದರು. ಅವರು ನಾಗಿನ್ ಪಾತ್ರದಲ್ಲಿ ನಟಿಸಿದ್ದರು.
ಇದನ್ನೂ ಓದಿ: ಬಿಗ್ ಬಾಸ್ ಎಲಿಮಿನೇಷನ್ನಿಂದ ಅಪ್ಸೆಟ್ ಆದ ಅಂಕಿತಾ ಲೋಖಂಡೆ ಮಾಡಿದ್ದೇನು ನೋಡಿ..
ಸುರಭಿ ಚಂದನ
ಸುರಭಿ ಚಂದನ ಅವರು ‘ನಾಗಿನ್ 5’ರ ಭಾಗವಾಗಿದ್ದರು. ಅವರು ಪ್ರತಿ ಎಪಿಸೋಡ್ಗೆ 60 ಸಾವಿರ ರೂಪಾಯಿ ಚಾರ್ಜ್ ಮಾಡುತ್ತಿದ್ದರು ಎನ್ನಲಾಗಿದೆ.
ಅನಿತಾ ಹಸಂದನಿ
ಅನಿತಾ ಹಸಂದನಿ ಅವರು ‘ನಾಗಿನ್ 5’ ಹಾಗೂ 6ರಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ರೀತಿಯಲ್ಲಿ ತೋರಿಸಲಾಯಿತು. ಅವರು ಪ್ರತಿ ಎಪಿಸೋಡ್ಗೆ 1 ಲಕ್ಷ ರೂಪಾಯಿ ಚಾರ್ಜ್ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ