AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಶ್ವರ್ಯಾ ರೈ ಜನ್ಮದಿನ: ಈ ನಟಿಯ ಆಸ್ತಿ ಎಷ್ಟು ಕೋಟಿ ರೂಪಾಯಿ?

ಐಶ್ವರ್ಯಾ ರೈ ಜನಿಸಿದ್ದು 1973ರ ನವೆಂಬರ್ 1ರಂದು. ಅವರು ಹುಟ್ಟಿದ್ದು ಮಂಗಳೂರಿನಲ್ಲಿ. ನಂತರ ಇವರ ಕುಟುಂಬ ಮುಂಬೈಗೆ ಶಿಫ್ಟ್ ಆಯಿತು. ಹೀಗಾಗಿ, ಐಶ್ವರ್ಯಾ ರೈ ಅವರು ಅಲ್ಲಿಯೇ ಬೆಳೆದರು ಮತ್ತು ಶಿಕ್ಷಣ ಪಡೆದರು. ಇವರ ಆಸ್ತಿ 800 ಕೋಟಿ ರೂಪಾಯಿಗೂ ಅಧಿಕವಾಗಿದೆ ಎನ್ನಲಾಗಿದೆ.

ಐಶ್ವರ್ಯಾ ರೈ ಜನ್ಮದಿನ: ಈ ನಟಿಯ ಆಸ್ತಿ ಎಷ್ಟು ಕೋಟಿ ರೂಪಾಯಿ?
ಐಶ್ವರ್ಯಾ ರೈ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Nov 01, 2023 | 12:36 PM

Share

ನಟಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರಿಗೆ ಇಂದು (ನವೆಂಬರ್ 1) ಜನ್ಮದಿನದ ಸಂಭ್ರಮ. ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ಬರುತ್ತಿದೆ. ವಯಸ್ಸು ಐವತ್ತಾದರೂ ಅವರು ಗ್ಲಾಮರ್​ನ ಕಾಪಾಡಿಕೊಂಡು ಬಂದಿದ್ದಾರೆ. ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಅವರ ನೆಟ್​ವರ್ತ್​ ಎಷ್ಟು ಕೋಟಿ ರೂಪಾಯಿ? ಪ್ರತಿ ಸಿನಿಮಾಗೆ ಅವರು ಪಡೆಯೋ ಸಂಭಾವನೆ ಎಷ್ಟು ಕೋಟಿ ರೂಪಾಯಿ? ಅವರ ಬಳಿ ಇರೋ ಕಾರ್ ಕಲೆಕ್ಷನ್ ಬಗ್ಗೆ ಇಲ್ಲಿದೆ ಮಾಹಿತಿ.

ಐಶ್ವರ್ಯಾ ರೈ ಜನಿಸಿದ್ದು 1973ರ ನವೆಂಬರ್ 1ರಂದು. ಅವರು ಹುಟ್ಟಿದ್ದು ಮಂಗಳೂರಿನಲ್ಲಿ. ನಂತರ ಇವರ ಕುಟುಂಬ ಮುಂಬೈಗೆ ಶಿಫ್ಟ್ ಆಯಿತು. ಹೀಗಾಗಿ, ಐಶ್ವರ್ಯಾ ರೈ ಅವರು ಅಲ್ಲಿಯೇ ಬೆಳೆದರು ಮತ್ತು ಶಿಕ್ಷಣ ಪಡೆದರು. ಇವರ ಆಸ್ತಿ 800 ಕೋಟಿ ರೂಪಾಯಿಗೂ ಅಧಿಕವಾಗಿದೆ ಎನ್ನಲಾಗಿದೆ. ಅವರು ಪ್ರತಿ ಚಿತ್ರಕ್ಕೆ ಸುಮಾರು 12 ಕೋಟಿ ರೂಪಾಯಿ ಪಡೆಯುತ್ತಾರೆ. ಇದರ ಜೊತೆಗೆ ಹಲವು ಬ್ಯೂಟಿ ಬ್ರ್ಯಾಂಡ್​ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಇದರಿಂದ ಅವರಿಗೆ ಹಣ ಬರುತ್ತಿದೆ.

ಐಶ್ವರ್ಯಾ ರೈ ಅವರು ರಿಯಲ್ ಎಸ್ಟೇಟ್ ಮೇಲೆ ಸಾಕಷ್ಟು ಹೂಡಿಕೆ ಮಾಡಿದ್ದಾರಂತೆ. ಅವರು ಸದ್ಯ ಜಲ್ಸಾದಲ್ಲಿ ಪತಿ ಅಭಿಷೇಕ್, ಮಗಳು ಆರಾಧ್ಯಾ ಜೊತೆ ವಾಸಿಸುತ್ತಿದ್ದಾರೆ. ಈ ಮನೆ ಅಮಿತಾಭ್ ಹೆಸರಲ್ಲಿ ಇದೆ. ಈ ಬಂಗಲೆಯ ಬೆಲೆ 112 ಕೋಟಿ ರೂಪಾಯಿ ಎನ್ನಲಾಗಿದೆ.

ಐಶ್ವರ್ಯಾ ಹಾಗೂ ಅಭಿಷೇಕ್ ಜಂಟಿಯಾಗಿ ಹಲವು ಪ್ರಾಪರ್ಟಿ ಖರೀದಿ ಮಾಡಿದ್ದಾರೆ. ವಿದೇಶದಲ್ಲೂ ಇವರು ಬಂಗಲೆ ಹೊಂದಿದ್ದಾರೆ. ದುಬೈನಲ್ಲಿ ವಿಶಾಲವಾದ ವಿಲ್ಲಾ ಹೊಂದಿದ್ದಾರೆ. ರಜೆ ಕಳೆಯಲು ದುಬೈಗೆ ತೆರಳಿದಾಗ ಈ ವಿಲ್ಲಾದಲ್ಲಿ ದಂಪತಿ ಉಳಿದುಕೊಳ್ಳುತ್ತಾರೆ.

ಮುಂಬೈನ ಬಾಂದ್ರಾದಲ್ಲಿ 2015ರಂದು ಅಪಾರ್ಟ್​ಮೆಂಟ್ ಒಂದನ್ನು ಐಶ್ವರ್ಯಾ ಖರೀದಿ ಮಾಡಿದ್ದರು. ಇದರ ಬೆಲೆ 21 ಕೋಟಿ ರೂಪಾಯಿ. ಐದು ಬೆಡ್​ರೂಂಗಳನ್ನು ಈ ಮನೆ ಹೊಂದಿದೆ. ವರ್ಲಿಯಲ್ಲೂ ಐಶ್ವರ್ಯಾ ಮನೆ ಇದೆ. ಇಲ್ಲಿ ಅಪಾರ್ಟ್​ಮೆಂಟ್ ಒಂದರ 37ನೇ ಫ್ಲೋರ್​ನಲ್ಲಿ ಐಶ್ವರ್ಯಾ ಮನೆ ಹೊಂದಿದ್ದಾರೆ. ಇದರ ಬೆಲೆ 41 ಕೋಟಿ ರೂಪಾಯಿ. ರೋಲ್ಸ್ ರಾಯ್ಸ್ ಘೋಸ್ಟ್, ಆಡಿ ಎ8ಎಲ್​ ಸೇರಿ ಅನೇಕ ಐಷಾರಾಮಿ ಕಾರುಗಳು ಅವರ ಬಳಿ ಇವೆ.

ಸಿನಿ ಜರ್ನಿ ಬಗ್ಗೆ

ಐಶ್ವರ್ಯಾ ರೈ ಮಾಡೆಲ್ ಆಗಿದ್ದರು. 1994ರಲ್ಲಿ ಐಶ್ವರ್ಯಾ ‘ಮಿಸ್ ವರ್ಲ್ಡ್​ 1994’ ಆದರು. ಇದಾದ ಬಳಿಕ ಅವರಿಗೆ ಚಿತ್ರರಂಗದಿಂದ ಸಾಕಷ್ಟು ಆಫರ್ ಬಂತು. ಆದರೆ, ಸಿನಿಮಾ ಒಪ್ಪಿಕೊಳ್ಳುವಲ್ಲಿ ಅವರು ಅವಸರ ತೋರಲಿಲ್ಲ. 1997ರಲ್ಲಿ ಅವರ ನಟನೆಯ ಮೊದಲ ಸಿನಿಮಾ ‘ಇರುವರ್’ ರಿಲೀಸ್ ಆಯಿತು.  ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಮಣಿರತ್ನಂ ಅವರು. ಆ ಬಳಿಕ ಅವರು ಹಿಂದಿರುಗಿ ನೋಡಲೇ ಇಲ್ಲ.

ಇದನ್ನೂ ಓದಿ: ‘ಅಭಿಷೇಕ್​ನ ಎಷ್ಟು ಮಿಸ್ ಮಾಡಿಕೊಳ್ತೀರಾ’ ಎಂಬ ಪ್ರಶ್ನೆಗೆ ಖಡಕ್ ಆಗಿ ಉತ್ತರಿಸಿದ್ದ ನಟಿ ಐಶ್ವರ್ಯಾ ರೈ ಬಚ್ಚನ್

ನಂತರ ಐಶ್ವರ್ಯಾ ರೈ ಅವರು ಹಿಂದಿ ಸಿನಿಮಾ ರಂಗದಲ್ಲಿ ಹೆಚ್ಚು ಆ್ಯಕ್ಟೀವ್ ಆದರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದರು. 97ರಿಂದ ಇಲ್ಲಿಯವರೆಗೆ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ‘ದೇವದಾಸ್’, ‘ಧೂಮ್ 2’, ‘ಗುರು’, ‘ಎಂದಿರನ್’, ‘ಪೊನ್ನಿಯಿನ್ ಸೆಲ್ವನ್’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳು ಅವರ ಲಿಸ್ಟ್​ನಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:04 am, Wed, 1 November 23