AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿನಾಲೆ ವಾರದಲ್ಲಿ ಇದ್ದಾರೆ ಆರು ಮಂದಿ; ಇವರ ಪ್ಲಸ್ ಏನು, ಮೈನಸ್​ ಏನು?

ಜನವರಿ 27 ಹಾಗೂ 28ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಸದ್ಯ ಆರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಈ ಸ್ಪರ್ಧಿಗಳ ಪ್ಲಸ್ ಏನು, ಮೈನಸ್ ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಫಿನಾಲೆ ವಾರದಲ್ಲಿ ಇದ್ದಾರೆ ಆರು ಮಂದಿ; ಇವರ ಪ್ಲಸ್ ಏನು, ಮೈನಸ್​ ಏನು?
ಫಿನಾಲೆ ವಾರದಲ್ಲಿ ಇದ್ದಾರೆ ಆರು ಮಂದಿ; ಇವರ ಪ್ಲಸ್ ಏನು, ಮೈನಸ್​ ಏನು?
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Jan 23, 2024 | 3:07 PM

Share

ಬಿಗ್ ಬಾಸ್ (Bigg Boss) ಫಿನಾಲೆ ಹಂತಕ್ಕೆ ಬಂದಿದೆ. ಜನವರಿ 27 ಹಾಗೂ 28ರಂದು ‘ಸೀಸನ್ 10’ರ ಫಿನಾಲೆ ನಡೆಯಲಿದೆ. ಈ ಬಾರಿ 100 ದಿನಕ್ಕೂ ಅಧಿಕ ಕಾಲ ಬಿಗ್ ಬಾಸ್ ಪ್ರಸಾರ ಕಂಡಿದೆ. ಈ ಬಾರಿ ಉತ್ತಮ ಟಿಆರ್​ಪಿ ಸಿಗುತ್ತಿದೆ. ಸದ್ಯ ಫಿನಾಲೆ ವೀಕ್​ನಲ್ಲಿ ಆರು ಮಂದಿ ಇದ್ದಾರೆ. ವರ್ತೂರು ಸಂತೋಷ್, ತುಕಾಲಿ ಸಂತೋಷ್, ಕಾರ್ತಿಕ್ ಮಹೇಶ್, ವಿನಯ್ ಗೌಡ, ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಶೃಂಗೇರಿ ರೇಸ್​ನಲ್ಲಿದ್ದಾರೆ. ಈ ಪೈಕಿ ಈ ವಾರದ ಮಧ್ಯದಲ್ಲಿ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಉಳಿದ ಐವರ ಪೈಕಿ ಒಬ್ಬರು ಕಪ್ ಎತ್ತಲಿದ್ದಾರೆ. ಸ್ಪರ್ಧಿಗಳ ಪ್ಲಸ್ ಹಾಗೂ ಮೈನಸ್ ಬಗ್ಗೆ ಇಲ್ಲದೆ ವಿವರ.

ವಿನಯ್ ಗೌಡ

ವಿನಯ್ ಗೌಡ ಅವರು ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಅವರು ಆರಂಭದಲ್ಲಿ ಸಾಕಷ್ಟು ಅಗ್ರೆಸ್ಸಿವ್ ಆಗಿದ್ದರು. ಇದರಿಂದ ಅವರು ಸಾಕಷ್ಟು ಕಳೆದುಕೊಂಡಿದ್ದಾರೆ. ವಿನಯ್ ಕಪ್ ಎತ್ತೋದು ಪಕ್ಕಾ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಬರುಬರುತ್ತಾ ಅವರು ಡಲ್ ಆದರು. ಉಳಿದ ಸ್ಪರ್ಧಿಗಳು ತಮ್ಮ ಆಟವನ್ನು ತೋರಿಸಿದರು. ಕೆಲವು ವಿವಾದಾತ್ಮಕ ಮಾತುಗಳಿಂದ ಅವರ ಮೈಲೇಜ್ ಕಡಿಮೆ ಆಗಿದೆ. ವಿನಯ್ ಗೌಡ ಅವರು ಟಾಸ್ಕ್​ಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗಿದ್ದಾರೆ. ಅವರ ಗ್ರೂಪ್​ನ ಎಲ್ಲರೂ ಎಲಿಮಿನೇಟ್ ಆಗಿದ್ದಾರೆ.

ಕಾರ್ತಿಕ್ ಮಹೇಶ್

ಕಾರ್ತಿಕ್ ಮಹೇಶ್ ಅವರು ಮೊದಲಿನಿಂದಲೂ ಒಳ್ಳೆಯ ಪರ್ಫಾರ್ಮೆನ್ಸ್ ನೀಡುತ್ತಾ ಬರುತ್ತಿದ್ದಾರೆ. ಅವರ ಅಭಿಮಾನಿಬಳಗವೂ ದೊಡ್ಡದಾಗಿದೆ. ಅವರು ಇತ್ತೀಚೆಗೆ ಡಲ್ ಆಗಿದ್ದಾರೆ. ಅದು ಅವರಿಗೆ ಹಿನ್ನಡೆ ಉಂಟು ಮಾಡಿದೆ. ಆಪ್ತರೆನಿಸಿಕೊಂಡಿದ್ದ ತನಿಷಾ ಔಟ್ ಆಗಿದ್ದಾರೆ. ನಮ್ರತಾ ಜೊತೆ ಜಗಳ ಆಗಿತ್ತು. ಸಂಗೀತಾ ಅವರು ಕಾರ್ತಿಕ್​ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದು ಅವರಿಗೆ ಹಿನ್ನಡೆ ಉಂಟು ಮಾಡಿದೆ. ಟಾಸ್ಕ್ ಹಾಗೂ ಮನರಂನೆ ವಿಚಾರದಲ್ಲಿ ಅವರು ಮುಂದಿದ್ದಾರೆ.

ಡ್ರೋನ್ ಪ್ರತಾಪ್

ಬಿಗ್ ಬಾಸ್ ಮನೆ​ಗೆ ಹೋಗುವುದಕ್ಕೂ ಮೊದಲು ಡ್ರೋನ್ ಪ್ರತಾಪ್ ಅವರು ಸಾಕಷ್ಟು ಟ್ರೋಲ್ ಆಗಿದ್ದರು. ಆದರೆ, ಬಿಗ್ ಬಾಸ್​ಗೆ ಹೋದ ಬಳಿಕ ಅವರನ್ನು ನೋಡುವ ದೃಷ್ಟಿ ಬದಲಾಯಿತು. ಅವರಿಗೆ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದೆ. ಕಿಚ್ಚ ಸುದೀಪ್ ಕೂಡ ಪ್ರತಾಪ್​ನ ಹುರಿದುಂಬಿಸಿದ್ದಾರೆ. ಇದರಿಂದ ಅವರ ಆಟದ ಶೈಲಿ ಬದಲಿಸಿಕೊಂಡರು. ಫಿನಾಲೆ ಸಮೀಪೀಸಿದಾಗ ಅವರು ಮತ್ತಷ್ಟು ಚುರುಕಾಗಿದ್ದಾರೆ. ಆಗಾಗ ಡಲ್ ಆಗುತ್ತಾರೆ ಎನ್ನೋದು ಅವರ ಮೈನಸ್ ಪಾಯಿಂಟ್.

ಸಂಗೀತಾ ಶೃಂಗೇರಿ

ಸಂಗೀತಾ ಶೃಂಗೇರಿ ಅವರು ಈ ಸೀಸನ್​ನಲ್ಲಿ ಕಪ್ ಗೆಲ್ಲಬಹುದು ಎಂಬುದು ಅನೇಕರ ಅಭಿಪ್ರಾಯ. ಅವರು ದೊಡ್ಮನೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಖ್ಯಾತಿ ಹೆಚ್ಚಿದೆ. ಇತ್ತೀಚೆಗೆ ‘ವಿಜಯೀಭವ ಸಂಗೀತಾ ಶ್ರಂಗೇರಿ’ ಎಂಬ ಹೆಸರಲ್ಲಿ ಏಳು ಲಕ್ಷ ಟ್ವೀಟ್ ಆಗಿದೆ. ತಮ್ಮ ನಿರ್ಧಾರವನ್ನು ಸಂಗೀತಾ ನೇರವಾಗಿ ಹೇಳುತ್ತಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಟಾಸ್ಕ್​ಗಳನ್ನು ಕೂಡ ಅವರು ಉತ್ತಮವಾಗಿ ಆಡುತ್ತಾರೆ.

ತುಕಾಲಿ ಸಂತೋಷ್

ಕಾಮಿಡಿ ರಿಯಾಲಿಟಿ ಶೋ ಮೂಲಕ ಹೆಸರು ಮಾಡಿದರು ತುಕಾಲಿ ಸಂತೋಷ್. ಬಿಗ್ ಬಾಸ್​ನಲ್ಲಿ ಅವರ ಕಾಮಿಡಿ ಎಲ್ಲರಿಗೂ ನೋವು ತರಿಸಿತು. ಇದರಿಂದ ಸುದೀಪ್ ಬಳಿ ಅವರು ಪಾಠ ಹೇಳಿಸಿಕೊಳ್ಳಬೇಕಾಯಿತು. ಆ ಬಳಿಕ ಅವರು ತಮ್ಮ ಆಟದ ಶೈಲಿ ಬದಲಿಸಿಕೊಂಡರು. ಈಗ ಅವರು ಫಿನಾಲೆ ವೀಕ್​ ತಲುಪಿದ್ದಾರೆ. ತುಕಾಲಿ ಸಂತೋಷ್ ಅವರು ಪಿಟಿಂಗ್ ಇಡುತ್ತಾರೆ ಅನ್ನೋದು ಅನೇಕರ ಆರೋಪ.

ಇದನ್ನೂ ಓದಿ: ‘ಅಸಲಿ ಬಿಗ್ ಬಾಸ್​ನ ನೋಡಬೇಕು’; ವರ್ತೂರು ಸಂತೋಷ್ ಆಸೆ ಕೇಳಿ ಕಂಗಾಲಾದ ಬಿಗ್ ಬಾಸ್

ವರ್ತೂರು ಸಂತೋಷ್

ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲಿ ಸಖತ್ ಡಲ್ ಆಗಿದ್ದರು ವರ್ತೂರು ಸಂತೋಷ್. ಅವರು ಹುಲಿ ಉಗುರು ಪ್ರಕರಣದಲ್ಲಿ ಅರೆಸ್ಟ್ ಆದರು. ಒಂದು ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಇದ್ದ ಅವರು ಮತ್ತೆ ಬಿಗ್ ಬಾಸ್​​ಗೆ ಬಂದರು. ವರ್ತೂರು ಸಂತೋಷ್ ಅವರು ಟಾಸ್ಕ್​ ವಿಚಾರ ಬಂದಾಗ ಹಿಂದೇಟು ಹಾಕುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:06 pm, Tue, 23 January 24