ಬಿಗ್​ಬಾಸ್ ಮನೆಯಲ್ಲಿ ಮಹಿಳೆಯರಿಗೆ ಅವಕಾಶವಿಲ್ಲವೇ? ಚರ್ಚೆ ಹುಟ್ಟುಹಾಕಿದ ಸಂಗೀತಾ

Bigg Boss: ಕಳೆದ 9 ಬಿಗ್​ಬಾಸ್​ ಸೀಸನ್​ನಲ್ಲಿ ಒಮ್ಮೆ ಮಾತ್ರ ಮಹಿಳೆ ಗೆದ್ದಿದ್ದಾರೆ. ಇದಕ್ಕೆ ಅವಕಾಶದ ಕೊರತೆ ಕಾರಣವೇ? ಪುರುಷ ಸ್ಪರ್ಧಿಗಳು ಮಹಿಳೆಯರ ಅವಕಾಶವನ್ನು ಕಸಿದುಕೊಳ್ಳುತ್ತಿದ್ದಾರೆಯೇ?

ಬಿಗ್​ಬಾಸ್ ಮನೆಯಲ್ಲಿ ಮಹಿಳೆಯರಿಗೆ ಅವಕಾಶವಿಲ್ಲವೇ? ಚರ್ಚೆ ಹುಟ್ಟುಹಾಕಿದ ಸಂಗೀತಾ
Follow us
ಮಂಜುನಾಥ ಸಿ.
|

Updated on:Jan 03, 2024 | 11:19 PM

ಈಗ ಬಿಗ್​ಬಾಸ್​ನ ಹತ್ತನೇ ಸೀಸನ್ (Bigg Boss Kannada season 10) ನಡೆಯುತ್ತಿದೆ. ಈ ವೆರಗೆ ನಡೆದಿರುವ ಒಂಬತ್ತು ಸೀಸನ್​ಗಳಲ್ಲಿ ಒಂದು ಬಾರಿ ಮಾತ್ರವೇ ಮಹಿಳೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ ಅದುವೇ ನಟಿ ಶ್ರುತಿ. ಈ ಸೀಸನ್​ನಲ್ಲಿ ಕೆಲ ಗಟ್ಟಿ ಆಟಗಾರ್ತಿಯರು ಮನೆಯಲ್ಲಿದ್ದಾರೆ. ಆದರೆ ಅವರನ್ನು ಗೆಲ್ಲಲು ಪುರುಷ ಸ್ಪರ್ಧಿಗಳು ಬಿಡುತ್ತಿಲ್ಲವೇ, ಬಿಗ್​ಬಾಸ್​ ನಲ್ಲಿ ಮಹಿಳೆಯರು ಗೆಲ್ಲದಿರಲು ಅವಕಾಶಗಳ ಕೊರತೆಯೇ ಕಾರಣವೇ? ಈ ಬಗ್ಗೆ ಚರ್ಚೆಯೊಂದನ್ನು ಸಂಗೀತಾ ಶೃಂಗೇರಿ ಶುರು ಮಾಡಿದ್ದಾರೆ. ಈ ಬಗ್ಗೆ ಜೋರು ಚರ್ಚೆ ಮನೆಯಲ್ಲಿ ನಡೆದಿದೆ.

ಬಿಗ್​ಬಾಸ್ ಮನೆಯಲ್ಲಿ ಕಳೆದೆರಡು ವಾರ ಹೆಚ್ಚು ಜಗಳಿಗೆ ಅವಕಾಶ ಇಲ್ಲದ ಮಾದರಿಯ ಟಾಸ್ಕ್​ಗಳಿದ್ದವು. ಕಳೆದ ವಾರವಂತೂ ಸ್ಪರ್ಧಿಗಳ ಕುಟುಂಬದವರು ಮನೆಗೆ ಬಂದಿದ್ದರಿಂದ ಯಾವುದೇ ಟಾಸ್ಕ್ ನಡೆದಿರಲಿಲ್ಲ. ಸ್ಪರ್ಧಿಗಳ ಕುಟುಂಬದ ಸದಸ್ಯರ ಕೋರಿಕೆಯನ್ನು ಪರಿಗಣಿಸಿ ತನಿಷಾ ಮನೆಯ ಕ್ಯಾಪ್ಟನ್ ಆದರು. ಆದರೆ ಈ ವಾರ ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ ತಲೆದೂರುವ ರೀತಿಯ ಟಾಸ್ಕ್​ಗಳೇ ಹೆಚ್ಚಿಗೆ ಬರುತ್ತಿವೆ.

ಹತ್ತು ಲಕ್ಷ ಗೆಲ್ಲಲು ಬಿಗ್​ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು. ನೀರಿನಲ್ಲಿ ಇಳಿದು, ಉಸಿರು ಬಿಗಿ ಹಿಡಿದು ಹಾಗೂ ಗುರಿ ಇಡುವ ಕುಶಲತೆ ಬಯಸುವ ಟಾಸ್ಕ್ ಇದಾಗಿರಲಿದೆ ಎಂದು ಬಿಗ್​ಬಾಸ್ ಮೊದಲೇ ಹೇಳಿದ್ದರು. ಹಾಗಾಗಿ ಮನೆಯ ಹಲವು ಸ್ಪರ್ಧಿಗಳು ಸಂಗೀತಾರನ್ನು ಹೊರಗಿಟ್ಟು ವಿನಯ್, ಕಾರ್ತಿಕ್, ಮೈಖಲ್ ಹಾಗೂ ತುಕಾಲಿಯನ್ನು ಆರಿಸಿದರು. ಅಂತಿಮವಾಗಿ ಕ್ಯಾಪ್ಟನ್ ತನಿಷಾ ಸಹ ಅದೇ ಆಯ್ಕೆ ಮಾಡಿದರು. ಇದು ಸಂಗೀತಾಗೆ ತುಸುವೂ ಇಷ್ಟವಾಗಲಿಲ್ಲ.

ಇದನ್ನೂ ಓದಿ:ಬಿಗ್​ಬಾಸ್: ಯಾವ ಸ್ಪರ್ಧಿಗಳಿಗೆ ಬಿತ್ತು ಕಿಚ್ಚ ಸುದೀಪ್​ರ ಮಾತಿನ ಚಾಟಿ ಏಟು

ಬಾತ್​ರೂಂನಲ್ಲಿ ಅಳುತ್ತಾ ಕೂತಿದ್ದ ಸಂಗೀತಾ, ಹಾಲ್​ಗೆ ಬಂದ ಬಳಿಕ ವಿನಯ್ ಏನಾಯ್ತೆಂದು ಕೇಳಿದರು. ಆಗ ಸಂಗೀತಾ ನೀವು ನನಗೆ ಅವಕಾಶ ನೀಡಲಿಲ್ಲ, ಹೀಗೆ ಮಾಡುವುದರಿಂದಲೇ ಈ ಮನೆಯಲ್ಲಿ ಮಹಿಳೆಯರು ಗೆಲ್ಲುವುದಿಲ್ಲ ಎಂದರು. ಪುರುಷ ಸ್ಪರ್ಧಿಗಳು ಮಹಿಳೆಯರನ್ನು ವೀಕೆ ಎಂದು ಪರಿಗಣಿಸುತ್ತಾರೆ, ಆಡಲು ಸಮಾನ ಅವಕಾಶ ನೀಡುವುದಿಲ್ಲ ಎಂಬ ಚರ್ಚೆ ಆರಂಭಿಸಿದರು.

ಅಪರೂಪಕ್ಕೆ ತಾಳ್ಮೆ ಕಳೆದುಕೊಳ್ಳದೆ ಮಾತನಾಡಿದ ವಿನಯ್, ಮಹಿಳೆ-ಪುರುಷ ಎಂಬ ವಿಷಯವನ್ನು ತರಬೇಡ, ಇದು ಕೌಶಲ್ಯ ಆಧರಿತ ಟಾಸ್ಕ್ ಎಂದರು. ಮೈಖಲ್ ಇನ್ನೂ ವಿವರವಾಗಿ, ನಿನಗೆ ಆಡಲು ಅವಕಾಶ ಸಿಗಲಿಲ್ಲ ಅದಕ್ಕೆ ನಿನಗೆ ಈ ಟಾಸ್ಕ್​ಗೆ ಬೇಕಾದ ಕೌಶಲ್ಯ ಇಲ್ಲದಿರುವುದು ಕಾರಣ, ಅದನ್ನು ಹೇಳುವ ಬದಲಿಗೆ ಮಹಿಳೆಯರಿಗೆ ಅವಕಾಶ ನೀಡಲಾಗಿಲ್ಲ ಎಂದು ಹೇಳುವುದು ತಪ್ಪು ಎಂದರು. ಅಲ್ಲದೆ, ಅದಕ್ಕೆ ಮುಂಚಿನ ಟಾಸ್ಕ್​ನಲ್ಲಿ ತನಿಷಾ ಮೊದಲಿಗೆ ಸಂಗೀತಾ ಹೆಸರನ್ನೇ ತೆಗೆದುಕೊಂಡು ಅವಕಾಶ ಕೊಟ್ಟಿದ್ದನ್ನು ಸಹ ಮೈಖಲ್ ಹೇಳಿದರು. ಬಳಿಕ ಸಂಗೀತಾ ತಮ್ಮ ಹೇಳಿಕೆಯನ್ನು ಬದಲಾಯಿಸಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:18 pm, Wed, 3 January 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ