ತುಕಾಲಿ ಸಂತು-ಅವಿನಾಶ್ ಯಾವ ಪ್ರಾಣಿಯ ಚಿತ್ರ ಬರೆದಿದ್ದಾರೆ ಗರುತಿಸಬಲ್ಲಿರಾ?
Bigg Boss Kannada: ತುಕಾಲಿ ಸಂತು ಹಾಗೂ ಅವಿನಾಶ್ ಬಿಗ್ಬಾಸ್ ಮನೆಯಲ್ಲಿ ಬರೆದ ಚಿತ್ರಗಳಿವು. ಇದು ಒಂದು ಕಾಡು ಪ್ರಾಣಿಯ ಚಿತ್ರ. ಆ ಪ್ರಾಣಿ ಯಾವುದೆಂದು ಊಹಿಸಬಲ್ಲಿರಾ?
ಬಿಗ್ಬಾಸ್ನಲ್ಲಿ (Bigg Boss) ವೀಕೆಂಡ್ಗಳು ಸಖತ್ ಮಜಾ ಕೊಡುತ್ತವೆ. ಶನಿವಾರ ಮತ್ತು ಭಾನುವಾರ ಬರುವ ಸುದೀಪ್, ಶನಿವಾರ ತುಸು ಗಂಭೀರವಾಗಿರುತ್ತಾರೆ ಆದರೆ ಭಾನುವಾರ ಫನ್ನಿಯಾಗಿ ಕೆಲವು ಆಟಗಳನ್ನು ಆಡಿಸಿ ಸ್ಪರ್ಧಿಗಳನ್ನು ನಗಿಸುತ್ತಾರೆ. ಕೊನೆಗೆ ಒಬ್ಬರನ್ನು ಮನೆಯಿಂದ ಹೊರಗೆ ಕರೆಯುತ್ತಾರೆ. ಈ ವಾರಾಂತ್ಯದಲ್ಲಿ ಸುದೀಪ್ ಮನೆಗೆ ಬಂದಿರಲಿಲ್ಲ. ಅವರ ಬದಲಿಗೆ ಶನಿವಾರ ಶ್ರುತಿ ಬಂದಿದ್ದರು. ಭಾನುವಾರ ಶೈನ್ ಶೆಟ್ಟಿ ಮತ್ತು ಶುಭಾ ಪೂಂಜಾ ಬಂದಿದ್ದರು. ಭಾನುವಾರದ ಎಪಿಸೋಡ್ನಲ್ಲಿ ಸ್ಪರ್ಧಿಗಳಿಂದ ಫನ್ನಿ ಆದ ಟಾಸ್ಕ್ಗಳನ್ನು ಆಡಿಸಿ ಮನೊರಂಜನೆ ಒದಗಿಸಿದರು.
ಕೆಲವು ದಿನಗಳ ಹಿಂದೆ ಚಿತ್ ಬರೆಯುವ ಟಾಸ್ಕ್ ಒಂದನ್ನು ಮನೆಯಲ್ಲಿ ಆಡಿಸಲಾಗಿತ್ತು. ಆ ಟಾಸ್ಕ್ನಲ್ಲಿ ಸಂಗೀತಾ ತಂಡದಲ್ಲಿದ್ದ ತುಕಾಲಿ ಸಂತು ಬಹಳ ಕೆಟ್ಟದಾಗಿ ಆಡಿದ್ದರು. ಎದುರಾಳಿ ತಂಡದಲ್ಲಿದ್ದ ಅವಿನಾಶ್ ಸಹ ಸರಿಯಾಗಿ ಪ್ರದರ್ಶನ ನೀಡಿರಲಿಲ್ಲ. ಭಾನುವಾರ ಮನೆಗೆ ಬಂದ ಶೈನ್ ಹಾಗೂ ಶುಭಾ, ತುಕಾಲಿ ಸಂತು ಹಾಗೂ ಅವಿನಾಶ್ ಅವರುಗಳಿಂದ ಅದೇ ಟಾಸ್ಕ್ ಅನ್ನು ಮತ್ತೊಮ್ಮೆ ಆಡಿಸಿದರು. ಸಖತ್ ಮಜಾ ಕೊಟ್ಟಿತು ತುಕಾಲಿ ಹಾಗೂ ಅವಿನಾಶ್ ಅವರ ಚಿತ್ರಗಳು.
ಶೈನ್ ಶೆಟ್ಟಿ ಕನ್ನಡ ಸಿನಿಮಾಗಳ ಹೆಸರನ್ನು ಅವಿನಾಶ್ ಹಾಗೂ ತುಕಾಲಿ ಸಂತುಗೆ ತೋರಿಸುತ್ತಾರೆ. ಅವರಿಬ್ಬರೂ ಆ ಹೆಸರನ್ನು ನೋಡಿ ಅದನ್ನು ನೋಡಿ ಅದಕ್ಕೆ ಸಂಬಂಧಿಸಿದ ಚಿತ್ರವನ್ನು ಬೋರ್ಡ್ ಮೇಲೆ ಬರೆಯಬೇಕಿತ್ತು. ಯಾರು ಆ ಚಿತ್ರವನ್ನು ನೋಡಿ ಹೆಸರು ಊಹಿಸುತ್ತಾರೆಯೋ ಅವರು ಗೆದ್ದಂತೆ. ‘ಹೆಬ್ಬುಲಿ’, ‘ಮುಂಗಾರು ಮಳೆ’, ‘ಪಾಪ್ಕಾರ್ನ್ ಮಂಕಿ ಟೈಗರ್’, ‘ಮೊನಾಲಿಸಾ’ ಇನ್ನೂ ಕೆಲವು ಸಿನಿಮಾಗಳ ಹೆಸರನ್ನು ಚಿತ್ರದ ಮೂಲಕ ಮೂಡಿಸುವ ಪ್ರಯತ್ನ ಮಾಡಿದರು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಹಾಡು-ಕುಣಿತ: ಡ್ರೋನ್-ವರ್ತೂರು ಸ್ಟೆಪ್ಪು ನೋಡಿ
ತುಕಾಲಿ ಮತ್ತು ಅವಿನಾಶ್ ಪರಸ್ಪರರ ಮೇಲೆ ಸ್ಪರ್ಧೆಗೆ ಬಿದ್ದಂತೆ ಒಬ್ಬರಿಗಿಂತಲೂ ಒಬ್ಬರು ಕೆಟ್ಟದಾಗಿ ಚಿತ್ರಗಳನ್ನು ಬರೆದರು. ಮನೆಯ ಇತರೆ ಸ್ಪರ್ಧಿಗಳಂತೂ ಸಿನಿಮಾ ಹೆಸರು ಊಹಿಸಲು ತಡಕಾಡಿಬಿಟ್ಟರು. ತುಕಾಲಿ ಸಂತು ಹಾಗೂ ಅವಿನಾಶ್ ಬರೆದಿದ್ದ ‘ಹೆಬ್ಬುಲಿ’ ಚಿತ್ರವಂತೂ ಮನೆಯ ಸದಸ್ಯರು ಉರುಳಾಡಿಕೊಂಡು ನಗುವಂತೆ ಮಾಡಿತು. ‘ಮೋನಾಲಿಸಾ’ ಚಿತ್ರವೂ ಸಹ. ಆದರೆ ಕಟ್ಟ ಕಡೆಯದಾಗಿ ‘ಮುಂಗಾರು ಮಳೆ’ ಸಿನಿಮಾವನ್ನು ಬಹಳ ಕಷ್ಟಪಟ್ಟು ತುಕಾಲಿ ತಂಡದವರು ಊಹಿಬಿಟ್ಟರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:16 pm, Sun, 24 December 23