AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಭಿಷೇಕ್​ನ ಎಷ್ಟು ಮಿಸ್ ಮಾಡಿಕೊಳ್ತೀರಾ’ ಎಂಬ ಪ್ರಶ್ನೆಗೆ ಖಡಕ್ ಆಗಿ ಉತ್ತರಿಸಿದ್ದ ನಟಿ ಐಶ್ವರ್ಯಾ ರೈ ಬಚ್ಚನ್

ಐಶ್ವರ್ಯಾ ರೈ ಅವರು ಸಿನಿಮಾ ಒಂದರ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ಸಂದರ್ಭದಲ್ಲಿ ಅವರ ಪತಿ ಅಭಿಷೇಕ್ ಅವರು ಇದರಲ್ಲಿ ಹಾಜರಿ ಹಾಕಿರಲಿಲ್ಲ. ಇದನ್ನೇ ಪತ್ರಕರ್ತರು ಟಾರ್ಗೆಟ್ ಮಾಡಿದಂತಿತ್ತು.

‘ಅಭಿಷೇಕ್​ನ ಎಷ್ಟು ಮಿಸ್ ಮಾಡಿಕೊಳ್ತೀರಾ’ ಎಂಬ ಪ್ರಶ್ನೆಗೆ ಖಡಕ್ ಆಗಿ ಉತ್ತರಿಸಿದ್ದ ನಟಿ ಐಶ್ವರ್ಯಾ ರೈ ಬಚ್ಚನ್
ಅಭಿಷೇಕ್-ಐಶ್ವರ್ಯಾ
 ಶ್ರೀಲಕ್ಷ್ಮೀ ಎಚ್
| Edited By: |

Updated on:Oct 27, 2023 | 8:18 AM

Share

ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ (Abhishek Bachchan) ಪ್ರೀತಿಸಿ ಮದುವೆ ಆದವರು. ಇವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿಗೆ ಆರಾಧ್ಯಾ ಹೆಸರಿನ ಮಗಳು ಇದ್ದಾಳೆ. ಐಶ್ವರ್ಯಾ ರೈ ಅವರು ಫ್ಯಾಮಿಲಿ ವಿಚಾರಕ್ಕೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಐಶ್ವರ್ಯಾ ರೈಗೆ ಕೇಳಿದ ಪ್ರಶ್ನೆ ಬಹಳ ವಿಚಿತ್ರವಾಗಿತ್ತು. ಇದಕ್ಕೆ ಐಶ್ವರ್ಯಾ ಅವರು ಸೈಲೆಂಟ್​ ಆಗಿ ಕ್ಲಾಸ್ ತೆಗೆದುಕೊಂಡಿದ್ದರು. ಹಳೆಯ ವಿಡಿಯೋ ಈಗ ವೈರಲ್ ಆಗುತ್ತಿದೆ.

ಐಶ್ವರ್ಯಾ ರೈ ಅವರು ಸಿನಿಮಾ ಒಂದರ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ಸಂದರ್ಭದಲ್ಲಿ ಅವರ ಪತಿ ಅಭಿಷೇಕ್ ಅವರು ಇದರಲ್ಲಿ ಹಾಜರಿ ಹಾಕಿರಲಿಲ್ಲ. ಇದನ್ನೇ ಪತ್ರಕರ್ತರು ಟಾರ್ಗೆಟ್ ಮಾಡಿದಂತಿತ್ತು. ‘ಈ ಸಿನಿಮಾ ಪತಿ ಪತ್ನಿಯ ಭಾವನೆಗಳಿಗೆ ಸಂಬಂಧಿಸಿದೆ. ಹೀಗಾಗಿ, ನೀವು ನಿಮ್ಮ ಪತಿಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೀರಿ’ ಎಂದು ಕೇಳಿದ್ದರು. ಇದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದರು.

‘ಅವರು ಮನೆಯಲ್ಲಿದ್ದಾರೆ. ಅರ್ಧಗಂಟೆಯಲ್ಲಿ ಮನೆಗೆ ಹೋಗುತ್ತೇನೆ. ಆಗ ಭೇಟಿ ಮಾಡುತ್ತೇನೆ’ ಎಂದು ಐಶ್ವರ್ಯಾ ಉತ್ತರಿಸಿದ್ದರು. ಹಾಗಂತ ಇದನ್ನು ಹೇಳುವಾಗ ಐಶ್ವರ್ಯಾ ರೈ ಅವರ ಮುಖದಲ್ಲಿ ಯಾವುದೇ ಸಿಟ್ಟಿರಲಿಲ್ಲ. ಅವರು ನಗುನಗುತ್ತಲೇ ಈ ಉತ್ತರ ನೀಡಿದ್ದರು.

ಐಶ್ವರ್ಯಾ ರೈ ಅವರು ಇತ್ತೀಚೆಗೆ ಫ್ಯಾಮಿಲಿ ವಿಚಾರದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಐಶ್ವರ್ಯಾ ರೈ ಅವರು ಪ್ಯಾರಿಸ್ ಫ್ಯಾಷನ್ ವೀಕ್​ನಲ್ಲಿ ಹೆಜ್ಜೆ ಹಾಕಿದ್ದರು. ಈ ವೇಳೆ ಜಯಾ ಬಚ್ಚನ್ ಹಾಗೂ ನಂದ ಕೂಡ ಇದ್ದರು. ಇಲ್ಲಿ ಭಾಗಿ ಆಗಿದ್ದ ನವ್ಯಾ ಅವರನ್ನು ಚಿಯರ್ ಮಾಡಲು ಜಯಾ ಹಾಗೂ ನಂದ ಆಗಮಿಸಿದ್ದರು. ಆದರೆ, ಇವರು ಹಾಕಿದ ಯಾವ ಪೋಸ್ಟ್​ನಲ್ಲೂ ಐಶ್ವರ್ಯಾ ಇರಲಿಲ್ಲ. ಅವರನ್ನು ಟ್ಯಾಗ್ ಕೂಡ ಮಾಡಿರಲಿಲ್ಲ. ಐಶ್ವರ್ಯಾ ರೈ ಬಚ್ಚನ್ ಫ್ಯಾಮಿಲಿಯಲ್ಲಿ ಯಾವುದೂ ಸರಿ ಇಲ್ಲ ಎಂದು ಕೆಲವರು ಮಾತನಾಡಿಕೊಂಡಿದ್ದರು. ಅಮಿತಾಭ್ ಬಚ್ಚನ್​ ಬರ್ತ್​ಡೇಗೆ ವಿಶ್ ಮಾಡುವ ಸಂದರ್ಭದಲ್ಲಿ ಜಯಾ ಬಚ್ಚನ್, ಶ್ವೇತಾ ನಂದ, ಅಗಸ್ತ್ಯ ಹಾಗೂ ನವ್ಯಾ ಫೋಟೋನ ಕ್ರಾಪ್ ಮಾಡಿ ಹಾಕಿದ್ದರು. ಇದು ಸಾಕಷ್ಟು ಸುದ್ದಿ ಆಗಿತ್ತು.

ಇದನ್ನೂ ಓದಿ: ಫ್ಯಾಮಿಲಿ ಫೋಟೋದಿಂದ ಅತ್ತೆ, ನಾದಿನಿ ಮಗಳನ್ನು ಹೊರಗಿಟ್ಟ ಐಶ್ವರ್ಯಾ ರೈ; ಕುಟುಂಬದಲ್ಲಿ ಬಿರುಕು? 

ಐಶ್ವರ್ಯಾ ರೈ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಅವರ ನಟನೆಯ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಚಿತ್ರಕ್ಕೆ ಮಣಿರತ್ನಂ ಅವರು ನಿರ್ದೇಶನ ಮಾಡಿದ್ದರು. ಇದಾದ ಬಳಿಕ ಐಶ್ವರ್ಯಾ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:12 am, Fri, 27 October 23

‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!
ರಿಕೆಲ್ಟನ್ ಸೆಂಚುರಿ ಸಿಡಿಸಿದರೂ ಸೋತ ಎಂಐ ಪಡೆ
ರಿಕೆಲ್ಟನ್ ಸೆಂಚುರಿ ಸಿಡಿಸಿದರೂ ಸೋತ ಎಂಐ ಪಡೆ
ವಾಹನ ಸವಾರರೇ ಎಚ್ಚರ: ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ ಟ್ರಾಫಿಕ್ ಪೊಲೀಸ್
ವಾಹನ ಸವಾರರೇ ಎಚ್ಚರ: ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ ಟ್ರಾಫಿಕ್ ಪೊಲೀಸ್