ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ಪತಿ-ಪತ್ನಿ ಸಂಬಂಧ; ಅಂಕಿತಾ ಕೆನ್ನೆಗೆ ಹೊಡೆಯಲು ಹೋದ ವಿಕ್ಕಿ

Bigg Boss Hindi: ಬಿಗ್​ಬಾಸ್ ಹಿಂದಿ ಶೋನಲ್ಲಿ ಭಾಗಿಯಾಗಿದ್ದ ಪತಿ-ಪತ್ನಿ ಅಂಖಿತಾ ಲೋಕಂಡೆ ಹಾಗೂ ವಿಕ್ಕಿ ಜೈನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಈ ಜೋಡಿ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ.

ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ಪತಿ-ಪತ್ನಿ ಸಂಬಂಧ; ಅಂಕಿತಾ ಕೆನ್ನೆಗೆ ಹೊಡೆಯಲು ಹೋದ ವಿಕ್ಕಿ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on:Dec 23, 2023 | 8:57 PM

ಸೆಲೆಬ್ರಿಟಿ ಜೋಡಿ ವಿಕ್ಕಿ ಜೈನ್ ಹಾಗೂ ಅಂಕಿತಾ ಲೋಖಂಡೆ (Ankita Lokande) ಪ್ರೀತಿಸಿ ಮದುವೆ ಆದವರು. ಹೊರ ಜಗತ್ತಿನಲ್ಲಿದ್ದಾಗ ಅನೇಕರು ಇವರನ್ನು ಮಾದರಿಯಾಗಿ ಸ್ವೀಕರಿಸಿದ್ದರು. ಆದರೆ, ಯಾವಾಗ ಬಿಗ್ ಬಾಸ್ (ಹಿಂದಿ) ಮನೆಗೆ ಹೋದರೋ ಈ ದಂಪತಿಯ ಸಂಸಾರದ ಗಲಾಟೆ ಹೊರ ಜಗತ್ತಿಗೆ ಗೊತ್ತಾಗುತ್ತಿದೆ. ಬಿಟ್ಟೂ ಬಿಡದೇ ಇವರು ಕಿತ್ತಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇವರು ವಿಚ್ಛೇದನ ಪಡೆಯುವ ವಿಚಾರ ಮಾತನಾಡಿದ್ದರು. ಈಗ ಅಂಕಿತಾ ಕೆನ್ನೆಗೆ ವಿಕ್ಕಿ ಹೊಡೆಯಲು ಹೋಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ವಿಕ್ಕಿ ಪತ್ನಿ ಮೇಲೆ ಇಷ್ಟೆಲ್ಲ ಕೋಪಗೊಳ್ಳುವ ಅಗತ್ಯವೇ ಇಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಒಂದೊಮ್ಮೆ ಅಂಕಿತಾಗೆ ವಿಕ್ಕಿ ಕಪಾಳ ಮೋಕ್ಷ ಮಾಡಿದ್ದರೆ ಪರಿಸ್ಥಿತಿ ಬೆರೆಯದೇ ಇರುತ್ತಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ವಿಕ್ಕಿ ಬೆಡ್ ಮೇಲೆ ಮಲಗಿ ಮಾತನಾಡುತ್ತಿದ್ದರು. ಈ ವೇಳೆ ಅಂಕಿತಾ ಮಾತಿನ ಮಧ್ಯೆ ಏನನ್ನೋ ಹೇಳಲು ಪ್ರಯತ್ನಿಸಿದರು. ಇದರಿಂದ ಸಿಟ್ಟಾದ ವಿಕ್ಕಿ ಅವರು ಅಂಕಿತಾ ಕೆನ್ನೆಗೆ ಬಾರಿಸಲು ಹೋಗಿದ್ದಾರೆ. ಅಲ್ಲಿಯೇ ಇದ್ದ ಅಭಿಷೇಕ್ ಕುಮಾರ್ ಹಾಗೂ ಅರುಣ್ ಅವರು ಇದನ್ನು ಖಂಡಿಸಿದ್ದಾರೆ. ‘ಅಬ್ಬಾ ನಮಗೆ ಏನು ನೋಡಲು ಸಿಕ್ಕಿತು’ ಎಂದು ಹೇಳಿದ್ದಾರೆ. ವಿಕ್ಕಿ ಅವರು ಮಾಡಿದ್ದು ತಪ್ಪು ಎಂದು ಅನೇಕರು ಖಂಡಿಸಿದ್ದಾರೆ.  ಬಿಗ್ ಬಾಸ್ ಮನೆಯ ಪ್ರತಿ ಕೊಠಡಿಯಲ್ಲಿ ಹತ್ತಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕೆಲವೊಮ್ಮೆ ಒಂದೇ ಕ್ಯಾಮೆರಾ ಕೋನದಿಂದ ತೋರಿಸಲಾದ ದೃಶ್ಯಾವಳಿಗಳು ತಪ್ಪಾಗಿ ಕಾಣಿಸಬಹುದು. ಹೀಗಾಗಿ, ಬೇರೆ ಬೇರೆ ಆ್ಯಂಗಲ್​ನಿಂದ ವಿಡಿಯೋ ತೋರಿಸಲಾಗುತ್ತದೆ. ಆರಂಭದಲ್ಲಿ ವಿಕ್ಕಿ ಅವರು ಬೆಡ್​ಶೀಟ್ ತೆಗೆದು ಮೇಲಕ್ಕೆ ಬರುವಂತೆ ಕಾಣುತ್ತದೆ. ಆದರೆ, ಮತ್ತೊಂದು ಕ್ಯಾಮೆರಾದಲ್ಲಿ ಅವರು ಕೋಪದಿಂದ ಕೈ ಎತ್ತಿದ್ದು ಸರಿಯಾಗಿ ಕಾಣಿಸಿದೆ.

ಇದನ್ನೂ ಓದಿ:ಬಂಧನಕ್ಕೊಳಗಾಗಿದ್ದ ಬಿಗ್​ಬಾಸ್ ತೆಲುಗು ವಿಜೇತನಿಗೆ ಕೊನೆಗೂ ಸಿಕ್ತು ಜಾಮೀನು

ವಿಕ್ಕಿ ಜೈನ್ ಅವರ ಈ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಜನರು ವಿಕ್ಕಿಯನ್ನು ಸಾಕಷ್ಟು ಟ್ರೋಲ್ ಮಾಡಿದ್ದಾರೆ. ‘ಇದು ಅತ್ಯಂತ ಅಸಭ್ಯ ಕೃತ್ಯ. ಅಂಕಿತಾ ಬಗ್ಗೆ ನನಗೆ ಬೇಸರವಾಗಿದೆ. ಅವರು ಇಂಥ ವ್ಯಕ್ತಿ ಜೊತೆ ಬದುಕಬಾರದು’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಕ್ಯಾಮೆರಾ ಇರುವ ಕಾರಣಕ್ಕೆ ವಿಕ್ಕಿ ಸುಮ್ಮನಿರಬಹುದು. ಮನೆಗೆ ಹೋದ ಬಳಿಕ ಅಂಕಿತಾ ಅವರನ್ನು ದೇವರೇ ಕಾಪಾಡಬೇಕು’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಅಂಕಿತಾ ಲೋಖಂಡೆ ಈ ಮೊದಲು ಸುಶಾಂತ್ ಸಿಂಗ್ ರಜಪೂತ್ ಅವರನ್ನು ಪ್ರೀತಿಸುತ್ತಿದ್ದರು. ಆದರೆ, ಇವರ ಬ್ರೇಕಪ್ ಆಯಿತು. ಇದಾದ ಬಳಿಕ ಅಂಕಿತಾಗೆ ವಿಕ್ಕಿ ಸಿಕ್ಕರು. ಇಬ್ಬರೂ ಪ್ರೀತಿಸಿ ಮದುವೆ ಆದರು. ಆದರೆ, ಇವರ ಸಂಬಂಧ ಹದಗೆಟ್ಟಿದೆ. ಇವರು ವಿಚ್ಛೇದನ ಪಡೆಯುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಕೆಲವರು ಇದನ್ನು ಪಬ್ಲಿಸಿಟಿ ಸ್ಟಂಟ್ ಎಂದು ಕರೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:56 pm, Sat, 23 December 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ