ಎಲ್ಲರೂ ಸೇರಿ ತುಕಾಲಿ ಸಂತೋಷ್​ನ ಕುರಿ ಮಾಡಿದ್ರು; ಹೇಗಿತ್ತು ಪ್ಲ್ಯಾನ್?

ಬೇಸರದಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಬಾಲ್ಕನಿಯಲ್ಲಿ ಕುಳಿತಿದ್ದರು. ಇತ್ತ, ವಿನಯ್ ಹಾಗೂ ಟೀಂ ಇಬ್ಬರನ್ನು ಕುರಿ ಮಾಡಲು ಪ್ಲ್ಯಾನ್ ರೂಪಿಸಿತ್ತು. ಇದು ಯಶಸ್ವಿ ಆಗಿದೆ.

ಎಲ್ಲರೂ ಸೇರಿ ತುಕಾಲಿ ಸಂತೋಷ್​ನ ಕುರಿ ಮಾಡಿದ್ರು; ಹೇಗಿತ್ತು ಪ್ಲ್ಯಾನ್?
ತುಕಾಲಿ ಸಂತೋಷ್
Follow us
ರಾಜೇಶ್ ದುಗ್ಗುಮನೆ
|

Updated on:Jan 04, 2024 | 8:06 AM

ಬಿಗ್ ಬಾಸ್ (Bigg Boss) ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಇಬ್ಬರೂ ಒಟ್ಟಾಗಿ ಇರುತ್ತಾರೆ. ಯಾವಾಗಲೂ ಹರಟೆ ಹೊಡೆಯುತ್ತಾ ಸಮಯ ಕಳೆಯುತ್ತಿರುತ್ತಾರೆ. ಇವರಿಬ್ಬರ ಫೇವರಿಟ್ ಪ್ಲೇಸ್ ಎಂದರೆ ಅದು ಬಾಲ್ಕನಿ. ಅಲ್ಲಿರುವ ಬೀನ್ ಬ್ಯಾಗ್ ಮೇಲೆ ಕುಳಿತು ಇವರು ಹರಟೆ ಹೊಡೆಯುತ್ತಾರೆ. ಈ ಸಂದರ್ಭವನ್ನು ಬಳಕೆ ಮಾಡಿಕೊಂಡು ಇಡೀ ಮನೆಯವರು ತುಕಾಲಿ ಸಂತೋಷ್ ಅವರನ್ನು ಬಕ್ರಾ ಮಾಡಿದ್ದಾರೆ.

ಆಗತಾನೇ ಟಾಸ್ಕ್ ಮುಗಿದಿತ್ತು. ಈ ಟಾಸ್ಕ್​ನಲ್ಲಿ ಸೋತು ಮನೆ ಮಂದಿ ಐದು ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಈ ಬೇಸರದಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಬಾಲ್ಕನಿಯಲ್ಲಿ ಕುಳಿತಿದ್ದರು. ಇತ್ತ, ವಿನಯ್ ಹಾಗೂ ಟೀಂ ಇಬ್ಬರನ್ನು ಕುರಿ ಮಾಡಲು ಪ್ಲ್ಯಾನ್ ರೂಪಿಸಿತ್ತು. ‘ಬಾಲ್ಕನಿಗೆ ಹೋಗಿ ಅವರನ್ನು ಕುರಿ ಮಾಡೋಣ. ಒಬ್ಬೊಬ್ಬರಾಗಿಯೇ ಹೋಗೋಣ. ಅಲ್ಲಿ ಏಕೋ ಬೇಸರ ಎಂದು ಹೇಳೋಣ’ ಎಂದರು ವಿನಯ್.

ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು. ಮೊದಲು ನಮ್ರತಾ ಹೋದರು. ‘ಅಲ್ಲಿ ಏಕೋ ಬೇಸರ. ಅದಕ್ಕೆ ಇಲ್ಲಿ ಬಂದೆ’ ಎಂದರು. ಆ ಬಳಿಕ ಬಂದ ತನಿಷಾ, ಸಂಗೀತಾ ಕೂಡ ಇದೇ ಮಾತನ್ನು ಹೇಳಿದರು. ಆಗಲೂ ತುಕಾಲಿ ಸಂತೋಷ್​ಗೆ ತಿಳಿಯಲಿಲ್ಲ. ಆ ಬಳಿಕ ಬಂದ ವಿನಯ್ ಕೂಡ ಹಾಗೆಯೇ ಹೇಳಿದರು. ಆಗ ಅವರಿಗೆ ಸ್ವಲ್ಪ ಅನುಮಾನ ಬರೋಕೆ ಆರಂಭ ಆಯಿತು. ನಂತರ ಕಾರ್ತಿಕ್, ಪ್ರತಾಪ್ ಕೂಡ ಹಿಗೆಯೇ ಹೇಳಿದರು.

ಇದನ್ನೂ ಓದಿ: Bigg Boss Kannada: ‘ಬಿಗ್ ಬಾಸ್’ ಕೊಡ್ತಿರೋ ಕಾಟಕ್ಕೆ ಸ್ಪರ್ಧಿಗಳು ಸುಸ್ತೋ ಸುಸ್ತು

ಕೊನೆಯಲ್ಲಿ ಬಂದ ಮೈಕಲ್ ಅವರು, ‘ಅಲ್ಲಿ ಏಕೋ..’ ಎಂದು ಹೇಳಲು ಆರಂಭಿಸದರು. ಆಗ ತುಕಾಲಿ ಸಂತೋಷ್​ಗೆ ಕುರಿ ಆದೆ ಎಂಬುದು ತಿಳಿಯಿತು. ‘ನನಗೆ ಇವರು ಹೇಳೋದು ನೋಡಿಯೇ ಗೊತ್ತಾಗಿತ್ತು. ನಾನು ಕುರಿ ಆಗಿಲ್ಲ’ ಎಂದರು ವರ್ತೂರು ಸಂತೋಷ್. ಏನೂ ತಿಳಿಯದೇ ಕುಳಿತ ತುಕಾಲಿ ಸಂತೋಷ್ ಅವರನ್ನು ಕುರಿ ಎಂದು ಮನೆ ಮಂದಿ ಘೋಷಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:05 am, Thu, 4 January 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್