ಬಿಗ್​ಬಾಸ್ ತಮಿಳು ವಿನ್ನರ್​ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್​ಗೆ ಸಿಕ್ಕಿದ್ದೆಷ್ಟು?

Bigg Boss Winner: ತಮಿಳು ಬಿಗ್​ಬಾಸ್ ಸೀಸನ್ 7 ನಿನ್ನೆ (ಜನವರಿ 14) ಮುಗಿದಿದೆ. ಅರ್ಚನಾ ರವಿಚಂದ್ರನ್ ಗೆದ್ದಿದ್ದಾರೆ. ಅಂದಹಾಗೆ ವಿಜೇತರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು? ರನ್ನರ್​ ಅಪ್​ಗೆ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ.

ಬಿಗ್​ಬಾಸ್ ತಮಿಳು ವಿನ್ನರ್​ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್​ಗೆ ಸಿಕ್ಕಿದ್ದೆಷ್ಟು?
Follow us
ಮಂಜುನಾಥ ಸಿ.
|

Updated on: Jan 15, 2024 | 5:33 PM

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ಇದರ ನಡುವೆ ನಿನ್ನೆಯಷ್ಟೆ ತಮಿಳು ಬಿಗ್​ಬಾಸ್ ಸೀಸನ್ 07ರ ಫಿನಾಲೆ ನೆರವೇರಿದೆ. ಮೊದಲ ಬಾರಿಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಗೆ ಹೋದ ವಿಜೆ ಅರ್ಚನಾ ಅಲಿಯಾಸ್ ಅರ್ಚನಾ ರವಿಚಂದ್ರನ್ ವಿಜೇತರಾಗಿದ್ದಾರೆ. ಮಣಿಚಂದ್ರನ್ ಮೊದಲ ರನ್ನರ್ ಅಪ್ ಆಗಿದ್ದಾರೆ. ಅಂದಹಾಗೆ ವಿಜೇತರಿಗೆ ಹಾಗೂ ರನ್ನರ್​ ಅಪ್​ಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು? ಇಲ್ಲಿದೆ ಮಾಹಿತಿ.

ವೈಲ್ಡ್ ಕಾರ್ಡ್ ಎಂಟ್ರಿ ಪಡೆದು 28ನೇ ದಿನಕ್ಕೆ ಮನೆಗೆ ಕಾಲಿಟ್ಟ ಅರ್ಚನಾ ರವಿಚಂದ್ರನ್ 77 ದಿನಗಳ ಕಾಲ ಮನೆಯಲ್ಲಿದ್ದರು. ಅದ್ಭುತವಾಗಿ ಆಡಿ ವಿಜೇತರಾದರು. ವಿಜೇತರಾದ ಅರ್ಚನಾಗೆ ಬಿಗ್​ಬಾಸ್ ಟ್ರೋಫಿಯ ಜೊತೆಗೆ 50 ಲಕ್ಷ ರೂಪಾಯಿ ನಗದು ಬಹುಮಾನ, ಒಂದು ಮಾರುತಿ ಸ್ವಿಫ್ಟ್ ಗ್ರಾಂಡ್ ವಿಟಾರಾ ಕಾರು ನೀಡಲಾಗಿದೆ. ಮಾರುತಿ ಸ್ವಿಫ್ಟ್ ಗ್ರಾಂಡ್ ವಿಟಾರಾ ಕಾರಿನ ಬೇಸಿಕ್ ಬೆಲೆಯೇ 11 ಲಕ್ಷ ರೂಪಾಯಿಗಳಿವೆ. ಇದರ ಜೊತೆಗೆ 15 ಲಕ್ಷ ಮೌಲ್ಯದ ಸೈಟು ಒಂದನ್ನು ಸಹ ನೀಡಲಾಗಿದೆ ಎಂಬ ಸುದ್ದಿಯೂ ಇದೆ. ಈ ಬಗ್ಗೆ ಸ್ಪಷ್ಟತೆ ಇಲ್ಲ.

ಇದನ್ನೂ ಓದಿ:ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಿಗ್​ಬಾಸ್ ಗೆದ್ದ ಅರ್ಚನಾ ರವಿಚಂದ್ರನ್

ಇನ್ನು ರನ್ನರ್ ಅಪ್ ಆದ ಮಣಿಚಂದ್ರನ್​ಗೆ ಯಾವುದೇ ಟ್ರೋಫಿ, ನಗದು ಬಹುಮಾನ ಯಾವುದೂ ಸಹ ಲಭಿಸಿಲ್ಲ. ಹಾಗೆಂದು ಅವರು ಬರಿಗೈಲಿ ಹೋಗಿದ್ದೇನಿಲ್ಲ. ಬಿಗ್​ಬಾಸ್ ಮನೆಯಲ್ಲಿ ಅವರ ಸಂಭಾವನೆಯೇ ಹೆಚ್ಚು ಎನ್ನಲಾಗುತ್ತಿದೆ. ವಾರಕ್ಕೆ ಸುಮಾರು 2 ಲಕ್ಷ ರೂಪಾಯಿಗಳನ್ನು ಅವರು ಸಂಭಾವನೆಯಾಗಿ ಪಡೆಯುತ್ತಿದ್ದರು ಎಂಬ ಮಾಹಿತಿ ಇದೆ.

ಕನ್ನಡ ಬಿಗ್​ಬಾಸ್ ನಲ್ಲಿ ಈ ಬಾರಿ ವಿಜೇತರಿಗೆ 45 ಲಕ್ಷ ರೂಪಾಯಿ ಹಣ ನೀಡಲಾಗುತ್ತದೆ. ಜೊತೆಗೆ ಒಂದು ಮಾರುತಿ ಸುಜುಕಿ ಗ್ರಾಂಡ್ ವಿಟಾರ ಕಾರು ಲಭಿಸಲಿದೆ. ನಮ್ಮಲ್ಲಿಯೂ ಸಹ ರನ್ನರ್ ಅಪ್​ಗೆ ಯಾವುದೇ ಬಹುಮಾನ ನೀಡುವುದು ಅನುಮಾನ. ಕಳೆದ ಬಿಗ್​ಬಾಸ್​ನಲ್ಲಿ ರನ್ನರ್ ಅಪ್​ಗೆ ಐದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಬ್ರ್ಯಾಂಡ್ ಒಂದರ ಮೂಲಕ ನೀಡಲಾಗಿತ್ತು. ಈ ಬಾರಿಯೂ ಹಾಗೆಯೇ ಆಗುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ