AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನಿಷಾ ಬಿಗ್​ಬಾಸ್ ಪ್ರಯಾಣ ಅಂತ್ಯ, ಬಿಗ್​ಬಾಸ್​ಗೆ ಕೇಳಿದರು ಪ್ರಶ್ನೆ

Tanisha Kuppanda: ಬಿಗ್​ಬಾಸ್​ ಮನೆಯಲ್ಲಿ ವಾರದ ಮಧ್ಯದಲ್ಲಿ ಅಚ್ಚರಿಯ ಎಲಿಮಿನೇಷನ್ ಆಗಿದೆ. ತನಿಷಾ ಕುಪ್ಪಂಡ ಮನೆಯಿಂದ ಹೊರಗೆ ಹೋಗಿದ್ದಾರೆ. ಹೊರಗೆ ಹೋಗುವಾಗ ಬಿಗ್​ಬಾಸ್​ಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ.

ತನಿಷಾ ಬಿಗ್​ಬಾಸ್ ಪ್ರಯಾಣ ಅಂತ್ಯ, ಬಿಗ್​ಬಾಸ್​ಗೆ ಕೇಳಿದರು ಪ್ರಶ್ನೆ
ಮಂಜುನಾಥ ಸಿ.
|

Updated on: Jan 18, 2024 | 11:32 PM

Share

ಬಿಗ್​ಬಾಸ್ (BiggBoss) ಮನೆಯೇ ಹೀಗೆ, ಇಲ್ಲಿ ನಿರೀಕ್ಷಿಸಿದ್ದು ನಡೆಯುವುದು ಕಡಿಮೆ, ನಿರೀಕ್ಷಿಸದೇ ಇರುವುದು ನಡೆಯುವುದೇ ಹೆಚ್ಚು. ಕಳೆದ ವಾರ ಸುದೀಪ್ ಅವರು ಯಾರನ್ನೂ ಎಲಿಮಿನೇಟ್ ಮಾಡಿರಲಿಲ್ಲ. ಮನೆಯ ಎಲ್ಲ ಸದಸ್ಯರು ಇದರಿಂದ ಖುಷಿಯಾಗಿದ್ದರು. ಆದರೆ ಸುದೀಪ್, ಸಣ್ಣ ಸುಳಿವೊಂದನ್ನು ಮೊದಲೇ ಕೊಟ್ಟಿದ್ದರು. ಮುಂದಿನ ದಿನಗಳಲ್ಲಿ ಏನಾಗುತ್ತದೆಯೋ ನೋಡೋಣ ಎಂದು. ಅದರಂತೆ ವಾರದ ಮಧ್ಯಭಾಗದಲ್ಲಿ ಯಾರೂ ನಿರೀಕ್ಷಿಸದ ಎಲಿಮಿನೇಷನ್ ಆಗಿದೆ. ತನಿಷಾ ಕುಪ್ಪಂಡ ಮನೆಯಿಂದ ಹೊರಗೆ ಹೋಗಿದ್ದಾರೆ.

ಕಳೆದ ವಾರ ನಾಮಿನೇಟ್ ಆಗಿದ್ದವರ ನಾಮಿನೇಷನ್​ ಅನ್ನು ಮುಂದುವರೆಸಿದ ಬಿಗ್​ಬಾಸ್ ಅದರ ಆಧಾರದಲ್ಲಿ ಮಧ್ಯವಾರದಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಿದರು. ಮನೆಗೆ ಬಂದಿದ್ದ ಹಳೆಯ ಸ್ಪರ್ಧಿಗಳನ್ನೆಲ್ಲ ಹೊರಗೆ ಕಳಿಸಿದ ಬಳಿಕ ಎಲಿಮಿನೇಷನ್ ಪ್ರಕ್ರಿಯೆಗೆ ಚಾಲನೆ ನೀಡಲಾಯ್ತು.

ಈಗಾಗಲೇ ಫಿನಾಲೆ ತಲುಪಿರುವ ಸಂಗೀತಾ, ನಾಮಿನೇಷನ್​ನಿಂದ ಪಾರಾಗಿರುವ ಪ್ರತಾಪ್ ಅನ್ನು ಪಕ್ಕದಲ್ಲಿ ನಿಲ್ಲುವಂತೆ ಮಾಡಿದ ಬಿಗ್​ಬಾಸ್, ನಾಮಿನೇಷನ್​ನಲ್ಲಿದ್ದ ವಿನಯ್, ಕಾರ್ತಿಕ್, ನಮ್ರತಾ, ತನಿಷಾ, ವರ್ತೂರು ಸಂತು, ತುಕಾಲಿ ಸಂತು ಅವರನ್ನು ಒಂದೇ ಸಾಲಿನಲ್ಲಿ ನಿಲ್ಲುವಂತೆ ಮಾಡಿದರು. ಯಾರು ಸೇಫ್ ಆಗುತ್ತಾರೊ ಅವರನ್ನು ಹೊರತುಪಡಿಸಿ ಉಳಿದವರನ್ನು ಮುಂದೆ ಕರೆದರು. ಮೊದಲು ವಿನಯ್, ಬಳಿಕ ವರ್ತೂರು, ಬಳಿಕ ನಮ್ರತಾ ಸೇಫ್ ಆದರು.

ಕೊನೆಗೆ ಕಾರ್ತಿಕ್, ತನಿಷಾ ಹಾಗೂ ತುಕಾಲಿ ಸಾಲಿನಲ್ಲಿ ಉಳಿದುಕೊಂಡರು. ಆಗಲೇ ಮನೆಯ ಬಾಗಲು ಸಹ ತೆಗೆಯಿತು. ಆಗ ತನಿಷಾ ನಿಮ್ಮ ಪಯಣ ಇಲ್ಲಿಗೆ ಮುಗಿಯಿತು ಎಂದರು ಬಿಗ್​ಬಾಸ್. ಆಗಷ್ಟೆ, ನಾನು ಹೊರಗೆ ಹೋಗುವುದಿಲ್ಲ, ನಾನು ಫಿನಾಲೆ ವರೆಗೆ ಉಳಿಯುತ್ತೇನೆ ಎಂದು ಕಾನ್ಫಿಡೆನ್ಸ್​ನಿಂದ ಹೇಳಿದ್ದ ತನಿಷಾ, ಬಿಗ್​ಬಾಸ್​ನ ಮಾತು ಕೇಳಿ ತೀವ್ರ ಶಾಕ್​ಗೆ ಒಳಗಾದರು. ತಮ್ಮನ್ನು ನಾಮಿನೇಟ್ ಮಾಡಿದ ಕಾರ್ತಿಕ್​ಗೆ ತಣ್ಣಗೆ ಧನ್ಯವಾದ ಹೇಳಿದರು.

ಇದನ್ನೂ ಓದಿ:ಬಿಗ್​ಬಾಸ್ ತಮಿಳು ವಿನ್ನರ್​ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್​ಗೆ ಸಿಕ್ಕಿದ್ದೆಷ್ಟು?

ಗಳ-ಗಳನೆ ಅಳಲು ಪ್ರಾರಂಭಿಸಿದ ತನಿಷಾ, ‘ಯಾಕೆ ಬಿಗ್​ಬಾಸ್ ನನ್ನನ್ನು ಇಷ್ಟು ಕೆಟ್ಟದಾಗಿ ಕರೆಸಿಕೊಳ್ಳುತ್ತಿದ್ದೀರ? ನಾನು ಏನು ತಪ್ಪು ಮಾಡಿದೆ? ಬರುವಾಗಲೂ ಕೆಟ್ಟದಾಗಿ ಬಂದೆ, ಹೋಗುವಾಗಲು ಯಾಕೆ ಈ ಶಿಕ್ಷೆ ಕೊಟ್ಟಿರಿ?’ ಎಂದು ಪ್ರಶ್ನೆ ಮಾಡಿದರು. ತಮ್ಮನ್ನು ತಾವು ಸಾವರಿಸಿಕೊಂಡರಾದರೂ ಮನೆಯವರ ಬಗ್ಗೆ ‘ನಿಮಗೆಲ್ಲ ನನ್ನ ಧ್ವನಿ ಕೇಳಿದರೆ ಇರಿಟೇಶನ್ ಆಗುತ್ತಿತ್ತಲ್ಲ ಇನ್ನು ಮುಂದೆ ಹಾಗಾಗುವುದಿಲ್ಲ ಬಿಡಿ. ಎಲ್ಲರೂ ನೆಮ್ಮದಿಯಿಂದ ಇರಿ’ ಎಂದರು.

ಸಂಗೀತಾಗೆ ‘ಗೌರವ ಕೊಡುವುದನ್ನು ಶೃಂಗೇರಿಗೆ ಹೋಗಿ ಕಲಿತುಕೊಂಡು ಬರುತ್ತೀನಿ’ ಎಂದು ಟಾಂಟ್ ನೀಡಿದರು. ಕಾರ್ತಿಕ್​ಗೆ, ಎಲ್ಲರೂ ನಾಮಿನೇಟ್ ಮಾಡಿದಾಗ ನಾನು ಹೊರಗೆ ಹೋಗಲಿಲ್ಲ, ನೀನು ನಾಮಿನೇಟ್ ಮಾಡಿದಾಗ ನಾನು ಹೊರಗೆ ಹೋಗುತ್ತಿದ್ದೇನೆ’ ಎಂದರು. ತುಕಾಲಿ ಹಾಗೂ ವರ್ತೂರು ಸಂತುಗೆ ನೀವು ಗೆದ್ದು ಬನ್ನಿ, ನಾನು ನೋವಿನಲ್ಲಿದ್ದಾಗ ಬಂದು ಸಂತೈಸಿದ್ದು ನೀನೇ ಎಂದು ತುಕಾಲಿಯನ್ನು ಅಪ್ಪಿಕೊಂಡರು. ನನ್ನ ವಸ್ತುಗಳು ಎಲ್ಲೆಂದರಲ್ಲಿ ಇವೆ ಅವನ್ನಾದರೂ ಸರಿಯಾಗಿ ಕಳಿಸಿಕೊಡಿ ಎಂದು ಹೇಳುತ್ತಾ ಅಳುತ್ತಲೇ ಮನೆಯಿಂದ ಹೊರಗೆ ಹೋದರು ತನಿಷಾ. ಸೂಕ್ತವಾಗಿ ಹೊರಗೆ ಹೋಗು ಎಂದರೆ ಹೋಗುತ್ತಿದ್ದೆ. ಹೊರಗೆ ಹೋಗುವಾಗ, ಸ್ಟೇಜ್​ ಸಹ ಕರೆಸಿಕೊಳ್ಳುತ್ತಿಲ್ಲ ಹೀಗೆ ಕಳಿಸುತ್ತಿದ್ದಾರೆ. ನನಗೆ ಕಾಲು ಏಟಾಗಿದ್ದಾಗಲೇ ನಾನು ಹೊರಗೆ ಹೋಗಿಬಿಡಬೇಕಿತ್ತು’ ಎಂದರು. ಎಲ್ಲರೂ ತನಿಷಾರನ್ನು ಬೀಳ್ಕೊಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್