AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐ ಲೈಕ್ ಯು ಕಾರ್ತಿಕ್ ಎಂದ ನಮ್ರತಾ, ಪಾಪ ಸ್ನೇಹಿತ್ ಕತೆ ಏನು?

Bigg Boss: ಇದೇ ಸೀಸನ್​ನ ಮಾಜಿ ಸ್ಪರ್ಧಿ ಸ್ನೇಹಿತ್, ನಮ್ರತಾರ ಬಳಿ ಪ್ರೇಮ ನಿವೇದನೆ ಮಾಡಿದ್ದರು. ಈಗ ಕಾರ್ತಿಕ್, ನಮ್ರತಾ ಹಿಂದೆ ಬಿದ್ದಿದ್ದಾರೆ.

ಐ ಲೈಕ್ ಯು ಕಾರ್ತಿಕ್ ಎಂದ ನಮ್ರತಾ, ಪಾಪ ಸ್ನೇಹಿತ್ ಕತೆ ಏನು?
ಮಂಜುನಾಥ ಸಿ.
|

Updated on: Jan 04, 2024 | 11:39 PM

Share

ಬಿಗ್​ಬಾಸ್ (BiggBoss) ಮನೆಯಲ್ಲಿ ಪ್ರೀತಿ-ಪ್ರೇಮ ಸಾಮಾನ್ಯ ಎಂಬಂತಾಗಿದೆ. ಕೆಲವು ಸ್ಪರ್ಧಿಗಳಂತೂ ಪ್ರೇಕ್ಷಕರನ್ನು ಸೆಳೆಯಲೆಂದೇ ಪ್ರೀತಿ-ಪ್ರೇಮದ ಮಾತನಾಡುವುದು ಹಾಗೆ ನಡೆದುಕೊಳ್ಳುವುದು ಮಾಡುತ್ತಾರೆಂಬ ಆರೋಪವೂ ಇದೆ. ಈ ಸೀಸನ್​ನಲ್ಲಿ ಮನೆಯಲ್ಲಿ ಮೂರು ಪ್ರೇಮಕತೆಗಳ ರೀತಿ ಕಾಣಿಸಿಕೊಂಡವು. ಮೂರೂ ಸಹ ಅರ್ಧದಲ್ಲಿಯೇ ಮುರುಟಿ ಹೋದವು. ಇದೀಗ ಇನ್ನೇನು ಫಿನಾಲೆ ಹತ್ತಿರ ಬರುತ್ತಿರುವಾಗ ಕಾರ್ತಿಕ್ ಹಾಗೂ ನಮ್ರತಾ ನಡುವೆ ಚರ್ಚೆ ಶುರುವಾಗಿದೆ.

ಕಾರ್ತಿಕ್, ಬಿಗ್​ಬಾಸ್ ಮನೆಯ ಪ್ಲೇ ಬಾಯ್. ಮೊದಲ ಕೆಲ ವಾರ ಸಂಗೀತಾ ಜೊತೆಗೆ ಹೆಚ್ಚು ಗುರುತಿಸಿಕೊಂಡಿದ್ದ ಕಾರ್ತಿಕ್, ಬಳಿಕ ಸಂಗೀತಾ ಜೊತೆ ಜಗಳವಾಡಿಕೊಂಡು ದೂರಾಗಿದ್ದರು. ಇತ್ತೀಚೆಗೆ ಕಾರ್ತಿಕ್, ನಮ್ರತಾ ಹಿಂದೆ ಬಿದ್ದಿದ್ದಾರೆ. ಅಪರೂಪಕ್ಕೆ ನಮ್ರತಾ ಸಹ ಕಾರ್ತಿಕ್​ಗೆ ನೀನು ಇಷ್ಟ, ನಿನ್ನೊಟ್ಟಿಗೆ ಡೇಟಿಂಗ್​ಗೆ ಹೋಗುವಾಸೆ ಎಂದು ಗಂಭೀರವಾಗಿ ಹೇಳಿದ್ದಾರೆ. ಇದು ಕಾರ್ತಿಕ್ ಅನ್ನು ಗೊಂದಲಕ್ಕೆ ಸಿಲುಕಿಸಿದೆ.

ಎಂದಿನಂತೆ ಕಾರ್ತಿಕ್, ನಮ್ರತಾರೊಟ್ಟಿಗೆ ಫ್ಲರ್ಟ್ ಮಾಡುತ್ತಿದ್ದರು. ಆರಂಭದಲ್ಲಿ ಕಾರ್ತಿಕ್​ ಅನ್ನು ಹೋಗುವಂತೆ ಹೇಳಿದ ನಮ್ರತಾ, ಕೊನೆಗೆ, ನೀನು ಫ್ಲರ್ಟ್ ಮಾಡಿದರೆ ಹುಡುಗಿ ನಿನ್ನ ಹಿಂದೆ ಬಿದ್ದು ಬಿಡಬೇಕಾ? ಎಂದು ಕೇಳಿದರು. ಬಳಿಕ ಆಯ್ತು, ನನಗೆ ನೀನು ಇಷ್ಟ. ‘ಐ ಲೈಕ್ ಯು’ ಎಂದರು. ನಮ್ರತಾರ ಉತ್ತರದಿಂದ ಗಾಬರಿಯಾದ ಕಾರ್ತಿಕ್​ಗೆ ಏನು ಹೇಳಬೇಕೆಂಬುದು ತಿಳಿಯಲಿಲ್ಲ. ಸುಮ್ಮನಾಗಿಬಿಟ್ಟರು.

ಇದನ್ನೂ ಓದಿ:ಮತ್ತೆ ಒಂಟಿಯಾದ ಕಾರ್ತಿಕ್ ಮಹೇಶ್, ಫೈನಲ್​ಗೆ ಬರ್ತಾರಾ ಇಲ್ಲವಾ?

ಬಳಿಕ ಮಾತು ಮುಂದುವರೆದ ನಮ್ರತಾ, ನಾನು ನಿನ್ನೊಟ್ಟಿಗೆ ಡೇಟಿಂಗ್​ಗೆ ಹೋಗುತ್ತೀನಿ ಎಂದು ಹೇಳಿದ್ದೀನಿ, ಅದನ್ನು ನಿಜಕ್ಕೂ ಹೇಳಿದ್ದೀನಿ, ಶೋ ಎಂಬ ಕಾರಣಕ್ಕೋ, ಕ್ಯಾಮೆರಾಗಳು ಇವೆ ಎಂಬ ಕಾರಣಕ್ಕೋ ಹೇಳಿಲ್ಲ ಎಂದರು. ನಮ್ರತಾರ ಈ ಮಾತುಗಳು ಕಾರ್ತಿಕ್​ರನ್ನು ಇನ್ನಷ್ಟು ಗೊಂದಲಕ್ಕೆ ಸಿಲುಕಿಸಿತು. ಅವರಿಗೆ ಪಾಪ ಏನು ಮಾತನಾಡಬೇಕೆಂದೇ ತಿಳಿಯಲಿಲ್ಲ. ಅಂದಹಾಗೆ ಮನೆಯಲ್ಲಿ ಆಗೊಮ್ಮೆ-ಈಗೊಮ್ಮೆ ಬಂದ ಚರ್ಚೆಗಳ ಪ್ರಕಾರ, ಕಾರ್ತಿಕ್​ಗೆ ಹೊರಗೆ ಈಗಾಗಲೇ ಒಬ್ಬರು ಗರ್ಲ್​ಫ್ರೆಂಡ್ ಇದ್ದಾರೆ, ಆದರೆ ಆ ಬಗ್ಗೆ ಮನೆಯಲ್ಲಿ ಅವರು ಹೆಚ್ಚಿಗೆ ಮಾತನಾಡಿಲ್ಲ.

ಇನ್ನು ಇದೇ ಸೀಸನ್​ನ ಮಾಜಿ ಸ್ಪರ್ಧಿ ಸ್ನೇಹಿತ್, ನಮ್ರತಾರ ಮುಂದೆ ಪ್ರೀತಿ ವಿಷಯ ಹೇಳಿಕೊಂಡಿದ್ದರು. ನಮ್ರತಾ ಬಗ್ಗೆ ಸ್ನೇಹಿತ್ ಬಹಳ ಗಂಭೀರವಾಗಿದ್ದರು. ಹಲವು ಬಾರಿ ಪ್ರೇಮ ನಿವೇದನೆ ಮಾಡಿದ್ದರು. ಆದರೆ ನಮ್ರತಾ ಅದನ್ನು ತಣ್ಣಗೆ ನಿರಾಕರಿಸುತ್ತಲೇ ಬಂದಿದ್ದರು. ಹೊರಗೆ ಆಗಿದ್ದಿದ್ದರೆ ಯೋಚನೆ ಮಾಡಬಹುದಿತ್ತು ಎಂದ ಸಹ ನಮ್ರತಾ ಹೇಳಿದ್ದರು. ಈಗ ನಮ್ರತಾ, ಕಾರ್ತಿಕ್​ಗೆ ‘ಐ ಲೈಕ್ ಯು’ ಎಂದಿದ್ದು ನೋಡಿ ಪಾಪ ಸ್ನೇಹಿತ್ ಹೃದಯ ಒಡೆದಿರಬೇಕು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ