AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಗೆದ್ದು ಹೊಸ ದಾಖಲೆ ಬರೆದ ಅರ್ಚನಾ ರವಿಚಂದ್ರನ್

Bigg Boss Winner: ಬಿಗ್​ಬಾಸ್ ತಮಿಳು ಸೀಸನ್ 7 ನಿನ್ನೆ (ಜನವರಿ 14) ಮುಗಿದಿದ್ದು, ವಿಶೇಷ ದಾಖಲೆಯೊಂದಕ್ಕೆ ಅದು ಸಾಕ್ಷಿಯಾಗಿದೆ.

ಬಿಗ್​ಬಾಸ್ ಗೆದ್ದು ಹೊಸ ದಾಖಲೆ ಬರೆದ ಅರ್ಚನಾ ರವಿಚಂದ್ರನ್
ಬಿಗ್​ಬಾಸ್
ಮಂಜುನಾಥ ಸಿ.
|

Updated on:Jan 15, 2024 | 5:34 PM

Share

ಕನ್ನಡ ಬಿಗ್​ಬಾಸ್ (BiggBoss) ಸೀಸನ್ 10 ಮುಗಿಯಲು ಕೆಲವೇ ದಿನಗಳು ಬಾಕಿ ಇದೆ. ಈ ಬಾರಿಯ ವಿನ್ನರ್ ಯಾರಾಗಲಿದ್ದಾರೆ ಎಂದು ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ತೆಲುಗು ಬಿಗ್​ಬಾಸ್​ ತಿಂಗಳ ಹಿಂದೆಯೇ ಮುಗಿದು ಸಾಮಾನ್ಯ ರೈತನ ಮಗ ಪ್ರಶಾಂತ್ ವಿನ್ನರ್ ಆಗಿದ್ದರು. ನಿನ್ನೆಯಷ್ಟೆ ತಮಿಳು ಬಿಗ್​ಬಾಸ್ ಮುಗಿದಿದ್ದು ಶೋನ ಮಧ್ಯದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದಿದ್ದ ಅರ್ಚನಾ ರವಿಚಂದ್ರನ್ ವಿಜೇತರಾಗಿ ಗಮನ ಸೆಳೆದಿದ್ದಾರೆ.

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಬಿಗ್​ಬಾಸ್ ವಿಜೇತರಾದ ಮೊದಲ ಮಹಿಳಾ ಸ್ಪರ್ಧಿ ಎನಿಸಿಕೊಂಡಿದ್ದಾರೆ ಅರ್ಚನಾ ರವಿಚಂದ್ರನ್. ವಿಶೇಷವೆಂದರೆ ಬಿಗ್​ಬಾಸ್ ತಮಿಳಿನ ಫೈನಲ್​ಗೆ ಬಂದ ಇಬ್ಬರೂ ಸಹ ಮಹಿಳೆಯರೇ ಆಗಿದ್ದರು. ಅರ್ಚನಾ ರವಿಚಂದ್ರನ್ ವಿಜೇತರಾದರೆ ಮೊದಲ ರನ್ನರ್ ಅಪ್ ಆಗಿದ್ದು ಮಣಿಚಂದ್ರನ್.

ತಮಿಳು ಬಿಗ್​ಬಾಸ್ ಫಿನಾಲೆ ದಿನ ಮಣಿಚಂದ್ರನ್, ಪ್ರಿಯಾ ಕೃಷ್ಣನ್, ದಿನೇಶ್, ವಿಷ್ಣು ಹಾಗೂ ಅರ್ಚನಾ ರವಿಚಂದ್ರನ್ ಅವರುಗಳು ಟಾಪ್ ಐದು ಸ್ಪರ್ಧಿಗಳಾಗಿ ಉಳಿದಿದ್ದರು. ಅವರಲ್ಲಿ ಮಾಯಾ ಕೃಷ್ಣನ್ ಹಾಗೂ ಅರ್ಚನಾ ರವಿಚಂದ್ರನ್ ಅವರುಗಳು ಕೊನೆಯ ಇಬ್ಬರು ಫೈನಲಿಸ್ಟ್​ಗಳಾದರು. ಆ ಇಬ್ಬರಲ್ಲಿ ಅರ್ಚನಾ ರವಿಚಂದ್ರನ್ ಗೆದ್ದು ಬೀಗಿದರು.

ಇದನ್ನೂ ಓದಿ:ಬಿಗ್​ಬಾಸ್ ಸೀಸನ್ 10ರ ಕೊನೆಯ ಉತ್ತಮ ಯಾರು? ಕಳಪೆ ಯಾರು?

ತಮಿಳು ಬಿಗ್​ಬಾಸ್ ಸೀಸನ್ 7 ಪ್ರಾರಂಭವಾದ 28ನೇ ದಿನಕ್ಕೆ ವೈಲ್ಡ್ ಕಾರ್ಡ್ ಮೂಲಕ ಅರ್ಚನಾ ಬಿಗ್​ಬಾಸ್ ಮನೆ ಪ್ರವೇಶಿಸಿದರು. ಒಳ್ಳೆಯ ಡ್ಯಾನ್ಸರ್, ಹಾಡುಗಾರ್ತಿ ಆಗಿರುವ ಅರ್ಚನಾ ತಮ್ಮ ಪ್ರತಿಭೆ ಮೂಲಕ ಪ್ರೇಕ್ಷಕರ ಮನ ಗೆದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಆದ ಕಾರಣ ಆರಂಭದಲ್ಲಿ ಅರ್ಚನಾ ಮನೆ ಸದಸ್ಯರ ತೀವ್ರ ವಿರೋಧ ಎದುರಿಸಬೇಕಾಯ್ತು. ಮಾಯಾ ಮತ್ತು ಪೂರ್ಣಿಮಾ ಪದೇ ಪದೇ ಅರ್ಚನಾ ಜೊತೆ ಜಗಳ ಮಾಡುವುದು, ಟೀಕೆ ಮಾಡುವುದು ಸುಖಾ ಸುಮ್ಮನೆ ನಾಮಿನೇಟ್ ಮಾಡುವುದು, ಟಾಸ್ಕ್​ ಆಡಲು ಅವಕಾಶ ಕೊಡದೇ ಇರುವುದು ಮಾಡಿದರು. ಕೊನೆಗೆ ಕಮಲ್ ಹಾಸನ್ ಅವರೇ ಆ ಇಬ್ಬರಿಗೂ ಎಚ್ಚರಿಕೆ ಕೊಡಬೇಕಾದ ಪರಿಸ್ಥಿತಿಯೂ ಬಂತು.

ಟ್ರೋಫಿ ಗೆದ್ದ ಬಳಿಕ ಮಾತನಾಡಿರುವ ಅರ್ಚನಾ, ‘ನನಗೆ ಇದು ನಂಬಲು ಸಾಧ್ಯವಾಗುತ್ತಿಲ್ಲ. ಒಂದೆರಡು ವಾರವಷ್ಟೆ ಮನೆಯಲ್ಲಿ ಉಳಿಯಬಹುದೇನೋ ಎಂದು ಕೊಂಡೇ ನಾನು ಬಿಗ್​ಬಾಸ್ ಮನೆಗೆ ಬಂದಿದ್ದೆ. ಆದರೆ ಇದನ್ನು ನಾನು ಊಹಿಸಿರಲಿಲ್ಲ. ನನ್ನ ಶಾಲಾ ದಿನಗಳಿಂದಲೂ ನನಗೆ ಆತ್ಮೀಯ ಗೆಳೆಯರು ಯಾರೂ ಇಲ್ಲ. ಇಷ್ಟೋಂದು ಜನರ ಜೊತೆ ಒಡನಾಡಿದ್ದೇ ಇಲ್ಲ. ಈಗ ಹಿಂತಿರುಗಿ ನೋಡಿದಾಗ ಎಷ್ಟೋಂದು ಜನರು ನನ್ನೊಟ್ಟಿಗೆ ಇದ್ದಾರೆ ಅನಿಸುತ್ತದೆ. ಕಮಲ್ ಸರ್, ನಿಮ್ಮನ್ನು ನಾನು ಮೆಂಟರ್ ಅಂದುಕೊಂಡಿದ್ದೇನೆ. ನನ್ನ ಗೆಲುವಿನ ನಿಮ್ಮ ಪಾತ್ರವೂ ಇದೆ. ನಿಮಗೆ ವಿಶೇಷ ಧನ್ಯವಾದ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Mon, 15 January 24

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?