‘ವಿಜಯೀ ಭವ ಸಂಗೀತಾ ಶೃಂಗೇರಿ’; ಭಾರತದ ಟ್ರೆಂಡ್​ನಲ್ಲಿ ಬಂತು ಹೆಸರು

VIJAYIBHAVA SANGEETHA SRINGERI: ಸಂಗಿತಾ ಫಿನಾಲೆ ತಲುಪಿದ್ದಾರೆ. ಈ ಸಂದರ್ಭದಲ್ಲಿ ಸಂಗೀತಾ ಅವರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಅವರು ಬ್ಯಾಕ್ ಟು ಬ್ಯಾಕ್ ಎರಡು ಬಾರಿ ಕ್ಯಾಪ್ಟನ್ ಆಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಫ್ಯಾನ್ಸ್​ನಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ

‘ವಿಜಯೀ ಭವ ಸಂಗೀತಾ ಶೃಂಗೇರಿ’; ಭಾರತದ ಟ್ರೆಂಡ್​ನಲ್ಲಿ ಬಂತು ಹೆಸರು
ಸಂಗೀತಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jan 22, 2024 | 5:44 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಫಿನಾಲೆ ಟಿಕೆಟ್ ಪಡೆದಿರೋ ಸಂಗೀತಾ ಶೃಂಗೇರಿ (Sangeetha Sringeri) ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದು ಪದೇ ಪದೇ ಸಾಬೀತಾಗುತ್ತಿದೆ. ಸಂಗೀತಾ ಶೃಂಗೇರಿ ಅವರು ದೊಡ್ಮನೆಯಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಆರಂಭದಲ್ಲಿ ಕಾರ್ತಿಕ್ ಅವರಿಂದ ದೂರ ಆದರು. ನಂತರ ವಿನಯ್ ಜೊತೆ ಸೇರಿ ಟ್ರೋಲ್ ಆದರು. ಎಲ್ಲಕ್ಕಿಂತ ಮುಖ್ಯವಾಗಿ ಟಾಸ್ಕ್ ಆಡುವಾಗ ಅವರ ಕಣ್ಣಿಗೆ ಹಾನಿ ಉಂಟಾಯಿತು. ಇದರಿಂದ ಅವರು ಹಿಂಜರಿಯಲಿಲ್ಲ. ಈಗ ಅವರ ಹೆಸರು ಟ್ವಿಟರ್​ನಲ್ಲಿ ಟ್ರೆಂಡ್ ಆಗಿದೆ.

ಸಂಗಿತಾ ಫಿನಾಲೆ ತಲುಪಿದ್ದಾರೆ. ಈ ಸಂದರ್ಭದಲ್ಲಿ ಸಂಗೀತಾ ಅವರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಅವರು ಬ್ಯಾಕ್ ಟು ಬ್ಯಾಕ್ ಎರಡು ಬಾರಿ ಕ್ಯಾಪ್ಟನ್ ಆಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಫ್ಯಾನ್ಸ್​ನಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇಡೀ ಜರ್ನಿಯನ್ನು ಗಮನಿಸಿ ಸುದೀಪ್ ಅವರು ಸಂಗೀತಾ ಹಾಗೂ ವಿನಯ್​ಗೆ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ‘ನೀವಿಬ್ಬರು ಇಲ್ಲದೆ ಇದ್ದರೆ ಬಿಗ್ ಬಾಸ್​ನ ಈ ಜರ್ನಿ ಅಪೂರ್ಣ ಆಗುತ್ತಿತ್ತು’ ಎಂದು ಸುದೀಪ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ಸಂಗೀತಾ ಜರ್ನಿಗೆ ಮತ್ತಷ್ಟು ಬೂಸ್ಟ್ ನೀಡಿದೆ.

ಇದನ್ನೂ ಓದಿ: ಫಿನಾಲೆ ವಾರ ತಲುಪಿದ ವರ್ತೂರು ಸಂತೋಷ್​; ಟ್ರೋಫಿಗಾಗಿ ಸಂಗೀತಾ, ತುಕಾಲಿ ಜತೆ ಪೈಪೋಟಿ

ಹೊರಗಿನಿಂದ ಸಂಗೀತಾ ಅವರನ್ನು ಬೆಂಬಲಿಸೋ ಕಾರ್ಯ ನಡೆಯುತ್ತಿದೆ. ಎಲ್ಲರೂ ಸಂಗೀತಾ ಪರ ಟ್ವಿಟರ್​ನಲ್ಲಿ ಟ್ವೀಟ್ ಮಾಡುತ್ತಿದ್ದಾರೆ. ‘VIJAYIBHAVA SANGEETHA SRINGERI’ ಎಂದು ಟ್ವೀಟ್ ಮಾಡಲಾಗುತ್ತಿದೆ. ಕೆಲವೇ ಗಂಟೆಗಳಲ್ಲಿ ಬರೋಬ್ಬರಿ 2 ಲಕ್ಷ ಟ್ವೀಟ್ ಆಗಿದೆ. ಭಾರತದ ಟ್ರೆಂಡ್​​ನಲ್ಲಿ ಅವರ ಹೆಸರು ಐದನೇ ಸ್ಥಾನದಲ್ಲಿದೆ. ಈ ಮೊದಲು ರೂಪೇಶ್ ಶೆಟ್ಟಿ (ಬಿಗ್ ಬಾಸ್ ಸೀಸನ್ 9ರ ವಿಜೇತ), ಕಾರ್ತಿಕ್ ಮಹೇಶ್ ಹಾಗೂ ಡ್ರೋನ್ ಪ್ರತಾಪ್ ಹೆಸರು ಟಾಪ್ ಸ್ಥಾನದಲ್ಲಿ ಇವೆ. ಈ ಮೂಲಕ ಅವರು ದಾಖಲೆ ಮಾಡಿದ್ದಾರೆ. ಅವರ ಹೆಸರನ್ನು ಸಂಗೀತಾ ಮುರಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಸಂಗೀತಾ ಶೃಂಗೇರಿ ಪ್ಲಸ್ ಪಾಯಿಂಟ್ಸ್

  1. ಸಂಗೀತಾ ಶೃಂಗೇರಿ ಗ್ರಾಫ್ ಮೊದಲಿನಿಂದಲೂ ಏರುತ್ತಲೇ ಬರುತ್ತಿದೆ. ಇದು ಅನೇಕರಿಗೆ ಇಷ್ಟವಾಗಿದೆ. ಈ ಕಾರಣದಿಂದಲೇ ಅವರ ಅಭಿಮಾನಿ ಬಳಗ ಹಿರಿದಾಗಿದೆ.
  2. ಸಂಗೀತಾ ಶೃಂಗೇರಿ ಅವರು ಎಲ್ಲಿ ಯಾವುದೇ ಮಾತನ್ನು ಹೇಳಿದರೆ ಆ ಮಾತಿಗೆ ಬದ್ಧವಾಗುತ್ತಾರೆ. ಈ ಮೊದಲು ಕಾರ್ತಿಕ್ ಅವರಿಗೆ ಬಕೆಟ್ ಶಬ್ದ ಬಳಕೆ ಮಾಡಿದ್ದರು. ಇದನ್ನು ಅವರು ಖಂಡಿಸಿದ್ದರು. ಆದಾಗ್ಯೂ ಅದಕ್ಕೆ ಸ್ಪಷ್ಟನೆ ನೀಡಿ ತಮ್ಮ ಮಾತಿಗೆ ಸ್ಟ್ಯಾಂಡ್ ಆದರು.
  3. ಸಂಗೀತಾ ಶೃಂಗೇರಿ ಅವರು ವೈಯಕ್ತಿಕ ಆಟ ತೋರಿಸುತ್ತಿದ್ದಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಿದ್ದಾರೆ. ಅವರು ಯಾರದ್ದೋ ನೆರಳಾಗಿ ಕಾಣಿಸಿಕೊಳ್ಳಲಿಲ್ಲ.
  4. ಟಾಸ್ಕ್​ ವಿಚಾರ ಬಂದಾಗ ಅನೇಕ ಟಾಸ್ಕ್​ಗಳನ್ನು ಅವರು ಗೆದ್ದಿದ್ದಾರೆ. ಈ ಕಾರಣಕ್ಕೆ ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ.
  5. ಸಂಗೀತಾ ಯಾರಿಗೂ ಅಂಜಿದವರಲ್ಲ. ಎದುರಾಳಿ ಎಷ್ಟೇ ಸ್ಟ್ರಾಂಗ್ ಆಗಿದ್ದರೂ ಅವರನ್ನು ಹೆದರಿಸೋ ಕೆಲಸ ಮಾಡುತ್ತಾರೆ.ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:48 pm, Sun, 21 January 24

ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ