ವಿನಯ್​ ಜೊತೆ ವಾಗ್ವಾದ, ಪ್ರಶ್ನಿಸುವ ಧೈರ್ಯ ಪ್ರದರ್ಶಿಸಿದ ಡ್ರೋನ್ ಪ್ರತಾಪ್

Drone Prathap: ವಿನಯ್​ ಕಾರ್ಯಗಳನ್ನು ಸಂಗೀತಾ ಬಿಟ್ಟರೆ ಇನ್ಯಾರು ಪ್ರಶ್ನಿಸುವುದಿಲ್ಲ ಎಂದಾಗಿತ್ತು, ಈಗ ಡ್ರೋನ್ ಪ್ರತಾಪ್ ಪ್ರಶ್ನೆ ಮಾಡಿದ್ದಾರೆ.

ವಿನಯ್​ ಜೊತೆ ವಾಗ್ವಾದ, ಪ್ರಶ್ನಿಸುವ ಧೈರ್ಯ ಪ್ರದರ್ಶಿಸಿದ ಡ್ರೋನ್ ಪ್ರತಾಪ್
ಡ್ರೋನ್ ಪ್ರತಾಪ್
Follow us
ಮಂಜುನಾಥ ಸಿ.
|

Updated on: Dec 24, 2023 | 3:50 PM

ಬಿಗ್​ಬಾಸ್ (BiggBoss) ಮನೆಯಲ್ಲಿ ವಿನಯ್ ಒಂದು ರೀತಿ ಪ್ರಶ್ನಾತೀತರಾಗಿಬಿಟ್ಟಿದ್ದಾರೆ. ಅವರು ತಪ್ಪು ಮಾಡಿದಾಗ ಸಂಗೀತಾರನ್ನು ಹೊರತುಪಡಿಸಿ ಇನ್ಯಾರೂ ಪ್ರಶ್ನಿಸುವುದಿಲ್ಲ. ಎದುರಾಳಿ ತಂಡದಲ್ಲಿದ್ದಾಗ ಕಾರ್ತಿಕ್ ಆಗಾಗ್ಗೆ ವಿನಯ್​ ಹೇಳಿದ ಮಾತಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದರೆ ಈಗ ಇಬ್ಬರೂ ಒಂದೇ ತಂಡವಾದ ಬಳಿಕ ವಿನಯ್​ರ ಮಾತುಗಳನ್ನು, ವರ್ತನೆಯನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ. ಆದರೆ ಇದೀಗ ಡ್ರೋನ್ ಪ್ರತಾಪ್ ಸಹ ವಿನಯ್​ರನ್ನು ಪ್ರಶ್ನಿಸಲು ತೊಡಗಿದ್ದಾರೆ.

ಆರಂಭದ ಕೆಲ ವಾರಗಳಲ್ಲಿ ವಿನಯ್, ಡ್ರೋನ್ ಪ್ರತಾಪ್​ ವಿರುದ್ಧ ಕೆಲವು ಬಾರಿ ವಾಗ್ದಾಳಿ ಮಾಡಿದ್ದರು. ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದ್ದರು. ನನ್ನ ತಂಟೆಗೆ ಬರಬೇಡ ಎಂದು ಎಚ್ಚರಿಕೆ ಸಹ ನೀಡಿದ್ದರು. ಆಗೆಲ್ಲ ಭಯದಿಂದಾಗಿ ಸುಮ್ಮನಾಗಿದ್ದರು ಡ್ರೋನ್ ಪ್ರತಾಪ್, ಅದಾದ ಬಳಿಕ ವಿನಯ್​ರಿಂದ ಬಹುತೇಕ ದೂರವೇ ಉಳಿದಿದ್ದರು. ವಿನಯ್ ಸಹ ಡ್ರೋನ್ ಪ್ರತಾಪ್​ ತಂಟೆಗೆ ಹೆಚ್ಚಾಗಿ ಹೋಗಿರಲಿಲ್ಲ. ಆದರೆ ಇತ್ತೀಚೆಗೆ ಪ್ರತಾಪ್, ಮನೆಯ ಕೆಲವರ ಮಾತು ಕೇಳಿ ಮುದ್ದೆ ಮಾಡಿದ್ದರು. ಇದರಿಂದ ಇತರರಿಗೆ ಊಟ ಬರಲಿಲ್ಲ. ಆ ಸಮಯದಲ್ಲಿ ವಿನಯ್, ಪದೇ ಪದೆ ಪ್ರತಾಪ್ ವಿರುದ್ಧ ಬೆದರಿಕೆ ಹಾಕುವ ರೀತಿ ಮಾತನಾಡಿದ್ದರು. ಆಗ ಪ್ರತಾಪ್ ಕ್ಷಮೆ ಕೇಳಿದ್ದರು.

ಇದನ್ನೂ ಓದಿ:ಬಿಗ್​ಬಾಸ್ ಸ್ಪರ್ಧಿಗಳ ಹರಾಜು ಯಾರಿಗೆ ಎಷ್ಟು ಹಣ?

ಶನಿವಾರ ಪ್ರಸಾರವಾದ ಎಪಿಸೋಡ್​ನಲ್ಲಿ ವಿನಯ್​ ಮಾಡಿದ ತಪ್ಪಿನಿಂದಾಗಿ ಮನೆಯ ಸದಸ್ಯರು ಲಕ್ಷುರಿ ಬಜೆಟ್ ಕಳೆದುಕೊಂಡರು. ವಿನಯ್, ಬಜರ್ ಆಗುವ ಮುನ್ನವೇ ಟಿವಿ ಆನ್ ಮಾಡಿದ್ದರಿಂದ ಈ ವಾರವೂ ಲಕ್ಷುರಿ ಬಜೆಟ್ ಹೋಯ್ತು. ಇದರ ಬಗ್ಗೆ ಮನೆಯ ಯಾವ ಸದಸ್ಯರು ವಿನಯ್ ಎದುರು ಪ್ರಶ್ನೆ ಮಾಡಿರಲಿಲ್ಲ. ಆದರೆ ಡ್ರೋನ್ ಪ್ರತಾಪ್ ಮಾಡಿದರು. ನೀವು ಮಾಡಿದ ತಪ್ಪಿನಿಂದಲೇ ಮನೆಯ ಸದಸ್ಯರಿಗೆ ಲಕ್ಷುರಿ ಬಜೆಟ್ ಹೋಯ್ತು ಎಂದರು. ಅದಕ್ಕೆ ಏನೀಗ? ಎಂದು ಬೆದರಿಕೆ ದ್ವನಿಯಲ್ಲಿ ವಿನಯ್ ಪ್ರತಿಕ್ರಿಯೆ ನೀಡಿದರು. ವಿನಯ್ ಯಾವ ಟೋನ್​ನಲ್ಲಿ ಉತ್ತರ ನೀಡಿದರೋ ಅದೇ ಟೋನ್​ನಲ್ಲಿ ಪ್ರತ್ಯುತ್ತರಗಳನ್ನು ಡ್ರೋನ್ ನೀಡಿದರು.

ಇದರಿಂದ ಸಿಟ್ಟಾದ ವಿನಯ್, ಬಳಿಕ ಶ್ರುತಿ ನಡೆಸಿಕೊಟ್ಟ ನ್ಯಾಯಾಲಯದಲ್ಲಿ ಡ್ರೋನ್ ಪ್ರತಾಪ್ ಬಗ್ಗೆ ಹಲವು ದೂರುಗಳನ್ನು ಹೇಳಿದರು. ಆದರೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಡ್ರೋನ್ ಪ್ರತಾಪ್, ತಮ್ಮ ಮೇಲೆ ಬಂದ ಆರೋಪಗಳಿಗೆ ಸ್ಪಷ್ಟನೆಗಳನ್ನು ನೀಡಿದರು. ಡ್ರೋನ್ ಪ್ರತಾಪ್ ಬಿಗ್​ಬಾಸ್ ಮನೆಗೆ ಬಂದ ಆರಂಭದಲ್ಲಿ ನಾಚಿಕೆ ಸ್ವಭಾವದ, ಹೆದರಿಕೆ ಸ್ವಭಾವದ ವ್ಯಕ್ತಿಯಾಗಿದ್ದರು. ಆದರೆ ಈಗ ಹಾಗಿಲ್ಲ, ವಿನಯ್, ತುಕಾಲಿ ಸಂತೋಷ್ ಎಲ್ಲರಿಗೂ ಪ್ರತ್ಯುತ್ತರಗಳನ್ನು ಧೈರ್ಯದಿಂದ ನೀಡುತ್ತಿದ್ದಾರೆ. ಡ್ರೋನ್ ಪ್ರತಾಪ್ ಫಿನಾಲೆಗೆ ಬರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ