ಬಿಗ್​ಬಾಸ್ ಸೀಸನ್ 10ರ ಕೊನೆಯ ಉತ್ತಮ ಯಾರು? ಕಳಪೆ ಯಾರು?

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10 ಅಂತ್ಯವಾಗಲು ಬಂದಿದೆ. ಈ ಸೀಸನ್​ನ ಕೊನೆಯ ಉತ್ತಮ ಹಾಗೂ ಕೊನೆಯ ಕಳಪೆ ಇಂದು ನಿರ್ಧಾರವಾಯ್ತು.

ಬಿಗ್​ಬಾಸ್ ಸೀಸನ್ 10ರ ಕೊನೆಯ ಉತ್ತಮ ಯಾರು? ಕಳಪೆ ಯಾರು?
Follow us
ಮಂಜುನಾಥ ಸಿ.
|

Updated on: Jan 12, 2024 | 11:45 PM

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಅಂತ್ಯವಾಗುತ್ತಿದೆ. ಈ ಸೀಸನ್​ನ ಒಬ್ಬ ಫೈನಲಿಸ್ಟ್ ಈಗಾಗಲೇ ಸಿಕ್ಕಿದ್ದಾರೆ. ಅದುವೇ ಸಂಗೀತಾ ಶೃಂಗೇರಿ. ಸೀಸನ್​ನ ಮೊದಲಿನಿಂದಲೂ ಅದ್ಭುತವಾಗಿ ಆಡಿದ, ತಮ್ಮ ಗಟ್ಟಿತನದಿಂದ ಮನೆಯಲ್ಲಿ ಎಲ್ಲರನ್ನೂ, ಎಲ್ಲವನ್ನೂ ಎದುರಿಸಿದ ಸಂಗೀತಾ ಶೃಂಗೇರಿ ಫಿನಾಲೆಗೆ ತಲುಪಿದ್ದಾರೆ. ಇನ್ನೊಬ್ಬ ಫೈನಲಿಸ್ಟ್ ಯಾರು ಹಾಗೂ ಅಂತಿಮವಾಗಿ ಗೆಲ್ಲುವುದು ಯಾರು ಎಂಬುದಷ್ಟೆ ಗೊತ್ತಾಗಬೇಕಿದೆ. ಅದಕ್ಕೆ ಹೆಚ್ಚೇನು ಸಮಯ ಉಳಿದಿಲ್ಲ. ಈ ನಡುವೆ ಮನೆಯಲ್ಲಿ ಕೊನೆ ಉತ್ತಮ ಹಾಗೂ ಕಳಪೆ ಪ್ರಕ್ರಿಯೆಯೂ ನಡೆದಿದೆ.

ಈ ಸೀಸನ್​ನ ಕೊನೆಯ ಉತ್ತಮ ದೊರಕಿದ್ದು ಡ್ರೋನ್ ಪ್ರತಾಪ್​ಗೆ. ಈ ವಾರವೆಲ್ಲ ಎಲ್ಲ ಟಾಸ್ಕ್​ಗಳಲ್ಲಿಯೂ ಅದ್ಭುತವಾಗಿ ಆಡಿ ಎಲ್ಲರಿಗಿಂತಲೂ ಅತಿ ಹೆಚ್ಚು ಅಂಕ ಗಳಿಸಿದ ಡ್ರೋನ್ ಪ್ರತಾಪ್​ಗೆ ಮನೆಯ ಹಲವು ಸ್ಪರ್ಧಿಗಳು ಉತ್ತಮ ಎಂದು ಮತ ಚಲಾಯಿಸಿದರು. ಫಿನಾಲೆ ಟಿಕೆಟ್ ಕಳೆದುಕೊಂಡ ದುಃಖದಲ್ಲಿಯೇ ಪ್ರತಾಪ್, ಮನೆಯ ಕೊನೆಯ ಉತ್ತಮ ಎನಿಸಿಕೊಂಡರು. ಬಿಗ್​ಬಾಸ್ ಕನ್ನಡ ಸೀಸನ್ 10ರ ಕಟ್ಟ ಕಡೆಯ ಕಳಪೆ ಪ್ರಾಪ್ತಿಯಾಗಿದ್ದು ತುಕಾಲಿ ಸಂತುಗೆ. ಎಲ್ಲರೂ ತುಕಾಲಿಗೆ ಕಳಪೆ ಪಟ್ಟ ನೀಡಲಿಲ್ಲವಾದರೂ ಹೆಚ್ಚಿನ ಸ್ಪರ್ಧಿಗಳು ತುಕಾಲಿಗೆ ಕಳಪೆ ನೀಡಿದ್ದರಿಂದಾಗಿ ತುಕಾಲಿಯನ್ನು ಕಳಪೆ ಎಂದು ತೀರ್ಮಾನಿಸಿ ಜೈಲಿಗೆ ಕಳಿಸಲಾಯ್ತು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಮಹಿಳೆಯರಿಗೆ ಅವಕಾಶವಿಲ್ಲವೇ? ಚರ್ಚೆ ಹುಟ್ಟುಹಾಕಿದ ಸಂಗೀತಾ

ಸೀಸನ್​ನ ಕೊನೆಯ ಉತ್ತಮ-ಕಳಪೆಯಲ್ಲಿ ವಿಶೇಷವೂ ಇದೆ. ಸೀಸನ್ ಆರಂಭವಾದ ಮೊದಲ ವಾರದಲ್ಲಿ ಇದೇ ತುಕಾಲಿ ಸಂತು, ಈಗ ಉತ್ತಮ ಆಗಿರುವ ಡ್ರೋನ್ ಪ್ರತಾಪ್ ಅನ್ನು ಬಹುವಾಗಿ ವ್ಯಂಗ್ಯ ಮಾಡಿದ್ದರು, ಹೀಗಳೆದಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ಪ್ರತಾಪ್, ಮನೆಯಲ್ಲಿ ಒಂಟಿಯಾಗಿಬಿಟ್ಟಿದ್ದರು. ಬಾತ್​ರೂಂಗೆ ಹೋಗಿ ಅಳುತ್ತಿದ್ದರು. ಆ ವಾರದ ಅಂತ್ಯದಲ್ಲಿ ಕಿಚ್ಚ ಸುದೀಪ್, ತುಕಾಲಿಗೆ ಸೂಕ್ತವಾಗಿ ಬುದ್ಧಿ ಹೇಳಿದ್ದರು. ಆದರೆ ಈಗ ತುಕಾಲಿ ಕಳಪೆ ಆಗಿದ್ದು, ಮೊದಲ ವಾರ ತುಕಾಲಿಯಿಂದ ವ್ಯಂಗ್ಯಕ್ಕೆ ಗುರಿಯಾಗಿದ್ದ ಡ್ರೋನ್ ಪ್ರತಾಪ್ ಉತ್ತಮ ಎನಿಸಿಕೊಂಡಿದ್ದಾರೆ.

ಕಳಪೆ ಪಡೆದುಕೊಂಡ ತುಕಾಲಿ ಸಂತು, ಇದನ್ನು ನಾನು ಒಪ್ಪುವುದಿಲ್ಲ, ಕೆಲವೇ ನಿಮಿಷಗಳು ನಡೆಯುವ ಟಾಸ್ಕ್​ನ ಆಧಾರದಲ್ಲಿ ಕಳಪೆ ನೀಡುವುದು ಸರಿಯಾದ ಕ್ರಮವಲ್ಲ. ನನಗೆ ಇದು ಒಪ್ಪಿಗೆ ಇಲ್ಲ ಆದರೆ ನಿಯಮದ ಪ್ರಕಾರ ಒಪ್ಪಲೇ ಬೇಕಿದೆ ಎಂಬ ಕಾರಣಕ್ಕೆ ನಾನು ಇದನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದರು. ತುಕಾಲಿ ಪರವಾಗಿ ನಿಂತ ವರ್ತೂರು ಸಂತು, ‘ನಾನು ಇಲ್ಲಿಯೇ ಕೂತಿರುತ್ತೇನೆ. ಜೈಲಿನ ಪಕ್ಕದಲ್ಲಿಯೇ ಇರುತ್ತೀನಿ. ಜೈಲು ಬಹಳ ಒಳ್ಳೆಯ ಸ್ಥಳ, ಇಲ್ಲಿಗೆ ಹೋಗಿ ಹೊರಗೆ ಬಂದವರು ಇತಿಹಾಸ ನಿರ್ಮಿಸುತ್ತಾರೆ. ಹೋಗಿ ಬಾ’ ಎಂದು ಹುರುಪು ತುಂಬಿ ಅವರನ್ನು ಒಳಗೆ ಕಳಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್