AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್ ಸಿಂಗ್ ಅಂತಿಮ ದರ್ಶನಕ್ಕೆ ಹೋಗಲಿಲ್ಲವೇಕೆ? ಮಾಜಿ ಗರ್ಲ್​ಫ್ರೆಂಡ್ ಅಂಕಿತಾ ಕೊಟ್ಟರು ಕಾರಣ

Sushant Singh Rajput: ನಟ ಸುಶಾಂತ್ ಸಿಂಗ್ ರಜಪೂತ್ ರ ಮಾಜಿ ಗರ್ಲ್​ಫ್ರೆಂಡ್ ಅಂಕಿತಾ ಲೋಖಂಡೆ, ಸುಶಾಂತ್ ಸಿಂಗ್​ರ ಅಂತಿಮ ದರ್ಶನಕ್ಕೆ ಏಕೆ ಹೋಗಲಿಲ್ಲ ಎಂಬ ವಿಷಯ ಹಂಚಿಕೊಂಡಿದ್ದಾರೆ.

ಸುಶಾಂತ್ ಸಿಂಗ್ ಅಂತಿಮ ದರ್ಶನಕ್ಕೆ ಹೋಗಲಿಲ್ಲವೇಕೆ? ಮಾಜಿ ಗರ್ಲ್​ಫ್ರೆಂಡ್ ಅಂಕಿತಾ ಕೊಟ್ಟರು ಕಾರಣ
ಸುಶಾಂತ್-ಅಂಕಿತಾ
Follow us
ಮಂಜುನಾಥ ಸಿ.
|

Updated on: Nov 21, 2023 | 7:55 AM

ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ನಿಧನ ಹೊಂದಿ ಮೂರು ವರ್ಷಗಳಾಯ್ತು. ಸುಶಾಂತ್ ಸಿಂಗ್ ನಿಧನದಿಂದಾಗಿ ಬಾಲಿವುಡ್​ನ ಹಲವರ ಹಣೆಬರಹವೇ ಬದಲಾಯ್ತು. ಸುಶಾಂತ್​ರ ಗರ್ಲ್​ಫ್ರೆಂಡ್ ರಿಯಾ ಚಕ್ರವರ್ತಿ ಸೇರಿದಂತೆ ಹಲವರು ಜೈಲು ಪಾಲಾಗಬೇಕಾಯ್ತು. ಸುಶಾಂತ್ ಸಾವಿನ ತನಿಖೆ ವೇಳೆ ಹೊರಬಂದ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್​ನ ದಿಗ್ಗಜ ನಟ-ನಟಿಯರು ಸಹ ವಿಚಾರಣೆ ಎದುರಿಸಬೇಕಾಯ್ತು. ಈಗಲೂ ಆಗೊಮ್ಮೆ, ಈಗೊಮ್ಮೆ ಸುಶಾಂತ್ ಸಿಂಗ್ ಕುರಿತ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಸುಶಾಂತ್​ ಸಿಂಗ್​ರ ಮಾಜಿ ಗೆಳತಿಯೊಬ್ಬರು ತಾವೇಕೆ ಸುಶಾಂತ್​ರ ಅಂತಿಮ ದರ್ಶನಕ್ಕೆ ಹೋಗಲಿಲ್ಲವೆಂಬ ಬಗ್ಗೆ ಮಾತನಾಡಿದ್ದಾರೆ.

ಸುಶಾಂತ್ ಸಿಂಗ್, ರಿಯಾ ಚಕ್ರವರ್ತಿ ಅವರೊಟ್ಟಿಗೆ ಪ್ರೇಮ ಸಂಬಂಧಕ್ಕೆ ಬೀಳುವ ಮುನ್ನ ಸಾರಾ ಅಲಿ ಖಾನ್, ಕೃತಿ ಸೆನನ್ ಅವರುಗಳೊಟ್ಟಿಗೆ ಡೇಟ್ ಮಾಡಿದ್ದರು. ಆದರೆ ಸುಶಾಂತ್ ಅತಿ ಹೆಚ್ಚು ಸಮಯ ಪ್ರೀತಿಯಲ್ಲಿದ್ದಿದ್ದು ಸಹ ನಟಿ ಅಂಕಿತಾ ಲೋಖಂಡೆ ಜೊತೆಗೆ. ಅಂಕಿತಾ ಲೋಖಂಡೆ ಹಾಗೂ ಸುಶಾಂತ್ ಒಟ್ಟಿಗೆ ಟಿವಿ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಪರಿಚಯವಾಗಿ, ಇಬ್ಬರೂ ಪ್ರೀತಿಸತೊಡಗಿದ್ದರು. ಇವರ ಪ್ರೀತಿ ಬರೋಬ್ಬರಿ ಆರು ವರ್ಷ ನಡೆದಿತ್ತು. ಅಂತಿಮವಾಗಿ ಇವರು ದೂರಾದರು.

ಅಂಕಿತಾ ಜೊತೆ ದೂರಾದ ಬಳಿಕ, ಕೃತಿ ಸೆನನ್ ಆ ಬಳಿಕ ಸಾರಾ ಅಲಿ ಖಾನ್ ಜೊತೆ ಡೇಟ್ ನಡೆಸಿದ ಸುಶಾಂತ್ ಸಾಯುವ ಒಂದೆರಡು ವರ್ಷ ಮುಂಚಿನಿಂದ ರಿಯಾ ಚಕ್ರವರ್ತಿಯೊಟ್ಟಿಗೆ ಪ್ರೀತಿಯಲ್ಲಿದ್ದರು. ಅಂಕಿತಾ ಜೊತೆಗೆ ಹಲವು ವರ್ಷಗಳ ಕಾಲ ಪ್ರೀತಿಯಲ್ಲಿದ್ದರೂ ಸಹ ಸುಶಾಂತ್ ಸಿಂಗ್ ನಿಧನ ಹೊಂದಿದಾಗ ಅಂಕಿತಾ, ಸುಶಾಂತ್ ಸಿಂಗ್​ರ ಅಂತಿಮ ದರ್ಶನಕ್ಕೆ ಹೋಗಿರಲಿಲ್ಲ. ತಾವೇಕೆ ಅಂತಿಮ ದರ್ಶನಕ್ಕೆ ಹೋಗಲಿಲ್ಲ ಎಂಬ ಬಗ್ಗೆ ಅಂಕಿತಾ, ಬಿಗ್​ಬಾಸ್ ರಿಯಾಲಿಟಿ ಶೋನಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ:ಸುಶಾಂತ್ ಸಿಂಗ್ ಜೊತೆಗಿನ ಬ್ರೇಕಪ್​ಗೆ ಕಾರಣವೇ ಇಲ್ಲ; ಮೌನ ಮುರಿದ ಅಂಕಿತಾ ಲೋಕಂಡೆ

ಹಿಂದಿ ಬಿಗ್​ಬಾಸ್ ಸ್ಪರ್ಧಿಯಾಗಿರುವ ಅಂಕಿತಾ ಲೋಖಂಡೆ, ಮತ್ತೊಬ್ಬ ಸ್ಪರ್ಧಿ ಮುನಾವರ್ ಜೊತೆ ಮಾತನಾಡುತ್ತಾ, ”ನಾವು ಏಳು ವರ್ಷ ಪ್ರೀತಿಸಿದೆವು. ಅವನನ್ನು ಆ ಸ್ಥಿತಿಯಲ್ಲಿ ನೋಡಲು ನನಗೆ ಆಗುತ್ತಿರಲಿಲ್ಲ. ವಿಕ್ಕಿ ಸಹ (ಈಗಿನ ಪತಿ) ಹೋಗಿ ಬಾ ಎಂದು ಹೇಳಿದ. ವಿಕ್ಕಿ ಸಹ ಸುಶಾಂತ್​ಗೆ ಗೆಳೆಯನಾಗಿದ್ದ. ಹಾಗಿದ್ದರೂ ಸಹ ನನಗೆ ಹೋಗಲು ಆಗಲಿಲ್ಲ. ನನಗೆ ಅವನನ್ನು ಆ ಸ್ಥಿತಿಯಲ್ಲಿ ನೋಡಲು ಆಗುತ್ತಿರಲಿಲ್ಲ” ಎಂದಿದ್ದಾರೆ.

ಅದೇ ಕಾರ್ಯಕ್ರಮದಲ್ಲಿ ತಾವೇಕೆ ಸುಶಾಂತ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದು ಎಂಬ ಬಗ್ಗೆಯೂ ಮಾತನಾಡಿರುವ ಅಂಕಿತಾ, ”ಬ್ರೇಕಪ್​ಗೆ ಸ್ಪಷ್ಟವಾದ ಕಾರಣ ಇರಲೇ ಇಲ್ಲ. ಒಂದೇ ರಾತ್ರಿಯಲ್ಲಿ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಯ್ತು. ನನ್ನ ಆಸೆ ಏನೆತ್ತೆಂದರೆ ಯಾವುದೇ ವಿಷಯವಾದರೂ ನನಗೆ ಹೇಳಿ ಮಾಡಬೇಕು ಎಂಬುದು ನನ್ನ ನಿಯಮವಾಗಿತ್ತು. ಆದರೆ ಸುಶಾಂತ್ ಸಿಂಗ್ ಜೀವನದಲ್ಲಿ ಕೆಲವು ಹೊಸ ವಿಷಯಗಳು ನಡೆದವು ಅದರ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಇದೇ ಮುಖ್ಯ ಕಾರಣವಾಯ್ತು’’ ಎಂದಿದ್ದಾರೆ ಅಂಕಿತಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಮೋದಿ ನೇತೃತ್ವದ ಭಾರತದಲ್ಲಿ ಎಲ್ಲರೂ ಸಮಾನರು, ಸುರಕ್ಷಿತರು: ಕೇಂದ್ರ ಸಚಿವೆ
ಮೋದಿ ನೇತೃತ್ವದ ಭಾರತದಲ್ಲಿ ಎಲ್ಲರೂ ಸಮಾನರು, ಸುರಕ್ಷಿತರು: ಕೇಂದ್ರ ಸಚಿವೆ
VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು
VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು
ಹುಲಿಗಳನ್ನು ಕೊಂದ ಅಪರಾಧಿಗಳಿಗೆ ಡಬಲ್ ಶಿಕ್ಷೆಯಾಗಲಿದೆ: ಅರಣ್ಯಾಧಿಕಾರಿ
ಹುಲಿಗಳನ್ನು ಕೊಂದ ಅಪರಾಧಿಗಳಿಗೆ ಡಬಲ್ ಶಿಕ್ಷೆಯಾಗಲಿದೆ: ಅರಣ್ಯಾಧಿಕಾರಿ
VIDEO: ಕೊನೆಯ ಎಸೆತದಲ್ಲಿ ಸಿಕ್ಸ್​... ದಾಖಲೆಯ ರನ್ ಚೇಸ್​..!
VIDEO: ಕೊನೆಯ ಎಸೆತದಲ್ಲಿ ಸಿಕ್ಸ್​... ದಾಖಲೆಯ ರನ್ ಚೇಸ್​..!
ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್