AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sangeetha Sringeri: ಫಿನಾಲೆ ಟಿಕೆಟ್​ ಪಡೆದಿದ್ದು ಪ್ರತಾಪ್ ಅಲ್ಲ ಸಂಗೀತಾ? ಟ್ವಿಸ್ಟ್ ಮೇಲೆ ಟ್ವಿಸ್ಟ್

‘ಟಿಕೆಟ್​ ಟು ಫಿನಾಲೆ’ ಪಡೆದಿದ್ದು ಡ್ರೋನ್ ಪ್ರತಾಪ್ ಎಂದು ಸುದ್ದಿ ಆಗಿತ್ತು. ಆದರೆ, ಈ ಆಟಕ್ಕೆ ಬಿಗ್ ಬಾಸ್ ಟ್ವಿಸ್ಟ್ ನೀಡಿದ್ದಾರೆ. ಕೊನೆಯಲ್ಲಿ ಈ ಟಿಕೆಟ್​ ಸಂಗೀತಾ ಕೈ ಸೇರಿದೆ ಎನ್ನಲಾಗಿದೆ.

Sangeetha Sringeri: ಫಿನಾಲೆ ಟಿಕೆಟ್​ ಪಡೆದಿದ್ದು ಪ್ರತಾಪ್ ಅಲ್ಲ ಸಂಗೀತಾ? ಟ್ವಿಸ್ಟ್ ಮೇಲೆ ಟ್ವಿಸ್ಟ್
ಪ್ರತಾಪ್-ಸಂಗೀತಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 12, 2024 | 10:30 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 10’ ಫಿನಾಲೆಗೆ ಉಳಿದಿರೋದು ಇನ್ನು ಎರಡು ವಾರ ಮಾತ್ರ. ಜನವರಿ ಅಂತ್ಯಕ್ಕೆ ಬಿಗ್ ಬಾಸ್ ಫಿನಾಲೆ ನಡೆಯೋ ಸಾಧ್ಯತೆ ಇದೆ. ಈ ವಾರ ಬಿಗ್ ಬಾಸ್ ಒಂದು ಅವಕಾಶ ನೀಡಿದ್ದರು. ಅದುವೇ ‘ಟಿಕೆಟ್​ ಟು ಫಿನಾಲೆ’. ಈ ಟಿಕೆಟ್​ನ ಪಡೆದಿದ್ದು ಡ್ರೋನ್ ಪ್ರತಾಪ್ ಎಂದು ಸುದ್ದಿ ಆಗಿತ್ತು. ಆದರೆ, ಈ ಆಟಕ್ಕೆ ಬಿಗ್ ಬಾಸ್ (Bigg Boss) ಟ್ವಿಸ್ಟ್ ನೀಡಿದ್ದಾರೆ ಎನ್ನಲಾಗಿದೆ. ಕೊನೆಯಲ್ಲಿ ಈ ಟಿಕೆಟ್​ ಸಂಗೀತಾ ಕೈ ಸೇರಿದೆ ಎನ್ನಲಾಗಿದೆ.

ಏನಿದು ಟಾಸ್ಕ್?

ಈ ವಾರ ನಡೆದಿದ್ದು ಎಲ್ಲವೂ ವೈಯಕ್ತಿಕ ಟಾಸ್ಕ್​ಗಳೇ. ಪ್ರತಿ ಟಾಸ್ಕ್​ನಲ್ಲಿ ನಾಲ್ವರು ಆಡಬೇಕು. ಸರದಿ ಬಂದಾಗ ಪ್ರತಿ ಆಟಗಾರ ತಮ್ಮ ಮೂವರು ಎದುರಾಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಎಂಟು ಸ್ಪರ್ಧಿಗಳು ಇದ್ದಿದ್ದರಿಂದ ಎಂಟು ರೌಂಡ್​ನಲ್ಲಿ ಆಟ ನಡೆಯಲಿದೆ. ಈ ರೀತಿ ಟಾಸ್ಕ್​ ಆಡಿ ಕೊನೆಗೆ ಯಾರದ್ದು ಹೆಚ್ಚು ಅಂಕ ಇರುತ್ತದೆಯೋ ಅವರು ಫಿನಾಲೆಯ ಟಿಕೆಟ್ ಪಡೆಯುತ್ತಾರೆ ಎಂದು ಹೇಳಲಾಗಿತ್ತು.

ಪ್ರೋಮೋದಲ್ಲೇನಿದೆ?

ಇಂದು ಕಲರ್ಸ್ ಕನ್ನಡ ರಿಲೀಸ್ ಮಾಡಿದ ಪ್ರೋಮೋದಲ್ಲಿ ಪ್ರತಾಪ್ ಅವರು ಸಂಗೀತಾನ ಟಾಸ್ಕ್​ನಿಂದ ಹೊರಗೆ ಇಟ್ಟಂತೆ ತೋರಿಸಲಾಗಿದೆ. ಸಂಗೀತಾ 260 ಹಾಗೂ ಪ್ರತಾಪ್ 280 ಅಂಕ ಹೊಂದಿದ್ದು ಕಂಡು ಬಂದಿತ್ತು. ಹೀಗಾಗಿ, ಅನೇಕರು ಪ್ರತಾಪ್ ಅವರೇ ಟಿಕೆಟ್​ನ ವಿನ್ನರ್ ಎಂದು ಊಹಿಸಿದ್ದರು.

ಇದೆ ಟ್ವಿಸ್ಟ್?

ಅತಿ ಹೆಚ್ಚು ಅಂಕ ಪಡೆದವರಿಗೆ ಬಿಗ್ ಬಾಸ್ ಟಿಕೆಟ್ ನೀಡಿಲ್ಲ. ಎಂಟು ರೌಂಡ್ಸ್ ಬಳಿಕ ಟಾಪ್ ಮೂರರಲ್ಲಿ ಇರುವ ವ್ಯಕ್ತಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದರು. ಇದು ಕ್ಯಾಪ್ಟನ್ಸಿ ಟಾಸ್ಕ್ ಹಾಗೂ ಟಿಕೆಟ್​ ಟು ಫಿನಾಲೆ ಎರಡೂ ಆಗಿತ್ತು. ಇದನ್ನು ಸಂಗೀತಾ ಗೆದ್ದು ಕ್ಯಾಪ್ಟನ್ ಪಟ್ಟ ಹಾಗೂ ಫಿನಾಲೆ ಟಿಕೆಟ್ ಎರಡನ್ನೂ ಪಡೆದಿದ್ದಾರೆ ಎ್ನಲಾಗುತ್ತಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಡ್ರೋನ್ ಪ್ರತಾಪ್ ಬಳಿ ಕ್ಷಮೆ ಕೇಳಿದ ವಿನಯ್ ಗೌಡ

ದಾಖಲೆ ಬರೆದ ಸಂಗೀತಾ

ಸಂಗೀತಾ ಶೃಂಗೇರಿ ಈ ಸೀಸನ್​ನಲ್ಲಿ ಈವರೆಗೆ ಕ್ಯಾಪ್ಟನ್ ಆಗಿರಲಿಲ್ಲ. ಕಳೆದ ವಾರ ಟಾಸ್ಕ್ ಗೆದ್ದು ಅವರು ಕ್ಯಾಪ್ಟನ್ ಆದರು. ಈ ವಾರವೂ ಕ್ಯಾಪ್ಟನ್ ಆಗಿ ಅವರು ಬೀಗಿದ್ದಾರೆ. ಈ ಮೂಲಕ ಅವರು ದಾಖಲೆ ಬರೆದಿದ್ದಾರೆ. ಸಂಗೀತಾಗೆ ಎಲ್ಲರೂ ಶುಭಕೋರುತ್ತಿದ್ದಾರೆ. ಈ ವಾರ ಡ್ರೋನ್ ಪ್ರತಾಪ್ ಉತ್ತಮ ಆಟ ಪ್ರದರ್ಶನ ನೀಡಿದರು. ಅವರಿಗೆ ಉತ್ತಮ ಸಿಕ್ಕಿದ್ದು, ತುಕಾಲಿ ಸಂತೋಷ್ ಅವರಿಗೆ ಕಳಪೆ ಸಿಕ್ಕಿದೆ ಎನ್ನಲಾಗಿದೆ.

ಜೋರಾಗಿದೆ ಸ್ಪರ್ಧೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು. ಸದ್ಯ ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್, ತುಕಾಲಿ ಸಂತೋಷ್, ನಮ್ರತಾ ಗೌಡ, ವಿನಯ್ ಗೌಡ, ಡ್ರೋನ್ ಪ್ರತಾಪ್, ಸಂಗೀತಾ, ತನಿಷಾ ಹಾಗೂ ಕಾರ್ತಿಕ್ ಆಟ ಆಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ