AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿನಾಲೆಗೂ ಮೊದಲೇ ಎಲಿಮಿನೇಟ್ ಆದ ವಿಕ್ಕಿ ಜೈನ್; ಗಳಗಳನೆ ಅತ್ತ ಪತ್ನಿ ಅಂಕಿತಾ

ಅಂಕಿತಾ ಲೋಖಂಡೆ, ಮುನಾವರ್ ಫಾರೂಕಿ, ಅರುಣ್ ಮಾಶೆಟ್ಟಿ, ಅಭಿಷೇಕ್ ಕುಮಾರ್ ಮತ್ತು ಮನ್ನಾರಾ ಚೋಪ್ರಾ ಫಿನಾಲೆ ತಲುಪಿದ್ದಾರೆ. ವಿಕ್ಕಿ ಹೊರ ಹೋಗಿದ್ದನ್ನು ನೋಡಿ ಅಂಕಿತಾ ಶಾಕ್ ಆದರು.

ಫಿನಾಲೆಗೂ ಮೊದಲೇ ಎಲಿಮಿನೇಟ್ ಆದ ವಿಕ್ಕಿ ಜೈನ್; ಗಳಗಳನೆ ಅತ್ತ ಪತ್ನಿ ಅಂಕಿತಾ
ಅಂಕಿತಾ-ವಿಕ್ಕಿ
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 24, 2024 | 12:22 PM

Share

‘ಬಿಗ್ ಬಾಸ್ ಸೀಸನ್ 17’ರ (Bigg Boss Hindi 17) ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಜನವರಿ 28ರಂದು ಫಿನಾಲೆ ನಡೆಯಲಿದೆ. ಈ ಸೀಸನ್​ನಲ್ಲಿ ಯಾರು ಕಪ್ ಎತ್ತುತ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಇತ್ತೀಚೆಗೆ, ಈ ಶೋನ ಕೊನೆಯ ಎಲಿಮಿನೇಷನ್ ನಡೆದಿದೆ. ಈ ಸುದೀರ್ಘ ಪಯಣದಲ್ಲಿ ವಿಕ್ಕಿ ಜೈನ್ (Vicky Jain) ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ವಿಕ್ಕಿ ಎಲಿಮಿನೇಷನ್ ನಂತರ, ಈಗ ದೊಡ್ಮನೆಯಲ್ಲಿ ಇರೋದು ಐದು ಸ್ಪರ್ಧಿಗಳು ಮಾತ್ರ. ಅವರು ಹೊರಹೋಗುವಾಗ ಅಂಕಿತಾ ಕಣ್ಣೀರು ಹಾಕಿದ್ದಾರೆ.

ಅಂಕಿತಾ ಲೋಖಂಡೆ, ಮುನಾವರ್ ಫಾರೂಕಿ, ಅಭಿಷೇಕ್ ಕುಮಾರ್, ಅರುಣ್ ಮಾಶೆಟ್ಟಿ ಮತ್ತು ಮನ್ನಾರಾ ಚೋಪ್ರಾ ಫಿನಾಲೆ ತಲುಪಿದ್ದಾರೆ. ವಿಕ್ಕಿ ಎಲಿಮಿನೇಷನ್ ನಂತರ ಅಂಕಿತಾ ಕಣ್ಣೀರು ಹಾಕಿದ್ದಾರೆ. ಗ್ರ್ಯಾಂಡ್ ಫಿನಾಲೆಗೆ ಹೋಗುವ ಟಾಪ್ 5 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಬಿಗ್ ಬಾಸ್ ಮನೆಯಲ್ಲಿ ಪ್ರಾರಂಭಿಸಲಾಯಿತು. ಅಭಿಷೇಕ್ ಕುಮಾರ್ ಮೊದಲ ಫೈನಲಿಸ್ಟ್ ಆದರು. ನಂತರ ಮನ್ನಾರಾ ಚೋಪ್ರಾ ಮತ್ತು ಮುನಾವರ್ ಫಾರೂಕಿ ಅವರನ್ನು ಫೈನಲಿಸ್ಟ್‌ಗಳಾಗಿ ಘೋಷಿಸಲಾಯಿತು. ಕೊನೆಯಲ್ಲಿ ವಿಕ್ಕಿ ಔಟ್ ಆದರು.

ಈ ಶೋನಲ್ಲಿ ಭಾಗವಹಿಸಿದ್ದಕ್ಕೆ ಹೇಗನಿಸುತ್ತಿದೆ ಎಂದು ಬಿಗ್ ಬಾಸ್ ಕೇಳಿದರು. ಇದಕ್ಕೆ ಉತ್ತರಿಸಿದ ಅಂಕಿತಾ, ‘ಈ ಪ್ರಯಾಣ ನನಗೆ ತುಂಬಾ ಕಷ್ಟಕರವಾಗಿತ್ತು. ಏಕೆಂದರೆ ನಾನು ಮನೆಯಲ್ಲಿ ಎಲ್ಲರೊಂದಿಗೆ ಜಗಳವಾಡಿದೆ. ನನ್ನ ಗಂಡನೊಂದಿಗೆ ಸೋತಿದ್ದೇನೆ’ ಎಂದರು ಅಂಕಿತಾ. ‘ಬಿಗ್ ಬಾಸ್​ಗೆ ಬಂದ ನಂತರ ಅಂಕಿತಾ ಜೊತೆಗಿನ ಸಂಬಂಧವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ’ ಎಂದು ವಿಕ್ಕಿ ಹೇಳಿದ್ದಾರೆ.

ವಿಕ್ಕಿ ಹೊರ ಹೋಗಿದ್ದನ್ನು ನೋಡಿ ಅಂಕಿತಾ ಶಾಕ್ ಆದರು. ವಿಕ್ಕಿ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಅಪ್ಪಿಕೊಂಡು ಕಣ್ಣೀರಿಟ್ಟರು. ‘ನೀವು ಈ ಆಟವನ್ನು ಚೆನ್ನಾಗಿ ಆಡಿದ್ದೀರಿ. ನೀವು ಯಾವುದೇ ಬೆಂಬಲವಿಲ್ಲದೆ ಇಲ್ಲಿವರೆಗೆ ಬಂದಿದ್ದೀರಿ. ನೀವು ನಿಮ್ಮ ಸ್ವಂತ ಆಟದಲ್ಲಿ ನಿಮ್ಮ ಸ್ಥಾನವನ್ನು ಗಳಿಸಿದ್ದೀರಿ. ನಾನು ನಿಮ್ಮ ಹೆಂಡತಿಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ನಾನು ವಿಕ್ಕಿ ಜೈನ್ ಅವರ ಪತ್ನಿ ಅಂಕಿತಾ ಲೋಖಂಡೆ ಎಂದು ಹೆಮ್ಮೆಯಿಂದ ಹೇಳಬಲ್ಲೆ’ ಎಂದು ಅವರು ಹೇಳಿದ್ದಾರೆ.

ವಿಕ್ಕಿ ಮನೆಯಿಂದ ಹೊರಡುವಾಗಲೂ ಅಂಕಿತಾ ಅಳತೊಡಗಿದರು. ನಂತರ ಅವರನ್ನು ನಗಿಸಲು ವಿಕ್ಕಿ ಪ್ರಯತ್ನಿಸಿದರು. ‘ಈಗ ನಾನು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿ ನನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತೇನೆ’ ಎಂದರು ಅವರು.  ಇದನ್ನು ಕೇಳಿ ಅಂಕಿತಾ ನಕ್ಕರು.

ಇದನ್ನೂ ಓದಿ: ಮದುವೆ ನಿರ್ಧಾರದ ಬಗ್ಗೆ ಬಿಗ್ ಬಾಸ್ ಮನೆಯಲ್ಲೇ ಕಣ್ಣೀರು ಹಾಕಿದ ಅಂಕಿತಾ ಲೋಖಂಡೆ

ಅಂಕಿತಾ ಹಾಗೂ ವಿಕ್ಕಿ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಕಿತ್ತಾಡಿಕೊಂಡರು. ಇಬ್ಬರೂ ವಿಚ್ಛೇದನ ವಿಚಾರಗಳನ್ನು ಕೂಡ ಚರ್ಚೆ ಮಾಡಿದ್ದರು. ಹೊರ ಜಗತ್ತಿನಲ್ಲಿ ಹಾಯಾಗಿ ಇದ್ದ ಈ ದಂಪತಿಯ ಸಂಬಂಧ ಸಾಕಷ್ಟು ಹದಗೆಟ್ಟಂತೆ ಕಂಡು ಬಂದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:15 pm, Wed, 24 January 24

ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು