AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್ ಸಿಂಗ್ ಜೊತೆಗಿನ ಬ್ರೇಕಪ್​ಗೆ ಕಾರಣವೇ ಇಲ್ಲ; ಮೌನ ಮುರಿದ ಅಂಕಿತಾ ಲೋಕಂಡೆ

ಅಂಕಿತಾ ಅವರು ಸದ್ಯ ‘ಬಿಗ್ ಬಾಸ್ ಹಿಂದಿ ಸೀಸನ್ 17’ರ ಸ್ಪರ್ಧಿ ಆಗಿದ್ದಾರೆ. ಅವರು ಕಾಮಿಡಿಯನ್ ಮುನಾವರ್ ಫರೂಕಿ ಜೊತೆ ಮಾತನಾಡುವಾಗ ತಮ್ಮ ಹಳೆಯ ರಿಲೇಶನ್​ಶಿಪ್ ಬಗ್ಗೆ ಹೇಳಿದ್ದಾರೆ. ಬ್ರೇಕಪ್​ ಮಾಡಿಕೊಂಡಿದ್ದು ಸುಶಾಂತ್. ಇದಕ್ಕೆ ಅವರು ಸರಿಯಾದ ಕಾರಣವನ್ನು ನೀಡಲೇ ಇಲ್ಲ ಎನ್ನುತ್ತಾರೆ ಅಂಕಿತಾ.  

ಸುಶಾಂತ್ ಸಿಂಗ್ ಜೊತೆಗಿನ ಬ್ರೇಕಪ್​ಗೆ ಕಾರಣವೇ ಇಲ್ಲ; ಮೌನ ಮುರಿದ ಅಂಕಿತಾ ಲೋಕಂಡೆ
ಸುಶಾಂತ್​-ಅಂಕಿತಾ
ರಾಜೇಶ್ ದುಗ್ಗುಮನೆ
|

Updated on: Oct 31, 2023 | 11:04 AM

Share

ಸುಶಾಂತ್ ಸಿಂಗ್ ರಜಪೂತ್ ನಮ್ಮನ್ನು ಅಗಲಿ ಕೆಲವು ವರ್ಷ ಕಳೆದಿದೆ. ಅವರನ್ನು ಆಗಾಗ ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಸುಶಾಂತ್ ಜೊತೆ ಕಳೆದ ಕ್ಷಣದ ಬಗ್ಗೆ ಒಬ್ಬಲ್ಲಾ ಒಬ್ಬರು ಮಾತನಾಡುತ್ತಿರುತ್ತಾರೆ. ಸುಶಾಂತ್ ಸಿಂಗ್ (Sushant Singh Rajput) ಮಾಜಿ ಪ್ರೇಯಸಿ ಅಂಕಿತಾ ಲೋಕಂಡೆ (Ankita Lokande) ಅವರು ಈಗ ಬಿಗ್ ಬಾಸ್ ಮನೆ ಸೇರಿದ್ದಾರೆ. ಅವರು ಆರು ವರ್ಷ ಸುಶಾಂತ್ ಜೊತೆ ರಿಲೇಶನ್​ಶಿಪ್​ನಲ್ಲಿದ್ದರು. ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಅವರು ಹೇಳಿಕೊಂಡಿದ್ದಾರೆ. ಸುಶಾಂತ್ ಜೊತೆ ಬ್ರೇಕಪ್​ಗೆ ಕಾರಣ ಏನು ಎಂಬುದೇ ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅಂಕಿತಾ ಅವರು ಸದ್ಯ ‘ಬಿಗ್ ಬಾಸ್ ಹಿಂದಿ ಸೀಸನ್ 17’ರ ಸ್ಪರ್ಧಿ ಆಗಿದ್ದಾರೆ. ಅವರು ಕಾಮಿಡಿಯನ್ ಮುನಾವರ್ ಫರೂಕಿ ಜೊತೆ ಮಾತನಾಡುವಾಗ ತಮ್ಮ ಹಳೆಯ ರಿಲೇಶನ್​ಶಿಪ್ ಬಗ್ಗೆ ಹೇಳಿದ್ದಾರೆ. ಬ್ರೇಕಪ್​ ಮಾಡಿಕೊಂಡಿದ್ದು ಸುಶಾಂತ್. ಇದಕ್ಕೆ ಅವರು ಸರಿಯಾದ ಕಾರಣವನ್ನು ನೀಡಲೇ ಇಲ್ಲ ಎನ್ನುತ್ತಾರೆ ಅಂಕಿತಾ.

‘ಸುಶಾಂತ್ ಸಿಂಗ್​ಗೆ ಯಶಸ್ಸು ಸಿಕ್ಕ ಬಳಿಕ ಅವರ ಮೇಲೆ ಕೆಲವರು ಪ್ರಭಾವ ಬೀರೋಕೆ ಆರಂಭಿಸಿದರು. ಅವರು ಏಕಾಏಕಿ ಮಾಯವಾಗಿ ಬಿಟ್ಟರು’ ಎಂದಿದ್ದಾರೆ ಅಂಕಿತಾ. ಈ ಮೂಲಕ ಬ್ರೇಕಪ್​ಗೆ ಕಾರಣವೇ ಸಿಗಲಿಲ್ಲ ಎಂದಿದ್ದಾರೆ ಅಂಕಿತಾ.

ಅಂಕಿತಾ ಹಾಗೂ ಸುಶಾಂತ್ ಸಿಂಗ್ ಅವರು ಹಲವು ವರ್ಷ ಪ್ರೀತಿಯಲ್ಲಿದ್ದರು. ‘ಪವಿತ್ರ ರಿಷ್ತಾ’ ಧಾರಾವಾಹಿಯಲ್ಲಿ ಮಾನವ್ ಹಾಗೂ ಅರ್ಚನಾ ಪಾತ್ರವನ್ನು ಅವರು ನಿರ್ವಹಿಸಿದ್ದರು. ಇವರು ಧಾರಾವಾಹಿಯಲ್ಲಿ ನಟಿಸುತ್ತಾ ನಿಜ ಜೀವನದಲ್ಲೂ ಪ್ರೀತಿ ಮಾಡಲು ಪ್ರಾರಂಭಿಸಿದರು. ಇವರ ಪ್ರೀತಿಯಲ್ಲಿ ಹಲವು ಏಳುಬೀಳುಗಳು ಇದ್ದವು. 2016ರಲ್ಲಿ ಇವರು ಬೇರೆ ಆದರು. ಇವರು ಬೇರೆ ಆಗೋಕೆ ಕಾರಣ ಏನು ಎಂಬುದು ಆ ಸಂದರ್ಭದಲ್ಲಿ ತಿಳಿದಿರಲಿಲ್ಲ.

ಅಂಕಿತಾ ಹಾಗೂ ಅವರ ಗಂಡ ವಿಕ್ಕಿ ಬಿಗ್ ಬಾಸ್​ ಮನೆಯಲ್ಲಿದ್ದಾರೆ. ಇಬ್ಬರೂ ಸದಾ ಜಗಳ ಮಾಡಿಕೊಳ್ಳುತ್ತಾ ಇರುತ್ತಾರೆ. ಅಂಕಿತಾ ಅವರನ್ನು ಹಲವು ಬಾರಿ ಅವರು ಟೀಕೆ ಮಾಡಿದ್ದಿದೆ. ವಿಕ್ಕಿ ನಡೆಯನ್ನು ಅನೇಕರು ಖಂಡಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಪ್ರೀತಿಯಲ್ಲಿ ಬಿದ್ದ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ? 9,000 ಕೋಟಿ ಒಡೆಯನ ಜೊತೆ ಸುತ್ತಾಟ

ಸುಶಾಂತ್ ಸಿಂಗ್ ಅವರು 2020ರ ಜೂನ್ 14ರಂದು ನಿಧನ ಹೊಂದಿದರು. ಮುಂಬೈ ನಿವಾಸದಲ್ಲಿ ಅವರ ಶವ ಪತ್ತೆ ಆಯಿತು. ಇದು ಕೊಲೆ ಎಂಬುದು ಕೆಲವರ ವಾದ. ಈ ಪ್ರಕರಣದ ತನಿಖೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ