Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮಂದಿಯ ಒಗ್ಗಟ್ಟಿನ ಹಿಂದೆ ಇದೆಯಾ ಕುತಂತ್ರ? ಬುದ್ಧಿವಂತಿಕೆಯಿಂದ ಯೋಚಿಸಿದ ತುಕಾಲಿ ಸಂತೋಷ್​

ಬಿಗ್​ ಬಾಸ್​ ಮನೆಯಲ್ಲಿ ಯಾರು ಯಾವಾಗ ಬದಲಾಗುತ್ತಾರೆ ಅಂತ ಹೇಳೋದು ಕಷ್ಟ. ಆ ಕಾರಣದಿಂದ ಯಾರನ್ನೂ ನಂಬೋಕೆ ಆಗಲ್ಲ. ಹಾಗಾಗಿ ತುಕಾಲಿ ಸಂತೋಷ್​ ಅವರು ತಮ್ಮ ನಿರ್ಧಾರ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ವರ್ತೂರು ಸಂತೋಷ್​ ಜೊತೆ ಅವರು ಈ ಕುರಿತು ಚರ್ಚೆ ಮಾಡಿದ್ದಾರೆ.

ಬಿಗ್​ ಬಾಸ್​ ಮಂದಿಯ ಒಗ್ಗಟ್ಟಿನ ಹಿಂದೆ ಇದೆಯಾ ಕುತಂತ್ರ? ಬುದ್ಧಿವಂತಿಕೆಯಿಂದ ಯೋಚಿಸಿದ ತುಕಾಲಿ ಸಂತೋಷ್​
ವರ್ತೂರು ಸಂತೋಷ್​, ತುಕಾಲಿ ಸಂತೋಷ್​
Follow us
ಮದನ್​ ಕುಮಾರ್​
|

Updated on: Dec 25, 2023 | 10:42 PM

ಹಾಸ್ಯ ನಟ ತುಕಾಲಿ ಸಂತೋಷ್​ (Tukali Santhosh) ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲಿ ಸಖತ್​ ಮನರಂಜನೆ ನೀಡುತ್ತಿದ್ದಾರೆ. ಟಾಸ್ಕ್​ ವಿಚಾರದಲ್ಲೂ ಅವರು ಹಿಂದುಳಿಯುತ್ತಿಲ್ಲ. ನಗಿಸುವುದರ ಜೊತೆಗೆ ಅವರು ಭರ್ಜರಿ ಪೈಪೋಟಿ ಕೂಡ ನೀಡುತ್ತಿದ್ದಾರೆ. ದೊಡ್ಮನೆಯಲ್ಲಿ 78 ದಿನಗಳನ್ನು ಕಳೆದಿರುವ ಅವರಿಗೆ ಎಲ್ಲರ ಆಟವೂ ಅರ್ಥವಾಗುತ್ತಿದೆ. ಇತ್ತೀಚೆಗೆ ವಿನಯ್​ ಗೌಡ (Vinay Gowda) ಅವರು ಹೊಸ ತಂತ್ರಗಾರಿಕೆ ರೂಪಿಸಿದ್ದಾರೆ. ಅದರ ಹಿಂದೆ ಇರುವ ಉದ್ದೇಶ ಏನು ಎಂಬುದನ್ನು ತುಕಾಲಿ ಸಂತೋಷ್​ ಅವರು ಊಹಿಸಿದ್ದಾರೆ. ಅ ಬಗ್ಗೆ ವರ್ತೂರು ಸಂತೋಷ್​ (Varthur Santhosh) ಬಳಿ ಅವರು ಚರ್ಚೆ ಮಾಡಿದ್ದಾರೆ.

ಇಷ್ಟು ದಿನಗಳ ಕಾಲ ಆಕ್ರಮಣಕಾರಿಯಾಗಿ ಆಟ ಆಡುತ್ತಿದ್ದ ವಿನಯ್​ ಗೌಡ ಅವರು ಈಗ ತಮ್ಮ ಮನಸ್ಸು ಬದಲಾಯಿಸಿಕೊಂಡಿದ್ದಾರೆ. ಇನ್ಮುಂದೆ ಹೊಡೆದಾಡುವುದು ಬೇಡ ಎಂದು ಅವರು ತೀರ್ಮಾನಿಸಿದ್ದಾರೆ. ಅವರ ಮಾತಿನ ಮೇಲೆ ತುಕಾಲಿ ಸಂತೋಷ್​ ಅವರಿಗೆ ನಂಬಿಕೆ ಬಂದಿಲ್ಲ. ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬುದನ್ನು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಡಿವೋರ್ಸ್​ ನಿರ್ಧಾರ; ದಂಪತಿ ಜಗಳಕ್ಕೆ ಪ್ರೇಕ್ಷಕರು ಶಾಕ್​

‘ವಿನಯ್ ಬದಲಾಗಿರಬಹುದು. ನಾವು ಬದಲಾಗಲ್ಲ’ ಎಂಬರ್ಥದಲ್ಲಿ ತುಕಾಲಿ ಸಂತೋಷ್​ ಮಾತನಾಡಿದ್ದಾರೆ. ಈಗ ಎಲ್ಲರೂ ಒಗ್ಗಟ್ಟಿನಲ್ಲಿ ಇರುವ ರೀತಿ ಮಾತನಾಡುತ್ತಾರೆ. ಆದರೆ ಅಸಲಿ ವಿಷಯ ಆ ರೀತಿ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ. ಹಾಗಾಗಿ ತಾವು ಇಂಥ ಮಾತುಗಳಿಗೆ ಮರುಳಾಗುವುದಿಲ್ಲ ಎಂದು ತುಕಾಲಿ ಸಂತೋಷ್​ ಹೇಳಿದ್ದಾರೆ. ವರ್ತೂರು ಸಂತೋಷ್​ ಜೊತೆ ಅವರು ಮೊದಲಿನಿಂದಲೂ ಸ್ನೇಹ ಹೊಂದಿದ್ದಾರೆ.

ಇದನ್ನೂ ಓದಿ: ‘ಬಿಗ್​ ಬಾಸ್​ ಫಿನಾಲೆಯ ಟಾಪ್​ 2 ಸ್ಥಾನಕ್ಕೆ ಸಂಗೀತಾ ಬರಲ್ಲ’: ಪವಿ ಪೂವಪ್ಪ ನೇರ ಅಭಿಪ್ರಾಯ

ಬಿಗ್​ ಬಾಸ್​ ಮನೆಯಲ್ಲಿ ಯಾರು ಯಾವಾಗ ಬದಲಾಗುತ್ತಾರೆ ಎಂದು ಹೇಳೋದು ಕಷ್ಟ. ಆ ಕಾರಣದಿಂದ ಯಾರನ್ನೂ ನಂಬೋಕೆ ಆಗಲ್ಲ. ಹಾಗಾಗಿ ತುಕಾಲಿ ಸಂತೋಷ್​ ಅವರು ಹೀಗೆ ಹೇಳಿದ್ದಾರೆ. ಸಂಗೀತಾ ಶೃಂಗೇರಿ, ಕಾರ್ತಿಕ್​ ಮಹೇಶ್​, ಡ್ರೋನ್​ ಪ್ರತಾಪ್​, ತುಕಾಲಿ ಸಂತೋಷ್​, ವರ್ತೂರು ಸಂತೋಷ್​, ನಮ್ರತಾ ಗೌಡ, ತನಿಷಾ ಕುಪ್ಪಂಡ, ಸಿರಿ, ಮೈಕಲ್​ ಅಜಯ್​, ವಿನಯ್​ ಗೌಡ ಅವರ ನಡುವೆ ಪೈಪೋಟಿ ಮುಂದುವರಿದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್