AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನಷ್ಟು ಕಿರಿದಾಯ್ತು ಮನೆ, ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟವರಿಗೆ ಟ್ವಿಸ್ಟ್ ಕೊಟ್ಟ ಸುದೀಪ್

Bigg Boss Kannada: ಫಿನಾಲೆಗೆ ಇನ್ನೊಂದು ವಾರ ಇರುವಾಗ ನಮ್ರತಾ ಎಲಿಮಿನೇಟ್ ಆಗಿದ್ದಾರೆ. ಫಿನಾಲೆ ವಾರಕ್ಕೆ ಆರು ಮಂದಿ ಎಂಟ್ರಿ ನೀಡಿದ್ದು, ಎಲ್ಲರಿಗೂ ಒಂದು ಎಚ್ಚರಿಕೆ ನೀಡಿದ್ದಾರೆ ಸುದೀಪ್.

ಇನ್ನಷ್ಟು ಕಿರಿದಾಯ್ತು ಮನೆ, ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟವರಿಗೆ ಟ್ವಿಸ್ಟ್ ಕೊಟ್ಟ ಸುದೀಪ್
ಮಂಜುನಾಥ ಸಿ.
|

Updated on: Jan 21, 2024 | 11:16 PM

Share

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಫಿನಾಲೆಗೆ ಇನ್ನು ಒಂದು ವಾರವಷ್ಟೆ ಉಳಿದಿದೆ. ಈ ವಾರ ಸುದೀಪ್ ಅವರು ಈ ಸೀಸನ್​ನ ಕೊನೆಯ ವಾರಾಂತ್ಯದ ಪಂಚಾಯಿತಿ ನಡೆಸಿಕೊಟ್ಟರು. ಕೊನೆಯ ವೀಕೆಂಡ್ ಎಲಿಮಿನೇಷನ್ ಸಹ ಮಾಡಿದರು. ವರ್ತೂರು ಸಂತೋಷ್, ತುಕಾಲಿ ಸಂತೋಷ್ ಹಾಗೂ ಸಂಗೀತಾ ಈಗಾಗಲೇ ಬಿಗ್​ಬಾಸ್ ಫಿನಾಲೆ ವಾರ ತಲುಪಿದ್ದರು. ವಿನಯ್, ಕಾರ್ತಿಕ್, ನಮ್ರತಾ ಹಾಗೂ ಡ್ರೋನ್ ಪ್ರತಾಪ್ ಅವರುಗಳು ನಾಮಿನೇಷನ್ ಅಲ್ಲಿ ಉಳಿದುಕೊಂಡಿದ್ದರು.

ಪ್ರತಿಬಾರಿಯಂತೆ ಸುದೀಪ್ ನಗು-ನಗುತ್ತಾ ಆರಂಭ ಮಾಡಿದರಾದರೂ ಆರಂಭದಲ್ಲಿಯೇ ಇಲ್ಲಿಂದ ಹೊರಗೆ ಹೋಗುವವರು ಅಸಮರ್ಥರಲ್ಲ, ಆಟ ಈ ಹಂತಕ್ಕೆ ಬಂದಾಗ ಯಾರನ್ನಾದರೂ ಮನೆಯಿಂದ ಹೊರಗೆ ಕಳಿಸುವುದು ಬಹಳ ಕಷ್ಟದ ಕೆಲಸ, ನನಗೂ ಸಹ ಇದು ಕಷ್ಟದ ಕೆಲಸ, ನೋವಿನ ಕೆಲಸ, ಪ್ರತಿ ವರ್ಷವೂ ನನಗೆ ಅದು ಅನುಭವಕ್ಕೆ ಬರುತ್ತದೆ ಎಂದರು.

ಮೊದಲಿಗೆ ವಿನಯ್​ ಸೇಫ್ ಆದರು. ಆ ಮೂಲಕ ವಿನಯ್ ಫಿನಾಲೆ ವಾರಕ್ಕೆ ಎಂಟ್ರಿ ನೀಡಿದರು. ಅದಾದ ಬಳಿಕ ಡ್ರೋನ್ ಪ್ರತಾಪ್, ಕಾರ್ತಿಕ್ ಮತ್ತು ನಮ್ರತಾ ಉಳಿದುಕೊಂಡರು. ಈ ಮನೆಯಲ್ಲಿ ಯಾರು ಉಳಿದುಕೊಳ್ಳಬೇಕು ಎಂದು ಕೇಳಿದಾಗ ಹೆಚ್ಚು ಮತಗಳು ನಮ್ರತಾ ಹಾಗೂ ಕಾರ್ತಿಕ್​ಗೆ ಬಿದ್ದವು. ಆದರೆ ಉಳಿದುಕೊಂಡಿದ್ದು ಡ್ರೋನ್ ಪ್ರತಾಪ್. ಆ ಮೂಲಕ ಪ್ರತಾಪ್ ಸಹ ಫಿನಾಲೆ ವಾರಕ್ಕೆ ಎಂಟ್ರಿ ನೀಡಿದರು.

ಇದನ್ನೂ ಓದಿ:ಈ ಸೀಸನ್​ನಲ್ಲಿ ಬಿಗ್​ಬಾಸ್ ಮನೆಗೆ ಬಂದ ಅತಿಥಿಗಳ್ಯಾರು? ಇಲ್ಲಿದೆ ಪಟ್ಟಿ

ಕೊನೆಗೆ ಉಳಿದಿದ್ದು ನಮ್ರತಾ ಹಾಗೂ ಕಾರ್ತಿಕ್. ಇಬ್ಬರೂ ಸಹ ಮನೆಯ ಗಟ್ಟಿ ಸ್ಪರ್ಧಿಗಳು ಆದರೆ ಈ ವಾರ ಉಳಿದುಕೊಂಡಿದ್ದು ಕಾರ್ತಿಕ್. ಚೆನ್ನಾಗಿ ಆಡಿದ್ದ, ಆಡುತ್ತಾ ಬಂದಿದ್ದ ನಮ್ರತಾ ಫಿನಾಲೆಗೆ ಒಂದು ವಾರ ಇರುವಾಗ ಮನೆಯಿಂದ ಹೊರಗೆ ಹೋದರು. ಅಲ್ಲಿಗೆ ಫಿನಾಲೆ ವಾರಕ್ಕೆ ಸಂಗೀತಾ, ಪ್ರತಾಪ್, ವಿನಯ್, ತುಕಾಲಿ ಸಂತು, ವರ್ತೂರು ಸಂತು ಹಾಗೂ ಕಾರ್ತಿಕ್ ಒಟ್ಟು ಆರು ಜನ ಬಂದರು.

ಸಾಮಾನ್ಯವಾಗಿ ಫಿನಾಲೆ ವಾರಕ್ಕೆ ಐದು ಜನ ಬರುವುದು ವಾಡಿಕೆ. ಬಿಗ್​ಬಾಸ್​ನ ಟಾಪ್ ಐದು ಜನರಿಗೆ ಹೆಚ್ಚು ಮಹತ್ವ. ಆದರೆ ಕೊನೆಯ ವಾರದಲ್ಲಿ ಈ ಆರು ಜನ ಉಳಿದಿದ್ದಾರೆ. ಈ ಬಗ್ಗೆ ಮಾತನಾಡಿದ ಸುದೀಪ್, ಕೊನೆಯ ವಾರ ಆರು ಜನ ಮನೆಯಲ್ಲಿದ್ದೀರಿ ಆದರೆ ಈ ವಾರದಲ್ಲಿ ಯಾರಾದರೂ ಒಬ್ಬರು ಎಲಿಮಿನೇಟ್ ಆಗಬಹುದು. ಅದು ಫಿನಾಲೆ ಟಿಕೆಟ್ ಪಡೆದಿರುವ ಸಂಗೀತಾ ಸೇರಿದಂತೆ, ಈಗ ಸೇಫ್ ಆಗಿರುವ ಡ್ರೋನ್ ಪ್ರತಾಪ್, ಕಾರ್ತಿಕ್ ಸೇರಿದಂತೆ ಒಟ್ಟಾರೆ ಮನೆಯಲ್ಲಿರುವ ಆರು ಮಂದಿಯಲ್ಲಿ ಒಬ್ಬರು ಎಲಿಮಿನೇಟ್ ಆಗಬಹುದು ಎಂದರು.

ಅಲ್ಲಿಗೆ ಕಳೆದ ವಾರ ತನಿಷಾ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಮನೆಯಿಂದ ಹೊರಗೆ ಹೋದಂತೆ ಈ ವಾರವೂ ಸಹ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಅದಾದ ಬಳಿಕ ಮುಂದಿನ ವಾರ ಫಿನಾಲೆ ಶುರುವಾದಾಗ ಮೊದಲಿಗೆ ಒಬ್ಬರನ್ನು ಹೊರಗೆ ಕರೆಸಿ ಆ ನಂತರ ಫಿನಾಲೆಗೆ ಚಾಲನೆ ನೀಡಲಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು