ಮುಂಚೆಯೇ ಲೀಕ್ ಆಯ್ತು ಬಿಗ್​ಬಾಸ್ ಪ್ರೋಮೋ, ಕಾರ್ತಿಕ್​ಗೆ ಸುದೀಪ್ ಕ್ಲಾಸ್

Bigg Boss Kannada: ಬಿಗ್​ಬಾಸ್ ಶನಿವಾರದ ಪ್ರೋಮೋ ಲೀಕ್ ಆಗಿದೆ. ಲೀಕ್ ಆಗಿ ವೈರಲ್ ಆಗಿರುವ ಪ್ರೋಮೋನಲ್ಲಿ ಸುದೀಪ್, ಕಾರ್ತಿಕ್ ಮಹೇಶ್​ಗೆ ಕ್ಲಾಸ್ ತೆಗೆದುಕೊಂಡಿರುವ ದೃಶ್ಯವಿದೆ.

ಮುಂಚೆಯೇ ಲೀಕ್ ಆಯ್ತು ಬಿಗ್​ಬಾಸ್ ಪ್ರೋಮೋ, ಕಾರ್ತಿಕ್​ಗೆ ಸುದೀಪ್ ಕ್ಲಾಸ್
ಸುದೀಪ್-ಕಾರ್ತಿಕ್
Follow us
ಮಂಜುನಾಥ ಸಿ.
|

Updated on: Jan 13, 2024 | 3:59 PM

ಬಿಗ್​ಬಾಸ್ ಕನ್ನಡ ಸೀಸನ್ 10 (Bigg Boss Kannada) ಫಿನಾಲೆ ಹಂತಕ್ಕೆ ಬಂದಿದೆ. ಈ ವಾರ ಪೂರ್ತಿ ಒಳ್ಳೆಯ ಟಾಸ್ಕ್​ಗಳಿದ್ದವು, ಸ್ಪರ್ಧಿಗಳು ಫಿನಾಲೆ ಟಿಕೆಟ್ ಪಡೆಯಲು ಪರಸ್ಪರ ತುರುಸಿನ ಪೈಪೋಟಿ ನಡೆಸಿದರು. ಅಂತಿಮವಾಗಿ ಸಂಗೀತಾ ಶೃಂಗೇರಿಗೆ ಫಿನಾಲೆ ಟಿಕೆಟ್ ಸಿಕ್ಕಿತು. ಈ ವಾರದಲ್ಲಿ ಮನೆಯ ಸದಸ್ಯರು ಸಾಕಷ್ಟು ತಂತ್ರ-ಪ್ರತಿತಂತ್ರ, ಪರಸ್ಪರ ನಂಬಿಕೆ-ಅಪನಂಬಿಕೆ ಮೂದಲಿಕೆಗಳನ್ನು ಸಹ ಮಾಡಿದರು. ಇದೀಗ ಶನಿವಾರ ಬಂದಿದೆ. ಸುದೀಪ್ ಪಂಚಾಯಿತಿ ನಡೆಸಲಿದ್ದಾರೆ. ಕಲರ್ಸ್ ವಾಹಿನಿ ಈಗಾಗಲೇ ಒಂದು ಪ್ರೋಮೋ ಬಿಡುಗಡೆ ಮಾಡಿದ್ದು, ಇಂದಿನ ಎಪಿಸೋಡ್​ನಲ್ಲಿ ಯಾವ ವಿಷಯ ಚರ್ಚೆಗೆ ಬರಲಿದೆ ಎಂಬುದನ್ನು ಸುದೀಪ್ ತಿಳಿಸಿದ್ದಾರೆ. ಇದೀಗ ಬಿಗ್​ಬಾಸ್​ನ ಇನ್ನೊಂದು ಪ್ರೋಮೋ ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ದಿನದ ಎಪಿಸೋಡ್​ ರಾತ್ರಿ 9:30ಗೆ ಪ್ರಸಾರವಾಗುವ ಮುನ್ನ ಆ ದಿನದ ಎಪಿಸೋಡ್​ನ ಪ್ರಮುಖ ಘಟನೆಗಳನ್ನು ಒಂದು ಮಾಡಿ ದಿನಕ್ಕೆ ಮೂರು ಪ್ರೋಮೋಗಳನ್ನು ಕಲರ್ಸ್ ವಾಹಿನಿ ಬಿಡುಗಡೆ ಮಾಡುತ್ತದೆ. ಇಂದಿನ ಒಂದು ಪ್ರೋಮೋ ಈಗಾಗಲೇ ಒಂದು ಪ್ರೋಮೋ ಬಿಡುಗಡೆ ಆಗಿದೆ. ಆರು ಗಂಟೆ ಸುಮಾರಿಗೆ ಬಿಡುಗಡೆ ಆಗಬೇಕಿದ್ದ ಪ್ರೋಮೋ ಈಗಾಗಲೇ ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮನೆಯಲ್ಲಿ ಸ್ಪರ್ಧಿಗಳ ನಡುವೆ ನಡೆದ ಚರ್ಚೆಯೊಂದನ್ನು ಇಟ್ಟುಕೊಂಡು ಸುದೀಪ್, ಕಾರ್ತಿಕ್ ಮಹೇಶ್​ಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಎರಡು ವಾರದ ಹಿಂದಿ ನಡೆದ ಘಟನೆ ಇಂದಿನ (ಶನಿವಾರ) ಎಪಿಸೋಡ್​ನಲ್ಲಿ ಚರ್ಚೆಗೆ ಬಂದು, ಕಾರ್ತಿಕ್​ಗೆ ಸುದೀಪ್ ಬುದ್ಧಿವಾದ ಹೇಳಿದ್ದಾರೆ. ಆಗಿರುವುದಿಷ್ಟು ಎರಡು ವಾರದ ಹಿಂದೆ ಕಿಚನ್​ನಲ್ಲಿ ಮಾತನಾಡುತ್ತಾ, ಮನೆಯ ಶನಿ ಯಾರೆಂದು ಮಾತನಾಡುತ್ತಾ ವರ್ತೂರು ಸಂತೋಷ್ ನಮ್ರತಾ, ವಿನಯ್ ಹೆಸರು ಹೇಳುತ್ತಾರೆ. ಆಗ ಕಾರ್ತಿಕ್ ಮಹೇಶ್ ಇನ್ನೊಬ್ಬರ ಹೆಸರು ಬಿಟ್ಟಿದ್ದೀಯ ಎಂದು ಹೇಳಿ ಸಂಗೀತಾ ಈ ಮನೆಯ ಶನಿ ಎನ್ನುತ್ತಾರೆ.

ಇದನ್ನೂ ಓದಿ:ಬಿಗ್​ಬಾಸ್ ಸೀಸನ್ 10ರ ಕೊನೆಯ ಉತ್ತಮ ಯಾರು? ಕಳಪೆ ಯಾರು?

ಆದರೆ ಕಳೆದ ವೀಕೆಂಡ್ ಪಂಚಾಯ್ತಿಯಲ್ಲಿ ಎಸ್-ನೋ ಗೇಮ್ ಆಡುವಾಗ ಸುದೀಪ್ ಇದೇ ಪ್ರಶ್ನೆ ಕೇಳಿದಾಗ ಕಾರ್ತಿಕ್ ‘ನೋ’ ಬೋರ್ಡ್ ಹಿಡಿದುಕೊಳ್ಳುತ್ತಾರೆ ಆಗ ಸುದೀಪ್, ಮನೆಯಲ್ಲಿ ಹೇಳಿಕೆ ನೀಡಿ, ವಾರಾಂತ್ಯದಲ್ಲಿ ನಾನು ಕೇಳಿದಾಗ ನೋ ಬೋರ್ಡ್ ಹಿಡಿಯುವುದು ಸರಿಯಲ್ಲ ಎನ್ನುತ್ತಾರೆ. ಆ ಎಪಿಸೋಡ್ ಮುಗಿದ ಬಳಿಕ ಕಾರ್ತಿಕ್, ವರ್ತೂರು ಸಂತೋಷ್ ಬಳಿ ಹೋಗಿ ‘ಸಂಗೀತಾ ಶನಿ ಎಂದಿದ್ದು ನೀನು, ನಾನಲ್ಲ’ ಎಂದು ಜೋರು ವಾದ ಮಾಡುತ್ತಾರೆ. ಅದೇ ಕಾರಣಕ್ಕೆ ವರ್ತೂರು ಸಂತೋಷ್ ಕಾರ್ತಿಕ್ ಅನ್ನು ನಾಮಿನೇಟ್ ಸಹ ಮಾಡ್ತಾರೆ.

ಈ ಶನಿವಾರ ಇದೇ ವಿಷಯ ಚರ್ಚೆಗೆ ಎತ್ತಿಕೊಂಡಿರುವ ಸುದೀಪ್, ಸಂಗೀತಾ ಶನಿ ಎಂದು ಯಾರು ಹೇಳಿದ್ದು ಎಂದು ಕೇಳಿದಾಗ ಇಂದು ಸಹ ಕಾರ್ತಿಕ್, ವರ್ತೂರು ಹೇಳಿದ್ದು ಎನ್ನುತ್ತಾರೆ. ಆದರೆ ತನಿಷಾ, ಇಲ್ಲಿ ಕಾರ್ತಿಕ್ ಅವರೇ ಹೇಳಿದ್ದು ಎನ್ನುತ್ತಾರೆ. ಕೊನೆಗೆ ಸುದೀಪ್ ‘ಸಂಗೀತಾ ಶನಿ’ ಎಂದು ನೀವೇ ಹೇಳಿದ್ದು ಕಾರ್ತಿಕ್ ಎನ್ನುತ್ತಾರೆ. ಅಲ್ಲಿಗೆ ಕಾರ್ತಿಕ್ ತಲೆ ತಗ್ಗಿಸುತ್ತಾರೆ.

ಶನಿವಾರದ ಎಪಿಸೋಡ್​ನಲ್ಲಿ ಇನ್ನೊಂದು ಪ್ರಮುಖ ವಿಷಯವನ್ನು ಸುದೀಪ್ ಚರ್ಚೆಗೆ ಎತ್ತುಕೊಳ್ಳಲಿದ್ದಾರೆ. ಈ ವಾರದ ಟಾಸ್ಕ್​ಗಳಲ್ಲಿ ಚೆನ್ನಾಗಿ ಆಡಿ ಹೆಚ್ಚು ಪಾಯಿಂಟ್ಸ್ ಗೆದ್ದಿದ್ದ ಡ್ರೋನ್ ಪ್ರತಾಪ್​ ಅನ್ನು ನೇರವಾಗಿ ಫಿನಾಲೆಗೆ ಕಳಿಸದೆ, ವೋಟಿಂಗ್ ಮಾಡಿ ಸಂಗೀತಾರನ್ನು ಫಿನಾಲೆಗೆ ಕಳಿಸಿದ್ದು ಅನ್ಯಾಯ ಎಂಬ ವಾದ ಶುರುವಾಗಿದೆ. ಈ ಬಗ್ಗೆಯೂ ಸುದೀಪ್ ಈ ಎಪಿಸೋಡ್​ನಲ್ಲಿ ಚರ್ಚೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ