‘ವಿಜಯೀಭವ ಸಂಗೀತಾ ಶೃಂಗೇರಿ’ ಟ್ರೆಂಡ್​​ನಲ್ಲಿ ಎಲ್ಲಾ ದಾಖಲೆಗಳು ಉಡೀಸ್; ಏಳು ಲಕ್ಷ ಟ್ವೀಟ್​

ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಜರ್ನಿಯಲ್ಲಿ ಸಾಕಷ್ಟು ಏರಿಳಿತ ಕಂಡರು. ಅವರು ಇತ್ತೀಚೆಗೆ ಸಾಕಷ್ಟು ಸ್ಟ್ರಾಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ಮಾತಿಗೆ ಸ್ಟ್ಯಾಂಡ್ ಆಗುತ್ತಾರೆ. ಇದು ಸಾಕಷ್ಟು ಜನರಿಗೆ ಇಷ್ಟ ಆಗಿದೆ.

‘ವಿಜಯೀಭವ ಸಂಗೀತಾ ಶೃಂಗೇರಿ’ ಟ್ರೆಂಡ್​​ನಲ್ಲಿ ಎಲ್ಲಾ ದಾಖಲೆಗಳು ಉಡೀಸ್; ಏಳು ಲಕ್ಷ ಟ್ವೀಟ್​
ಸಂಗೀತಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jan 22, 2024 | 9:41 AM

ಸಂಗೀತಾ ಶೃಂಗೇರಿ (Sangeetha Sringeri) ಅವರು ಈ ಬಾರಿ ಕಪ್ ಗೆಲ್ಲಬೇಕು ಎಂಬುದು ಅನೇಕರ ಕೋರಿಕೆ. ಈ ಕೋರಿಕೆ ಈಡೇರುವ ಲಕ್ಷಣ ಗೋಚರವಾಗಿದೆ. ಟ್ವಿಟರ್​ನಲ್ಲಿ ಸಂಗೀತಾ ಶೃಂಗೇರಿ ಬಗ್ಗೆ ಆದ ಟ್ವೀಟ್​ಗಳೇ ಇದಕ್ಕೆ ಸಾಕ್ಷಿ. ‘ವಿಜಯೀಭವ ಸಂಗೀತಾ ಶೃಂಗೇರಿ’ ಅನ್ನೋದು ಒಂದಲ್ಲ, ಎರಡಲ್ಲ ಬರೋಬ್ಬರಿ 7 ಲಕ್ಷ ಬಾರಿ ಟ್ವೀಟ್ ಆಗಿದೆ. ಕನ್ನಡ ಬಿಗ್ ಬಾಸ್ ಸ್ಪರ್ಧಿಗಳ ಪೈಕಿ ಈ ಮಟ್ಟಿಗೆ ಟ್ವೀಟ್ ಆಗಿದ್ದು ಸಂಗೀತಾ ಹೆಸರಲ್ಲಿ ಮಾತ್ರ. ಇದನ್ನು ಸಹಿಸದ ಕೆಲವರು ‘ಹಣ ಕೊಟ್ಟು ಮಾಡಿಸಲಾಗಿದೆ’ ಎಂಬ ಆರೋಪವನ್ನು ಮಾಡುತ್ತಿದ್ದಾರೆ.

ಭಾನುವಾರ (ಜನವರಿ 21) ಬೆಳಿಗ್ಗೆ 9 ಗಂಟೆಗೆ ‘VIJAYIBHAVA SANGEETHA SRINGERI’ ಎಂದು ಟ್ವೀಟ್ ಮಾಡೋಕೆ ಆರಂಭಿಸಿದರು. ಈ ಟ್ರೆಂಡ್ ಜೋರಾಯಿತು. ರಾತ್ರಿ ವೇಳೆಗೆ 4 ಲಕ್ಷ ಟ್ವೀಟ್ ಆಗಿತ್ತು. ಮಧ್ಯರಾತ್ರಿ ವೇಳೆಗೆ ಈ ಸಂಖ್ಯೆ 6.68 ಲಕ್ಷ ತಲುಪಿತ್ತು. ಈ ಮೂಲಕ ಅವರು ಎಲ್ಲಾ ದಾಖಲೆ ಉಡೀಸ್ ಮಾಡಿದ್ದಾರೆ.

ಕಳೆದ ಸೀಸನ್ ವಿನ್ನರ್ ರೂಪೇಶ್ ಶೆಟ್ಟಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿತ್ತು. ಅವರು 4+ ಲಕ್ಷ ಟ್ವೀಟ್ ಪಡೆದು ಮೊದಲಿದ್ದರು. ಎರಡನೇ ಸ್ಥಾನದಲ್ಲಿ ಡ್ರೋನ್ ಪ್ರತಾಪ್ ಇದ್ದರು. ಮೂರನೇ ಸ್ಥಾನದಲ್ಲಿ ರಾಕೇಶ್ ಅಡಿಗ ಇದ್ದರು. ಈಗ ಇವರೆಲ್ಲ ದಾಖಲೆಯನ್ನು ಮುರಿದು ಸಂಗೀತಾ ಮುಂದೆ ಸಾಗಿದ್ದಾರೆ. ಅವರಿಗೆ ಎಷ್ಟು ದೊಡ್ಡ ಅಭಿಮಾನ ಬಳಗ ಸೃಷ್ಟಿ ಆಗಿದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಸಂಗೀತಾ ಕಪ್ ಗೆಲ್ಲಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ.

ಸಂಗೀತಾ ಶೃಂಗೇರಿ ಅವರು ಈಗಾಗಲೇ ಬಿಗ್ ಬಾಸ್ ಫಿನಾಲೆ ಟಿಕೆಟ್ ಪಡೆದು ಫಿನಾಲೆ ವೀಕ್ ತಲುಪಿದ್ದಾರೆ. ಟಾಪ್ ಆರರಲ್ಲಿ ಅವರ ಹೆಸರು ನೋಂದಣಿ ಆಗಿದೆ. ತುಕಾಲಿ ಸಂತೋಷ್, ವರ್ತೂರು ಸಂತೋಷ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಟಾಪ್ ಐದರ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಈ ವಾರದ ಮಧ್ಯದಲ್ಲಿ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ.

ಇದನ್ನೂ ಓದಿ: ‘ವಿಜಯೀ ಭವ ಸಂಗೀತಾ ಶೃಂಗೇರಿ’; ಭಾರತದ ಟ್ರೆಂಡ್​ನಲ್ಲಿ ಬಂತು ಹೆಸರು

ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಜರ್ನಿಯಲ್ಲಿ ಸಾಕಷ್ಟು ಏರಿಳಿತ ಕಂಡರು. ಅವರು ಇತ್ತೀಚೆಗೆ ಸಾಕಷ್ಟು ಸ್ಟ್ರಾಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ಮಾತಿಗೆ ಸ್ಟ್ಯಾಂಡ್ ಆಗುತ್ತಾರೆ. ಇದು ಸಾಕಷ್ಟು ಜನರಿಗೆ ಇಷ್ಟ ಆಗಿದೆ. ಸಂಗೀತಾ ಶೃಂಗೇರಿ ಕಣ್ಣಿಗೆ ಹಾನಿ ಆಗಿತ್ತು. ಇದರಿಂದ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:24 am, Mon, 22 January 24

ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್