AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್’ಗೆ ಎಂಟ್ರಿ ಕೊಟ್ಟ ಈ ಸ್ಪರ್ಧಿಗಳ ಇನ್​ಸ್ಟಾಗ್ರಾಮ್ ಫಾಲೋವರ್ಸ್​ ಸಂಖ್ಯೆಯಲ್ಲಿ ಭಾರೀ ಹೆಚ್ಚಳ

ವಿಕ್ಕಿ ಜೈನ್ ಹಾಗೂ ಅಂಕಿತಾ ಲೋಖಂಡೆ ದಂಪತಿ ‘ಬಿಗ್ ಬಾಸ್ ಹಿಂದಿ ಸೀಸನ್ 17’ಗೆ ಎಂಟ್ರಿ ಕೊಟ್ಟು ಸುದ್ದಿ ಆದರು. ಅವರ ಸಂಬಂಧ ವಿಚ್ಛೇದನದವರೆಗೆ ಹೋಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಕೆಲವು ಸ್ಪರ್ಧಿಗಳಿಗೆ ದೊಡ್ಡ ಮಟ್ಟದ ಫಾಲೋವರ್ಸ್ ಸಿಕ್ಕಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ಬಿಗ್ ಬಾಸ್’ಗೆ ಎಂಟ್ರಿ ಕೊಟ್ಟ ಈ ಸ್ಪರ್ಧಿಗಳ ಇನ್​ಸ್ಟಾಗ್ರಾಮ್ ಫಾಲೋವರ್ಸ್​ ಸಂಖ್ಯೆಯಲ್ಲಿ ಭಾರೀ ಹೆಚ್ಚಳ
ಬಿಗ್ ಬಾಸ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 06, 2024 | 7:45 AM

Share

‘ಬಿಗ್ ಬಾಸ್ ಹಿಂದಿ ಸೀಸನ್ 17’ (Bigg Boss Hindi) ಪೂರ್ಣಗೊಂಡಿದೆ. ಈ ಸೀಸನ್ ಸಾಕಷ್ಟು ಸುದ್ದಿ ಆಗಿತ್ತು. ಈ ಸೀಸನ್ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಈ ಬಾರಿ ಸಾಕಷ್ಟು ವಿವಾದಗಳು ಕೂಡ ಆದವು. ಸ್ಪರ್ಧಿಗಳ ಮಧ್ಯೆ ಸಾಕಷ್ಟು ಕಿತ್ತಾಟ ನಡೆದಿದೆ. ವಿಕ್ಕಿ ಜೈನ್ ಹಾಗೂ ಅಂಕಿತಾ ಲೋಖಂಡೆ ದಂಪತಿ ಕೂಡ ದೊಡ್ಮನೆಗೆ ಎಂಟ್ರಿ ಕೊಟ್ಟು ಸುದ್ದಿ ಆದರು. ಅವರ ಸಂಬಂಧ ವಿಚ್ಛೇದನದವರೆಗೆ ಹೋಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಸ್ಪರ್ಧಿಗಳಿಗೆ ದೊಡ್ಡ ಮಟ್ಟದ ಫಾಲೋವರ್ಸ್ ಸಿಕ್ಕಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ವಿಕ್ಕಿ ಜೈನ್

ವಿಕ್ಕಿ ಜೈನ್ ಅವರು ದೊಡ್ಮನೆಗೆ ಬಂದು ಸಾಕಷ್ಟು ಗಮನ ಸೆಳೆದರು. ಫಿನಾಲೆ ವೀಕ್​ನಲ್ಲಿ ಅವರು ಔಟ್ ಆದರು. ಈ ಮೂಲಕ ಟಾಪ್ ಐದರಲ್ಲಿ ಒಬ್ಬರಾಗಬೇಕು ಎನ್ನುವ ಕನಸು ನನಸಾಗಲೇ ಇಲ್ಲ. ಅವರು ಬಿಗ್ ಬಾಸ್​ಗೆ ಬರುವಾಗ ಇನ್​ಸ್ಟಾಗ್ರಾಮ್​ನಲ್ಲಿ 18 ಸಾವಿರ ಹಿಂಬಾಲಕರನ್ನು ಹೊಂದಿದ್ದರು. ಅದು ಈಗ 74 ಸಾವಿರಕ್ಕೆ ಏರಿಕೆ ಆಗಿದೆ. ಅವರು ಉದ್ಯಮಿ.

ಅರುಣ್ ಮಾಶೆಟ್ಟಿ

ಅರುಣ್ ಮಾಶೆಟ್ಟಿ ಅವರು ಫಿನಾಲೆ ತಲುಪಿದವರಲ್ಲಿ ಒಬ್ಬರು. ಇವರು ಬಿಗ್ ಬಾಸ್ ಮನೆಗೆ ಹೋಗುವಾಗ 6.39 ಲಕ್ಷ ಹಿಂಬಾಲಕರು ಇದ್ದರು. ಈಗ ಅವರಿಗೆ ಬಿಗ್ ಬಾಸ್​ನಿಂದ ಅಭಿಮಾನಿ ಬಳಗ ಹಿರಿದಾಗಿದೆ. ಅವರ ಹಿಂಬಾಲಕರ ಸಂಖ್ಯೆ 11 ಲಕ್ಷಕ್ಕೆ ಏರಿಕೆ ಆಗಿದೆ. ಇದು ಅವರಿಗೆ ಸಿಕ್ಕ ಜನಪ್ರಿಯತೆಗೆ ಸಾಕ್ಷಿ.

ಇಶಾ ಮಾಲ್ವಿಯಾ

ಇಶಾ ಮಾಲ್ವಿಯಾ ಅವರು ಬಿಗ್ ಬಾಸ್​ಗೆ ಬಂದು ಖ್ಯಾತಿ ಪಡೆದರು. ಅವರಿಗೆ ಈ ಮೊದಲು 11 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 20 ಲಕ್ಷಕ್ಕೆ ಏರಿಕೆ ಆಗಿದೆ. ಧಾರಾವಾಹಿಗಳಲ್ಲಿ ನಟಿಸಿ ಇಶಾ ಫೇಮಸ್ ಆಗಿದ್ದಾರೆ.

ಮನಾರಾ ಚೋಪ್ರಾ

ಮನಾರಾ ಚೋಪ್ರಾ ಅವರು ಪ್ರಿಯಾಂಕಾ ಚೋಪ್ರಾ ಅವರ ಸಂಬಂಧಿ. ಅವರು ಈ ಬಾರಿ ಬಿಗ್ ಬಾಸ್​ಗೆ ಬಂದಿದ್ದರು. ಫಿನಾಲೆವರೆಗೆ ಅವರು ಇದ್ದರು. ಅವರಿಗೆ ಈ ಮೊದಲು 17 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 30 ಲಕ್ಷಕ್ಕೆ ಏರಿಕೆ ಆಗಿದೆ. ಗ್ಲಾಮರ್ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ.

ಅಭಿಷೇಕ್ ಕುಮಾರ್

ಈ ಬಾರಿ ಬಿಗ್ ಬಾಸ್​ನಲ್ಲಿ ಸಾಕಷ್ಟು ಹೈಲೈಟ್ ಆದ ಸ್ಪರ್ಧಿಗಳಲ್ಲಿ ಅಭಿಷೇಕ್ ಕೂಡ ಒಬ್ಬರು. ಅವರು ಸಮರ್ಥ್​ ಮೇಲೆ ಕೈ ಮಾಡಿ ಬಿಗ್ ಬಾಸ್​ನಿಂದ ಔಟ್ ಕೂಡ ಆಗಿದ್ದರು. ನಂತರ ಮತ್ತೆ ಅವರಿಗೆ ದೊಡ್ಮನೆಗೆ ಬರೋಕೆ ಅವಕಾಶ ಸಿಕ್ಕಿತು. ಅವರು ಮೊದಲ ರನ್ನರ್​ ಅಪ್ ಆಗಿದ್ದಾರೆ. ಬಿಗ್ ಬಾಸ್​ಗೆ ಬರುವಾಗ ಅವರಿಗೆ 6.35 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 39 ಲಕ್ಷಕ್ಕೆ ಏರಿಕೆ ಆಗಿದೆ. ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಟ್ರೋಫಿ ಗೆದ್ದ ಬಳಿಕ ಸಲ್ಮಾನ್ ಖಾನ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಮುನಾವರ್

ಮುನಾವರ್ ಫಾರೂಕಿ

ಮುನಾವರ್ ಫಾರೂಕಿ ಸ್ಟ್ಯಾಂಡಪ್ ಕಾಮಿಡಿಗಳ ಮೂಲಕ ಗಮನ ಸೆಳೆದವರು. ಅವರು ಬಿಗ್ ಬಾಸ್ ಗೆದ್ದಿದ್ದಾರೆ. ಅವರು ಬರೆಯೋ ಶಾಯರಿಗಳು ಫ್ಯಾನ್ಸ್​ಗೆ ಇಷ್ಟವಾಗಿವೆ. ಅವರು ಬಿಗ್ ಬಾಸ್​ಗೆ ಬರುವಾಗ 63 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 1.3 ಕೋಟಿಗೆ ಏರಿಕೆ ಆಗಿದೆ. ಅಂದರೆ ಅವರ ಹಿಂಬಾಲಕರ ಸಂಖ್ಯೆ ದ್ವಿಗುಣ ಆಗಿದೆ. ಅವರು ಹೋದಲ್ಲೆಲ್ಲ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ