Bigg Boss Kannada: ‘ಬಿಗ್ ಬಾಸ್’ ಕೊಡ್ತಿರೋ ಕಾಟಕ್ಕೆ ಸ್ಪರ್ಧಿಗಳು ಸುಸ್ತೋ ಸುಸ್ತು

ಬಿಗ್ ಬಾಸ್​ನಲ್ಲಿ ಈ ವಾರ ಪೌಸ್ ಆ್ಯಂಡ್ ಪ್ಲೇ ಚಟುವಟಿಕೆ ನೀಡಲಾಗಿದೆ. ಪೌಸ್ ಎಂದಾಗ ಎಲ್ಲಾ ಸ್ಪರ್ಧಿಗಳು ಸೈಲೆಂಟ್ ಆಗಿ ನಿಲ್ಲಬೇಕು. ತುಕಾಲಿ ಸಂತೋಷ್​ ಅವರಿಗೆ ಬಿಗ್ ಬಾಸ್ ಸಾಕಷ್ಟು ಕಾಟ ನೀಡಿದ್ದಾರೆ.

Bigg Boss Kannada: ‘ಬಿಗ್ ಬಾಸ್’ ಕೊಡ್ತಿರೋ ಕಾಟಕ್ಕೆ ಸ್ಪರ್ಧಿಗಳು ಸುಸ್ತೋ ಸುಸ್ತು
ತುಕಾಲಿ ಸಂತೋಷ್
Follow us
ರಾಜೇಶ್ ದುಗ್ಗುಮನೆ
|

Updated on: Dec 28, 2023 | 7:37 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ನಲ್ಲಿ ಇಷ್ಟು ದಿನ ಸ್ಪರ್ಧಿಗಳು ಬಿಗ್ ಬಾಸ್​ಗೆ ಟಾರ್ಚರ್ ನೀಡುತ್ತಿದ್ದರು. ಏನೇ ಆದರೂ ಬಿಗ್ ಬಾಸ್​ನ (Bigg Boss) ಕರೆದು ದೂರು ನೀಡುತ್ತಿದ್ದರು. ಆದರೆ, ಈಗ ಸ್ಪರ್ಧಿಗಳಿಗೇ ಬಿಗ್ ಬಾಸ್ ಕಾಟ ಕೊಡುತ್ತಿದ್ದಾರೆ. ಈ ಕಾಟವನ್ನು ತಡೆದುಕೊಳ್ಳಲಾಗದೇ ಸ್ಪರ್ಧಿಗಳು ಸುಸ್ತಾಗಿದ್ದಾರೆ. ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಸ್ಪರ್ಧಿಗಳಿದ್ದಾರೆ. ಅಷ್ಟಕ್ಕೂ ದೊಡ್ಮನೆಯಲ್ಲಿ ಆಗುತ್ತಿರುವುದು ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್​ನಲ್ಲಿ ಈ ವಾರ ಪೌಸ್ ಆ್ಯಂಡ್ ಪ್ಲೇ ಚಟುವಟಿಕೆ ನೀಡಲಾಗಿದೆ. ಪೌಸ್ ಎಂದಾಗ ಎಲ್ಲಾ ಸ್ಪರ್ಧಿಗಳು ಸೈಲೆಂಟ್ ಆಗಿ ನಿಲ್ಲಬೇಕು. ಪ್ಲೇ ಎಂದಾಗ ಮುಂದುವರಿಯಬೇಕು. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಡಿಸೆಂಬರ್ 27ರಂದು ಪ್ರಸಾರವಾದ ಎಪಿಸೋಡ್​ನಲ್ಲಿ ಸ್ಪರ್ಧಿಗಳು ಸುಸ್ತಾಗಿದ್ದಾರೆ.  ತುಕಾಲಿ ಸಂತೋಷ್​ ಅವರಿಗೆ ಬಿಗ್ ಬಾಸ್ ಸಾಕಷ್ಟು ಕಾಟ ನೀಡಿದ್ದಾರೆ.

ವರ್ಕೌಟ್ ಏರಿಯಾಗೆ ತುಕಾಲಿ ಸಂತೋಷ್ ಎಂದಿಗೂ ತೆರಳಿದವರಲ್ಲ. ಆದಾಗ್ಯೂ ಅವರು ಅಲ್ಲಿಗೆ ಹೋದರು. ವಿನಯ್ ಹಾಗೂ ಕಾರ್ತಿಕ್ ಬಳಿ ವರ್ಕೌಟ್ ಹೇಳಿಸಿಕೊಳ್ಳುತ್ತಿದ್ದರು. ಆಗಲೇ ಬಿಗ್ ಬಾಸ್ ತುಕಾಲಿ ಸಂತೋಷ್​ಗೆ ಪೌಸ್ ಎಂದರು. ಬಿಸಿಲು ಇದ್ದಿದ್ದರಿಂದ ಸಂತೋಷ್ ಕಾಲು ಸುಡುತ್ತಿತ್ತು. ಹೀಗಾಗಿ, ನೀರು ತಂದು ಹಾಕುವಂತೆ ಅವರು ಕೋರಿದರು. ಕಾರ್ತಿಕ್ ಆರಂಭದಲ್ಲಿ ಕಾಲಿಗೆ ನೀರು ತಂದು ಹಾಕಿದರು.

ಆ ಬಳಿಕ ಹಿಂಭಾಗಕ್ಕೆ ನೀರು ಹಾಕುವ ಪ್ರಯತ್ನಕ್ಕೆ ಮುಂದಾದರು. ಇನ್ನೇನು ನೀರು ಹಾಕಬೇಕು ಎನ್ನುವಾಗ ಬಿಗ್ ಬಾಸ್ ಪೌಸ್ ಎಂದರು. ಆ ಬಳಿಕ ಅಲ್ಲಿಯೇ ಇದ್ದ ವಿನಯ್ ಹಾಗೂ ಮೈಕಲ್ ಅವರು ನೀರು ಹಾಕಲು ಮುಂದಾದರು ಅವರಿಗೂ ಪೌಸ್ ಎಂದರು ಬಿಗ್ ಬಾಸ್.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಪತ್ನಿ ಕೊಟ್ಟ ಮಾತಿನ ಪೆಟ್ಟಿಗೆ ಕಂಗಾಲಾದ ತುಕಾಲಿ ಸಂತೋಷ್

ಈ ಘಟನೆ ನೋಡಲು ಒಳಗಿನಿಂದ ಮಹಿಳಾ ಸ್ಪರ್ಧಿಗಳು ಬಂದರು. ಅವರು ಕೂಡ ನೀರು ಹಾಕುವ ಪ್ರಯತ್ನಕ್ಕೆ ಮುಂದಾದರು. ಅವರಿಗೂ ಪೌಸ್ ಬಿತ್ತು. ಸದ್ಯ ಬಿಗ್ ಬಾಸ್ ಮನೆಯಲ್ಲಿ ಪೌಸ್, ಪ್ಲೇ ಆಟ ಸಾಕಷ್ಟು ಫನ್ ನೀಡುತ್ತಿದೆ. ಸ್ಪರ್ಧಿಗಳು ಇದರಿಂದ ಸುಸ್ತಾಗಿದ್ದಾರೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಶೋ ಪ್ರಸಾರ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ