‘ಪ್ರತಾಪ್ ಮಾತ್ರ ಇಂಟಲಿಜೆಂಟ್, ನಾನು ಡಂಬ್’; ಸಿಟ್ಟಲ್ಲೇ ಹೇಳಿದ ಕಿಚ್ಚ ಸುದೀಪ್
ಮತ್ತೊಬ್ಬರಿಗೆ ಎಲ್ಲಿ ಬೇಸರ ಆಗಿಬಿಡಬಹುದು ಎನ್ನುವ ಕಾರಣಕ್ಕೆ ಸ್ಪರ್ಧಿಗಳು ಶುಗರ್ ಕೋಟ್ ಹಾಕಿ ಮಾತನಾಡೋಕೆ ಶುರು ಮಾಡಿದರು. ಇದನ್ನು ಸುದೀಪ್ ಅವರು ಖಂಡಿಸಿದ್ದಾರೆ.
ಕಿಚ್ಚ ಸುದೀಪ್ (Kichcha Sudeep) ಅವರು ನಿರೂಪಣೆಗೆ ನಿಂತರೆ ಯಾರನ್ನೂ ಲೆಕ್ಕಿಸೋದಿಲ್ಲ. ಅವರಿಗೆ ಸರಿ ಎನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಕೂಲ್ ಆಗಿದ್ದರೆ ಅವರು ನಗುತ್ತಲೇ ಉತ್ತರಿಸುತ್ತಾರೆ. ಆದರೆ, ಕೆಲವೊಮ್ಮೆ ಅವರು ಸಿಟ್ಟಾದರೆ ಅವರ ಬಾಯಿಂದ ಖಡಕ್ ಮಾತುಗಳು ಬರುತ್ತವೆ. ಈಗ ಕಿಚ್ಚ ಸುದೀಪ್ ಅವರು ನೇರವಾಗಿ ಪ್ರತಾಪ್ ಸೇರಿ ಮನೆಯ ಅನೇಕರಿಗೆ ಬೈದಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಜನವರಿ 14ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ.
ಇಬ್ಬರ ಫ್ರೆಂಡ್ಶಿಪ್ನಲ್ಲಿ ಒಬ್ಬರ ಫ್ರೆಂಡ್ಶಿಪ್ನ ಆಯ್ಕೆ ಮಾಡಲು ಸ್ಪರ್ಧಿಗಳಿಗೆ ಸುದೀಪ್ ಅವಕಾಶ ನೀಡಿದ್ದರು. ಯಾರ ಜೊತೆಗಿನ ಫ್ರೆಂಡ್ಶಿಪ್ನ ಉಳಿಸಿಕೊಳ್ಳುತ್ತೀರಿ, ಯಾರ ಜೊತೆಗಿನ ಫ್ರೆಂಡ್ಶಿಪ್ನ ಬಿಟ್ಟು ಹೋಗುತ್ತಿರಿ ಎಂದು ಕೇಳಲಾಯಿತು. ಮತ್ತೊಬ್ಬರಿಗೆ ಎಲ್ಲಿ ಬೇಸರ ಆಗಿಬಿಡಬಹುದು ಎನ್ನುವ ಕಾರಣಕ್ಕೆ ಸ್ಪರ್ಧಿಗಳು ಶುಗರ್ ಕೋಟ್ ಹಾಕಿ ಮಾತನಾಡೋಕೆ ಶುರು ಮಾಡಿದರು. ಇದನ್ನು ಸುದೀಪ್ ಅವರು ಖಂಡಿಸಿದ್ದಾರೆ. ‘ಬಿಗ್ ಬಾಸ್ ಹೇಳಿದರೆ ಅದಕ್ಕೊಂದು ಅರ್ಥ ಇರುತ್ತದೆ’ ಎಂದ ಸುದೀಪ್ ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಿನಯ್ ಹಾಗೂ ಕಾರ್ತಿಕ್ ಮಧ್ಯೆ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಸಂಗೀತಾಗೆ ಇತ್ತು. ಆದರೆ ಇಬ್ಬರ ಜೊತೆಗೂ ಫ್ರೆಂಡ್ಶಿಪ್ ಮುಂದುವರಿಸಲ್ಲ ಎಂದು ಸಂಗೀತಾ ನೇರ ಮಾತುಗಳಲ್ಲಿ ಹೇಳಿದರು. ಸಂಗೀತಾ ಅವರು ಮುಕ್ತವಾಗಿ ಮಾತನಾಡಿದ್ದನ್ನು ಸುದೀಪ್ ಮೆಚ್ಚಿಕೊಂಡರು. ಆದರೆ, ಉಳಿದ ಎಲ್ಲರೂ ಆ ರೀತಿ ಮಾತನಾಡಲಿಲ್ಲ. ಇದು ಸುದೀಪ್ ಸಿಟ್ಟಿಗೆ ಕಾರಣ ಆಗಿದೆ.
ಇದನ್ನೂ ಓದಿ: ಸಂಗೀತಾಗೆ ಪ್ರತಾಪ್ ಮೇಲಿದ್ದ ಒಳ್ಳೆಯ ಅಭಿಪ್ರಾಯವೆಲ್ಲ ಹೋಯ್ತು
‘ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀನಿ ಎನ್ನುವಾಗ ಕೊಡುವ ಸ್ಪಷ್ಟತೆ ಯಾಕೆ ರಿಜೆಕ್ಟ್ ಮಾಡ್ತೀನಿ ಎನ್ನುವಾಗ ಕೊಡಲ್ಲ. ಸಂಗೀತಾ ಸರಿಯಾಗಿ ಕೊಟ್ಟರು. ಪ್ರತಾಪ್ ಬಂದು ಶುಗರ್ ಕೋಟ್ ಮಾಡಿ ಮಾತನಾಡಿದ್ರಿ. ಇಂಟಲಿಜೆಂಟ್ ಪ್ರತಾಪ್ ಆ್ಯಂಡ್ ಡಂಬ್ ಸುದೀಪ್ ಅಲ್ಲವೇ? ತನಿಷಾ ಬಂದು ನಗುತ್ತಾ ಮ್ಯಾನ್ಯುಪ್ಯುಲೇಟ್ ಮಾಡಿದ್ರಿ. ಬಿಗ್ ಬಾಸ್ ಹೇಳಿದ್ರೆ ಅದಕ್ಕೊಂದು ಅರ್ಥ ಇರುತ್ತದೆ’ ಎಂದರು ಸುದೀಪ್. ನಂತರ ಎಲ್ಲರೂ ಸೈಲೆಂಟ್ ಆದರು. ಆ ಬಳಿಕ ಬಂದು ಎಲ್ಲರೂ ಸರಿಯಾದ ಕಾರಣ ನೀಡಿದರು. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡಲು ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ