ಬಿಗ್ ಬಾಸ್ ವಿನ್ನರ್​ಗೆ 50 ಲಕ್ಷ ರೂಪಾಯಿ ಜೊತೆ ಸಿಗಲಿದೆ ಎರಡು ದೊಡ್ಡ ಉಡುಗೊರೆ..

‘ಸೀಸನ್ 10’ ವಿನ್ ಆದ ಸ್ಪರ್ಧಿಗಳಿಗೆ ಬಿಗ್ ಬಾಸ್ ಕಡೆಯಿಂದ ಗಿಫ್ಟ್ ಸಿಗಲಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವವರು ಇತ್ತೀಚೆಗೆ ಘೋಷಣೆ ಮಾಡಿದ್ದರು. ಆ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ವಿನ್ನರ್​ಗೆ 50 ಲಕ್ಷ ರೂಪಾಯಿ ಜೊತೆ ಸಿಗಲಿದೆ ಎರಡು ದೊಡ್ಡ ಉಡುಗೊರೆ..
ಬಿಗ್ ಬಾಸ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 24, 2024 | 8:38 AM

‘ಬಿಗ್ ಬಾಸ್ ಕನ್ನಡ ಸೀಸನ್ 10’  (BBk 10) ಫಿನಾಲೆ ಆರಂಭಕ್ಕೆ ಉಳಿದಿರೋದು ಇನ್ನು ಬೆರಳೆಣಿಕೆ ದಿನ ಮಾತ್ರ. ಸದ್ಯ ಆರು ಸ್ಪರ್ಧಿಗಳು ರೇಸ್​ನಲ್ಲಿ ಇದ್ದಾರೆ. ಇವರ ಪೈಕಿ ಒಬ್ಬರು ರನ್ನರ್​ ಅಪ್ ಆಗಲಿದ್ದು ಮತ್ತೊಬ್ಬರು ಕಪ್ ಎತ್ತುತ್ತಾರೆ. ‘ಬಿಗ್ ಬಾಸ್ ವಿನ್ನರ್​ಗೆ ಈ ಬಾರಿ ಬಂಪರ್ ಆಫರ್ ಸಿಕ್ಕಿದೆ. 50 ಲಕ್ಷ ರೂಪಾಯಿಯ ಜೊತೆಗೆ ಇನ್ನೂ ಎರಡು ಉಡುಗೊರೆ ನೀಡುವುದಾಗಿ ಸುದೀಪ್ ಈ ಮೊದಲೇ ಘೋಷಣೆ ಮಾಡಿದ್ದಾರೆ. ಹಾಗಾದರೆ, ವಿನ್ನರ್ ಹಾಗೂ ರನ್ನರ್​ಅಪ್​ಗೆ ಏನೆಲ್ಲ ಸಿಗುತ್ತಿದೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

ವಾಡಿಕೆಯಂತೆ..

ಪ್ರತಿ ಬಾರಿ ವಿನ್ ಆದವರಿಗೆ 50 ಲಕ್ಷ ರೂಪಾಯಿ ಸಿಗೋದು ವಾಡಿಕೆ. ಈ ಸೀಸನ್​ನ ಆರಂಭದಲ್ಲಿ 50 ಲಕ್ಷ ರೂಪಾಯಿ ಎಂದೇ ನಿಗದಿ ಮಾಡಲಾಗಿತ್ತು. ನಂತರ ಟ್ವಿಸ್ಟ್ ಕೊಟ್ಟು ಈ ಅಮೌಂಟ್​ನ 25 ಲಕ್ಷ ರೂಪಾಯಿಗೆ ತಂದರು. ನಂತರ ನಾನಾ ಟಾಸ್ಕ್​ ನೀಡಿ ಈ ಹಣವನ್ನು ಪಡೆದುಕೊಳ್ಳೋಕೆ ಬಿಗ್ ಬಾಸ್ ಅವಕಾಶ ನೀಡಿದರು. ಎಲ್ಲರೂ ಟಾಸ್ಕ್ ಆಡಿ ಹಣವನ್ನು ಮರಳಿ ತಂದರು. ಹೀಗಾಗಿ, ವಿನ್ ಆದವರಿಗೆ 50 ಲಕ್ಷ ರೂಪಾಯಿ ಸಿಗಲಿದೆ.

ಬೋನಸ್ ಕೂಡ ಸಿಗಲಿದೆ!

ಪ್ರತಿ ಬಾರಿ ಬಿಗ್ ಬಾಸ್ ವಿಜೇತರಿಗೆ 50 ಲಕ್ಷ ರೂಪಾಯಿ ಹಣದ ಜೊತೆ ಮತ್ತೊಂದಷ್ಟು ಗಿಫ್ಟ್ ಸಿಗಲಿದೆ. ಈ ಬಾರಿಯೂ ಅದು ಮುಂದುವರಿದಿದೆ. 50 ಲಕ್ಷ ರೂಪಾಯಿ ಹಣದ ಜೊತೆ ಮಾರುತಿ ಸುಜುಕಿ ಬ್ರೆಜಾ ಕಾರು, ಎಲೆಕ್ಟ್ರಿಕ್ ಸ್ಕೂಟರ್ ಸಿಗಲಿದೆ. ರನ್ನರ್ ಅಪ್​​ಗೂ ಹಣದ ಜೊತೆಗೆ ಎಲೆಕ್ಟ್ರಿಕ್ ಸ್ಕೂಟರ್ ಸಿಗಲಿದೆ ಅನ್ನೋದು ವಿಶೇಷ. ಈ ಬಗ್ಗೆ ಸುದೀಪ್ ಈ ಮೊದಲು ಘೋಷಣೆ ಮಾಡಿದ್ದರು.

ಆರು ಜನರು

ಸದ್ಯ ಬಿಗ್ ಬಾಸ್ ಮನೆಯಲ್ಲಿ ಆರು ಮಂದಿ ಉಳಿದುಕೊಂಡಿದ್ದಾರೆ. ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್ ಮಹೇಶ್, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ಮಧ್ಯೆ ಸ್ಪರ್ಧೆ ಮುಂದುವರಿದಿದೆ. ವಿನಯ್, ಕಾರ್ತಿಕ್, ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಟಾಪ್ ಐದರಲ್ಲಿ ಇರೋದು ಖಚಿತ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಅಸಲಿ ಬಿಗ್ ಬಾಸ್​ನ ನೋಡಬೇಕು’; ವರ್ತೂರು ಸಂತೋಷ್ ಆಸೆ ಕೇಳಿ ಕಂಗಾಲಾದ ಬಿಗ್ ಬಾಸ್

ಫಿನಾಲೆ ಡೇಟ್

ಜನವರಿ 27 ಹಾಗೂ 28ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡೋಕೆ ಅವಕಾಶ ಇದೆ. ಎಲ್ಲರೂ ಫಿನಾಲೆ ಡೇಟ್​ಗೆ ಕಾದಿದ್ದಾರೆ. ಯಾರು ಕಪ್ ಎತ್ತಲಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಲು ಅಭಿಮಾನಿಗಳಲ್ಲು ಕುತೂಹಲ ಮೂಡಿದೆ. ಸೋಶಿಯಲ್ ಮೀಡಿಯಾದಲ್ಲಿ ನಿತ್ಯ ಒಬ್ಬೊಬ್ಬರ ಟ್ರೆಂಡ್ ಮಾಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ