AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರೋನ್ ಪ್ರತಾಪ್ ಆತ್ಮಹತ್ಯೆ ವದಂತಿ: ವೈದ್ಯರು ಹೇಳಿದ್ದೇನು?

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್, ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ ಎನ್ನಲಾಗುತ್ತಿದೆ. ಪ್ರತಾಪ್​ಗೆ ಚಿಕಿತ್ಸೆ ನೀಡಿದ ವೈದ್ಯರು ಪ್ರತಾಪ್​ರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಡ್ರೋನ್ ಪ್ರತಾಪ್ ಆತ್ಮಹತ್ಯೆ ವದಂತಿ: ವೈದ್ಯರು ಹೇಳಿದ್ದೇನು?
ಮಂಜುನಾಥ ಸಿ.
|

Updated on:Jan 04, 2024 | 3:38 PM

Share

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ (Drone Prathap)​, ಬಿಗ್​ಬಾಸ್ ಮನೆಯೊಳಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಆದರೆ ಪ್ರತಾಪ್​ಗೆ ಅನಾರೋಗ್ಯ ಉಂಟಾದ ಕಾರಣ ಅವರು ಆಸ್ಪತ್ರೆ ಸೇರಿದ್ದಾರೆ ಎಂದು ಅವರ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಇದೀಗ ಪ್ರತಾಪ್​ರ ಆರೋಗ್ಯ ತಪಾಸಣೆ ಮಾಡಿರುವ ವೈದ್ಯರು ಈ ಬಗ್ಗೆ ನಿಖರ ಮಾಹಿತಿ ನೀಡಿದ್ದಾರೆ.

ಪ್ರತಾಪ್ ಅವರನ್ನು ಶ್ರೀ ಸಂಜೀವಿನಿ ಆಸ್ಪತ್ರೆಗೆ ದಾಖಲಾಗಿಸಿತ್ತು, ಪ್ರತಾಪ್​ಗೆ ಚಿಕಿತ್ಸೆ ನೀಡಿದ ವೈದ್ಯರು, ‘ಪ್ರತಾಪ್​ ಬಂದಾಗ ಅವರಿಗೆ ವಾಂತಿ ಮತ್ತು ಬೇಧಿ ಆಗಿತ್ತು. ಅವರಿಗೆ ಫುಡ್ ಪಾಯ್ಸನ್ ಆಗಿತ್ತು, ಪ್ರತಾಪ್​ ಅಥವಾ ಬಿಗ್​ಬಾಸ್ ಕಡೆಯವರಾಗಲಿ ಅವರು ಕ್ಯಾಲ್ಶಿಯಮ್ ಮಾತ್ರೆ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಸರಿಯಾಗಿ ಊಟ ಮಾಡದೇ ಇರುವುದರಿಂದ ಹೀಗಾಗಿದೆ’ ಎಂದಿದ್ದಾರೆ.

ಆಸ್ಪತ್ರೆಯಲ್ಲಿ ಡ್ರೋನ್ ಪ್ರತಾಪ್​ಗೆ ಹಲವು ಪರೀಕ್ಷೆಗಳನ್ನು ವೈದ್ಯರು ಮಾಡಿದ್ದಾರೆ. ರಕ್ತ, ಮೂತ್ರ ಪರೀಕ್ಷೆ, ಹೃದಯ ಪರೀಕ್ಷೆ, ಫೋಟೊ ಥೆರಪಿ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಲಾಗಿದೆ. ಡ್ರೋನ್ ಪ್ರತಾಪ್​ಗೆ ಆಸ್ಪತ್ರೆಯಲ್ಲಿ ಮಾಡಲಾಗಿರುವ ಪರೀಕ್ಷೆಗಳು, ಅವರಿಗೆ ಕಾಣಸಿಕೊಂಡಿದ್ದ ರೋಗಲಕ್ಷಣ, ಆಸ್ಪತ್ರೆಯಲ್ಲಿ ನೀಡಲಾಗಿರುವ ಚಿಕಿತ್ಸೆ ವೈದ್ಯರ ಭೇಟಿ ಇನ್ನಿತರೆ ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿವೆ.

ಇದನ್ನೂ ಓದಿ:ಕೀ ಕೊಟ್ಟರಷ್ಟೆ ಆಡುವ ಗೊಂಬೆ ಡ್ರೋನ್ ಪ್ರತಾಪ್, ಇದು ನಿಜವೇ?

ಬುಧವಾರ ಮಧ್ಯಾಹ್ನದ ವೇಳೆಗೆ ಡ್ರೋನ್ ಪ್ರತಾಪ್ ಆಸ್ಪತ್ರೆಗೆ ದಾಖಲಾಗಿದ್ದ ಡ್ರೋನ್ ಪ್ರತಾಪ್ ಅನ್ನು ಜನವರಿ 3ನೇ ತಾರೀಖು ಮಧ್ಯಾಹ್ನ ರಾತ್ರಿ 3 ಗಂಟೆಗೆ ಡಿಸ್​ಚಾರ್ಜ್ ಮಾಡಲಾಗಿದೆ. ಡ್ರೋನ್ ಪ್ರತಾಪ್ ಮತ್ತೆ ಬಿಗ್​ಬಾಸ್ ಮನೆ ಸೇರಿದ್ದಾರೆ ಎನ್ನಲಾಗುತ್ತಿದೆ. ಡ್ರೋನ್ ಪ್ರತಾಪ್, ಕಳೆದ ಕೆಲ ದಿನಗಳಿಂದಲೂ ಬಿಗ್​ಬಾಸ್ ಮನೆಯಲ್ಲಿ ಡಲ್ ಆಗಿದ್ದರು. ಮನೆಯಿಂದ ತಂದೆ-ತಾಯಿ ಬಂದ ದಿನ ಬಹಳ ಖುಷಿಯಿಂದ ಇದ್ದ ಪ್ರತಾಪ್, ಆ ನಂತರ ಮನೆಗೆ ಬಂದ ಸ್ವಾಮೀಜಿ, ಪ್ರತಾಪ್, ತನ್ನ ತಂದೆ-ತಾಯಿಗಳಿಂದ ದೂರವೇ ಇರಬೇಕು ಎಂದು ಹೇಳಿದ್ದು ಅವರಿಗೆ ತೀವ್ರ ಬೇಸರ ಉಂಟಾಗಿತ್ತು. ಇದೇ ಕಾರಣಕ್ಕೆ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂಬ ವದಂತಿ ಹರಿದಾಡಿತ್ತು.

ಆದರೆ ಈಗ ಬಿಡುಗಡೆ ಆಗಿರುವ ವೈದ್ಯಕೀಯ ವರದಿಗಳು ಗಮನಿಸಿದರೆ ಪ್ರತಾಪ್​ಗೆ ಕೇವಲ ಅನಾರೋಗ್ಯವಷ್ಟೆ ಆಗಿತ್ತು ಎನ್ನಬಹುದಾಗಿದೆ. ಡ್ರೋನ್ ಪ್ರತಾಪ್​ರ ಅನಾರೋಗ್ಯದ ಸಂಬಂಧ, ಕಲರ್ಸ್ ವಾಹಿನಿಯವರು ಈ ವರೆಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಡ್ರೋನ್ ಪ್ರತಾಪ್ ಬಿಗ್​ಬಾಸ್ ಮನೆಗೆ ಬಂದ ಮೊದಲ ವಾರದಲ್ಲಿ ಮನೆಯ ಸದಸ್ಯರಿಂದ ತೀವ್ರ ವ್ಯಂಗ್ಯಕ್ಕೆ, ಅಪಹಾಸ್ಯಕ್ಕೆ ಒಳಗಾಗಿದ್ದರು. ಅದಾದ ಬಳಿಕ ಸುದೀಪ್​ರ ಸ್ಪೂರ್ತಿಯ ಮಾತುಗಳಿಂದ ಉತ್ಸಾಹಭರಿತರಾಗಿದ್ದರು. ಕೆಲವು ವಾರಗಳ ಕಾಲ ಮನೆಯ ಪ್ರಮುಖ ಸ್ಪರ್ಧಿ ಗೆಲ್ಲುವ ಅಭ್ಯರ್ಥಿ ಎಂಬಂತೆ ಬಿಂಬಿತವಾಗಿದ್ದರು. ಆದರೆ ಕಳೆದ ಕೆಲವು ವಾರಗಳಲ್ಲಿ ಮತ್ತೆ ಉತ್ಸಾಹ ಕಳೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Thu, 4 January 24

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ