Yogi Adityanath: ಕಂಗನಾ ನಟನೆಯ ‘ತೇಜಸ್’ ಸಿನಿಮಾ ನೋಡಿ ಕಣ್ಣೀರು ಸುರಿಸಿದ ಯೋಗಿ ಆದಿತ್ಯನಾಥ್
Kangana Ranaut: ಇತ್ತೀಚೆಗೆ ಬಿಡುಗಡೆ ಆದ ಕಂಗನಾ ರಣಾವತ್ ನಟನೆಯ ‘ತೇಜಸ್’ ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿಲ್ಲ. ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಈ ಸಿನಿಮಾ ತೋರಿಸಲಾಗಿದೆ. ಸಿನಿಮಾ ಮುಗಿದ ಬಳಿಕ ಕಂಗನಾಗೆ ಯೋಗಿ ಅವರು ಉಡುಗೊರೆ ನೀಡಿದ್ದಾರೆ. ಆ ಫೋಟೋಗಳು ವೈರಲ್ ಆಗಿವೆ.
ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರು ತಮ್ಮ ಹೊಸ ಸಿನಿಮಾ ‘ತೇಜಸ್’ (Tejas Movie) ಪ್ರಚಾರಕ್ಕಾಗಿ ಹಲವು ರೀತಿಯಲ್ಲಿ ಸರ್ಕಸ್ ಮಾಡುತ್ತಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಈ ಸಿನಿಮಾ ಕಲೆಕ್ಷನ್ ಮಾಡಿಲ್ಲ. ಈಗ ಅವರು ರಾಜಕಾರಣಿಗಳಿಗೆ ಸಿನಿಮಾ ತೋರಿಸುತ್ತಿದ್ದಾರೆ. ಮಂಗಳವಾರ (ಅ.31) ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ‘ತೇಜಸ್’ ಸಿನಿಮಾ ತೋರಿಸಲಾಗಿದೆ. ಈ ಸಂದರ್ಭದ ಫೋಟೋಗಳನ್ನು ಕಂಗನಾ ರಣಾವತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾಗೆ ಬೆಂಬಲ ಸೂಚಿಸಿದ ಯೋಗಿಗೆ ಕಂಗನಾ ಧನ್ಯವಾದ ತಿಳಿಸಿದ್ದಾರೆ. ಈ ಸಿನಿಮಾ ನೋಡುವಾಗ ಯೋಗಿ ಭಾವುಕರಾಗಿ ಕಣ್ಣೀರು ಹಾಕಿದರು ಎಂದು ಕೂಡ ಕಂಗನಾ ಬರೆದುಕೊಂಡಿದ್ದಾರೆ.
‘ಇಂದು ಯೋಗಿ ಆದಿತ್ಯನಾಥ್ ಅವರಿಗೆ ಸೈನಿಕರ ಜೀವನಾಧಾರಿತ ‘ತೇಜಸ್’ ಸಿನಿಮಾ ತೋರಿಸಲಾಯಿತು. ತೇಜಸ್ ಸಿನಿಮಾದ ಕೊನೇ ಸಂಭಾಷಣೆಗಳನ್ನು ಕೇಳಿಸಿಕೊಂಡು ಯೋಗಿ ಅವರಿಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ’ ಎಂದು ಕಂಗನಾ ಅವರು ಪೋಸ್ಟ್ ಮಾಡಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಮೊದಲು ಕೂಡ ಕಂಗನಾ ರಣಾವತ್ ಅವರು ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಆಗಿದ್ದರು. ಆದರೆ ಈ ಬಾರಿಯ ಭೇಟಿ ಅವರಿಗೆ ತುಂಬಾ ಸ್ಪೆಷಲ್ ಎನಿಸಿದೆ.
Today hosted a screening of #tejas a film based on a soldier / Martyr’s life for honourable Chief Minister @myogiadityanath ji As you can see in the first picture Maharaj ji couldn’t hold back his tears in the last monologue of Tejas. “ Ek soldier kya chahta hai” महाराज जी… pic.twitter.com/WTYHuhRwYA
— Kangana Ranaut (@KanganaTeam) October 31, 2023
‘ಒಬ್ಬ ಸೈನಿಕನಿಗೆ ಏನು ಬೇಕು? ಸೈನಿಕರ ಧೈರ್ಯ, ತ್ಯಾಗ, ಬಲಿದಾನದ ಕಥೆ ಇರುವ ಸಿನಿಮಾ ನೋಡಿ ಯೋಗಿ ಅವರು ಎಮೋಷನಲ್ ಆದರು. ನಿಮ್ಮ ಹೊಗಳಿಕೆ ಮತ್ತು ಆಶೀರ್ವಾದಕ್ಕೆ ಧನ್ಯವಾಗಳು’ ಎಂದು ಕಂಗನಾ ರಣಾವತ್ ಅವರು ಬರೆದುಕೊಂಡಿದ್ದಾರೆ. ಈ ವೇಳೆ ಉತ್ತರಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಕೂಡ ಇದ್ದರು. ಸಿನಿಮಾ ಮುಗಿದ ಬಳಿಕ ಕಂಗನಾಗೆ ಯೋಗಿ ಅವರು ಉಡುಗೊರೆ ನೀಡಿದ್ದಾರೆ. ಮುಖ್ಯಮಂತ್ರಿಗಳಿಬ್ಬರು ಸಿನಿಮಾ ನೋಡಿ ಹೊಗಳಿದ್ದಾರೆ ಎಂದು ಕಂಗನಾ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸತತ ಸೋಲು ಕಂಡರೂ ಕಂಗನಾ ರಣಾವತ್ಗೆ ಕಡಿಮೆ ಆಗಿಲ್ಲ ಸಿನಿಮಾ ಆಫರ್
ಅಕ್ಟೋಬರ್ 27ರಂದು ‘ತೇಜಸ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ಕಂಗನಾ ರಣಾವತ್ ಅವರು ವಾಯುಸೇನೆಯ ಪೈಲೆಟ್ ಪಾತ್ರವನ್ನು ಮಾಡಿದ್ದಾರೆ. ಪ್ರೇಕ್ಷಕರು ಈ ಚಿತ್ರದ ಕಡೆಗೆ ಅಷ್ಟೇನೂ ಆಸಕ್ತಿ ತೋರಿಸಿಲ್ಲ. ಬಹಳ ಕಳಪೆ ಓಪನಿಂಗ್ ಪಡೆದುಕೊಂಡ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 4 ದಿನಕ್ಕೆ 4 ಕೋಟಿ ರೂಪಾಯಿ ದಾಟಲೂ ಸಾಧ್ಯವಾಗದೇ ಕಷ್ಟಪಡುತ್ತಿದೆ. ಈಗ ಕಂಗನಾ ರಣಾವತ್ಗೆ ಯೋಗಿ ಆದಿತ್ಯನಾಥ್ ಅವರಿಂದ ಮೆಚ್ಚುಗೆ ಸಿಕ್ಕಿರುವುದರಿಂದ ಮುಂದಿನ ದಿನಗಳಲ್ಲಿ ಕಲೆಕ್ಷನ್ ಹೆಚ್ಚಾಗುತ್ತಾ ಎಂಬುದನ್ನು ಕಾದುನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.