ಸಂಕ್ರಾಂತಿ ಹಬ್ಬಕ್ಕೆ ಕೋಪ ಮರೆತು ಒಂದಾದ ಮನೆ ಮಂದಿ, ಇದು ಕ್ಷಣಿಕವಾ?

Bigg Boss: ಬಿಗ್​ಬಾಸ್ ಮನೆಗೆ ಪ್ರೀತಿ-ಸ್ನೇಹವನ್ನು ತಂದಿದೆ ಸಂಕ್ರಾಂತಿ. ಬಿಗ್​ಬಾಸ್ ಕೊಟ್ಟ ಅಕಾಶವನ್ನು ಚೆನ್ನಾಗಿ ಬಳಸಿಕೊಂಡ ಮನೆ ಸದಸ್ಯರು ದ್ವೇಷ ಮರೆತು, ಪರಸ್ಪರ ಆಲಂಗಿಸಿಕೊಂಡಿದ್ದಾರೆ.

ಸಂಕ್ರಾಂತಿ ಹಬ್ಬಕ್ಕೆ ಕೋಪ ಮರೆತು ಒಂದಾದ ಮನೆ ಮಂದಿ, ಇದು ಕ್ಷಣಿಕವಾ?
Follow us
TV9 Web
| Updated By: ಮಂಜುನಾಥ ಸಿ.

Updated on:Jan 15, 2024 | 10:40 PM

ಬಿಗ್​ಬಾಸ್ (BiggBoss) ಮನೆಯಲ್ಲಿ ಮನೆ ಸದಸ್ಯರು ಒಟ್ಟಿಗೆ ಇದ್ದಾರಾದರೂ ಮನಸ್ಸುಗಳು ಒಡೆದಿವೆ. ಕೆಲವರಿಗೆ ಕೆಲವರನ್ನು ಕಂಡರೆ ಆಗದು, ಕೆಲವರು ಹಿಂದೆಯಿಂದ, ಕೆಲವರು ಮುಂದೆಯಿಂದಲೇ ದ್ವೇಷಿಸುತ್ತಾರೆ. ಜಗಳ, ತಂತ್ರ-ಕುತಂತ್ರ, ದೂರುಗಳೇ ಹೆಚ್ಚಾಗಿದ್ದ ಮನೆಗೆ ಸಂಕ್ರಾಂತಿ ಸ್ನೇಹ-ಪ್ರೀತಿಯನ್ನು ತಂದಿದೆ. ಸಂಕ್ರಾಂತಿ ಹಬ್ಬದಂದು ಬಿಗ್​ಬಾಸ್ ಕೊಟ್ಟ ಅಕಾಶವನ್ನು ಚೆನ್ನಾಗಿ ಬಳಸಿಕೊಂಡ ಮನೆ ಸದಸ್ಯರು ದ್ವೇಷ ಮರೆತು, ಪರಸ್ಪರ ಆಲಂಗಿಸಿಕೊಂಡಿದ್ದಾರೆ.

ಬಿಗ್​ಬಾಸ್ ಸೂಚನೆಯಂತೆ ಸ್ಪರ್ಧಿಗಳೆಲ್ಲ ಸೇರಿ ಮನೆಯನ್ನೆಲ್ಲ ಸ್ವಚ್ಛಗೊಳಿಸಿ, ಸ್ನಾನ ಮಾಡಿ ದೇವರ ಪೂಜೆ ಮಾಡಿದರು. ಅದಾದ ಬಳಿಕ, ಬಿಗ್​ಬಾಸ್ ಸಣ್ಣ ಆಕ್ಟಿವಿಟಿ ಒಂದನ್ನು ಸ್ಪರ್ಧಿಗಳಿಗೆ ನೀಡಿದರು. ಸಂಕ್ರಾಂತಿ ದಿನದಂದು, ನೀವು ನಿಮ್ಮ ಯಾವ ಒಂದು ಗುಣವನ್ನು ಬಿಡುತ್ತೀರಿ, ಯಾವ ಗುಣವನ್ನು ಇಲ್ಲಿಂದ ನಿಮ್ಮಲ್ಲಿ ಅಳವಡಿಸಿಕೊಳ್ಳುತ್ತೀರಿ ಹಾಗೂ ಯಾರೊಟ್ಟಿಗೆ ದ್ವೇಷವನ್ನು ಬಿಟ್ಟು ಸ್ನೇಹವನ್ನು ಬೆಳೆಸುತ್ತೀರಿ ಎಂದು ಸೂಚಿಸಿ ಆ ವ್ಯಕ್ತಿಯನ್ನು ಕರೆದು ಎಳ್ಳು ಬೆಲ್ಲ ನೀಡಿ ಎಂದರು.

ವರ್ತೂರು ಸಂತೋಷ್ ಅವರು ಆತ್ಮವಿಶ್ವಾಸದಿಂದ ಮಾತನಾಡಿ, ಸಂಕ್ರಾಂತಿ ಯಾವ ಕಾರಣಕ್ಕೆ ರೈತರಿಗೆ ಮಹತ್ವವಾದ ಹಬ್ಬ ಎಂಬುದನ್ನು ವಿವರಿಸಿದರು. ಅಂತಿಮವಾಗಿ ನಾನು ನಮ್ರತಾ ಅವರೊಟ್ಟಿಗಿನ ಸಂಬಂಧ ಸರಿಮಾಡಿಕೊಳ್ಳುತ್ತೀನಿ, ಅವರೊಟ್ಟಿಗೆ ಹೊರಗೂ ಸ್ನೇಹ ಮುಂದುವರೆಸುವ ಇಚ್ಛೆ ಇದೆ ಎಂದು ಹೇಳಿ ಎಳ್ಳು ಬೆಲ್ಲ ತಿನ್ನಿಸಿದರು. ಬಳಿಕ ಬಂದ ತನಿಷಾ, ನಾನು ಕಾರ್ತಿಕ್ ಜೊತೆಗೆ ಮುರಿದಿರುವ ಸಂಬಂಧವನ್ನು ಸರಿಮಾಡಿಕೊಳ್ಳಲು ಬಯಸುತ್ತೀನೆಂದು ಹೇಳಿ ಕಾರ್ತಿಕ್​ಗೆ ಎಳ್ಳು-ಬೆಲ್ಲ ತಿನ್ನಿಸಿದರು.

ಇದನ್ನೂ ಓದಿ:ಮುಂಚೆಯೇ ಲೀಕ್ ಆಯ್ತು ಬಿಗ್​ಬಾಸ್ ಪ್ರೋಮೋ, ಕಾರ್ತಿಕ್​ಗೆ ಸುದೀಪ್ ಕ್ಲಾಸ್

ಅದಾದ ಬಳಿಕ ಬಂದ ವಿನಯ್, ‘ಆರು ವರ್ಷದ ಹಿಂದೆ ‘ಹರ ಹರ ಮಹಾದೇವ’ ಶೂಟಿಂಗ್​ನಲ್ಲಿ ಒಬ್ಬ ಹುಡುಗಿಯನ್ನು ನೋಡಿದ್ದೆ ಆ ಹುಡುಗಿ ಬಹಳ ತುಂಟಿಯಾಗಿದ್ದರು. ಆದರೆ ಪ್ರಾಜೆಕ್ಟ್ ಮುಗಿಯುವ ವೇಳೆಗೆ ಆ ಹುಡುಗಿಯಲ್ಲಿ ಜವಾಬ್ದಾರಿಯನ್ನು ಕಂಡೆ. ಅದುವೇ ಸಂಗೀತಾ. ಅಲ್ಲಿ ನೋಡಿದ ಸಂಗೀತಾ ಮತ್ತೆ ಸಿಕ್ಕಿದ್ದು ಈ ಮನೆಯಲ್ಲಿಯೇ. ಕೆಲವು ಕಾರಣಗಳಿಗೆ ನನ್ನಿಂದ ಅವರಿಗೆ ಬೇಸರವಾಯ್ತು. ಅದು ದ್ವೇಷವಾಗಿ ಪರಿಣಮಿಸಿತು. ನನ್ನಿಂದಲೂ ಅದು ಮುಂದುವರೆಯಿತು. ಈಗ ಅದನ್ನು ಸರಿಮಾಡಿಕೊಳ್ಳುವ ಸಮಯ’ ಎಂದು ಹೇಳಿ ಎಳ್ಳು ಬೆಲ್ಲ ತಿನ್ನಿಸಿದರು.

ಅದಾದ ಬಳಿಕ ಸಂಗೀತಾ, ನನಗೆ ಕೋಪ ಹೆಚ್ಚು, ಮಾತುಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತೀನಿ. ಕೋಪದಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡು ತಪ್ಪು ಮಾಡುತ್ತೀನಿ. ಬೇಗ ಯಾರನ್ನೂ ಕ್ಷಮಿಸುವುದಿಲ್ಲ ಈ ಕೆಟ್ಟಗುಣವನ್ನು ಬಿಟ್ಟು, ವಿನಯ್ ಹಾಗೂ ಕಾರ್ತಿಕ್ ಕೆಟ್ಟಿರುವ ಸಂಬಂಧವನ್ನು ಸರಿ ಮಾಡಿಕೊಳ್ಳುತ್ತೇನೆ ಎಂದರು. ಕಾರ್ತಿಕ್​ಗೆ ಎಳ್ಳು-ಬೆಲ್ಲ ತಿನ್ನಿಸಿ ಆಲಿಂಗಿಸಿಕೊಂಡರು.

ಕಾರ್ತಿಕ್ ಸಹ, ನನ್ನಿಂದ ಸಂಗೀತಾಗೆ ನೋವಾಗಿದೆ. ನಾನು ಕ್ಷಮೆ ಕೇಳಿದರು. ಅದನ್ನು ಸರಿಯಾಗಿ ಕೇಳಲಿಲ್ಲ. ಸಂಗೀತಾ ಜೊತೆ ಮತ್ತೆ ಸ್ನೇಹ ಸ್ಥಾಪಿಸಿಕೊಳ್ಳಲು ಬಯಸುವೆ ಎಂದು ಹೇಳಿ ಅವರಿಗೆ ಸಿಹಿ ತಿನ್ನಿಸಿದರು. ನಮ್ರತಾ, ತುಕಾಲಿ ಸಂತುಗೆ ಎಳ್ಳು ಬೆಲ್ಲ ತಿನ್ನಿಸಿದರು. ಡ್ರೋನ್ ಪ್ರತಾಪ್, ತುಕಾಲಿ ಸಂತು ಹಾಗೂ ವಿನಯ್​ಗೆ ಎಳ್ಳು ಬೆಲ್ಲ ತಿನ್ನಿಸಿ ಆಲಿಂಗಿಸಿಕೊಂಡರು. ತುಕಾಲಿ ಸಂತು ಸಹ ನಮ್ರತಾ, ಡ್ರೋನ್ ಪ್ರತಾಪ್​ಗೆ ಎಳ್ಳು ಬೆಲ್ಲ ತಿನ್ನಿಸಿದರು. ಅಂತೂ ಸಂಕ್ರಾಂತಿ ಹಬ್ಬದಿಂದಾಗಿ ಮನೆಯ ಸದಸ್ಯರು ಈ ವರೆಗಿನ ದ್ವೇಷ, ಕೋಪವನ್ನು ಮರೆತು ಪರಸ್ಪರ ಒಂದಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:39 pm, Mon, 15 January 24

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ