Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಪತ್ನಿ ಕೊಟ್ಟ ಮಾತಿನ ಪೆಟ್ಟಿಗೆ ಕಂಗಾಲಾದ ತುಕಾಲಿ ಸಂತೋಷ್

ಬಿಗ್ ಬಾಸ್ ಮನೆಯಲ್ಲಿ ಪತ್ನಿ ಕೊಟ್ಟ ಮಾತಿನ ಪೆಟ್ಟಿಗೆ ಕಂಗಾಲಾದ ತುಕಾಲಿ ಸಂತೋಷ್

ರಾಜೇಶ್ ದುಗ್ಗುಮನೆ
|

Updated on: Dec 26, 2023 | 2:23 PM

‘ನನ್ನ ಪತ್ನಿಯನ್ನು ಮಾತ್ರ ಕಳುಹಿಸಬೇಡಿ’ ಎಂದು ಸಂತೋಷ್ ಮನವಿ ಮಾಡಿಕೊಂಡಿದ್ದರು. ಇದೇ ವಿಚಾರ ಇಟ್ಟುಕೊಂಡು ಅವರ ಪತ್ನಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ತುಕಾಲಿ ಸಂತೋಷ್ ಅವರದ್ದು ಪ್ರೇಮ ವಿವಾಹ. ಅನೇಕ ಬಾರಿ ಅವರು ಬಿಗ್ ಬಾಸ್ ಮನೆಯಲ್ಲಿ ಪತ್ನಿಯನ್ನು ನೆನಪಿಸಿಕೊಂಡಿದ್ದಿದೆ. ಈ ವಾರ ಫ್ಯಾಮಿಲಿ ವೀಕ್. ಹೀಗಾಗಿ, ಸ್ಪರ್ಧಿಗಳ ಕುಟುಂಬದವರು ದೊಡ್ಮನೆಗೆ ಬರುತ್ತಿದ್ದಾರೆ. ಅದೇ ರೀತಿ ಬಿಗ್ ಬಾಸ್ ಮನೆಗೆ ತುಕಾಲಿ ಸಂತೋಷ್ (Tukali Santosh) ಅವರ ಪತ್ನಿಯ ಆಗಮನ ಆಗಿದೆ. ಆರಂಭದಲ್ಲಿ ‘ನನ್ನ ಪತ್ನಿಯನ್ನು ಮಾತ್ರ ಕಳುಹಿಸಬೇಡಿ’ ಎಂದು ಸಂತೋಷ್ ಮನವಿ ಮಾಡಿಕೊಂಡಿದ್ದರು. ಇದೇ ವಿಚಾರ ಇಟ್ಟುಕೊಂಡು ಅವರ ಪತ್ನಿ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ನನ್ನ ಪತ್ನಿ ಊರಲ್ಲಿ ಎಮ್ಮೆ ಕಾಯುತ್ತಿದ್ದಳು’ ಎಂದರು ಸಂತೋಷ್. ಇದಕ್ಕೂ ಅವರ ಪತ್ನಿ ತಿರುಗೇಟು ಕೊಟ್ಟಿದ್ದಾರೆ. ‘ಇವನೇನು ಮೈಸೂರಿನಲ್ಲಿ ಅರ್ಜುನನ (ಆನೆ) ಕಾಯ್ತಾ ಇದ್ನಾ’ ಎಂದಿದ್ದಾರೆ. ಈ ಪ್ರೋಮೋ ಗಮನ ಸೆಳೆದಿದೆ. ಇಂದು (ಡಿಸೆಂಬರ್ 26) ಈ ಎಪಿಸೋಡ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ