ತೆರೆಗೆ ಬರಲಿದೆ ಲಾಲೂ ಪ್ರಸಾದ್ ಯಾದವ್ ಜೀವನ ಕತೆ

Lalu Prasad Yadav: ಭಾರತದ ವರ್ಣರಂಜಿತ ರಾಜಕಾರಣಿಗಳಲ್ಲಿ ಒಬ್ಬರಾದ ಲಾಲೂ ಪ್ರಸಾದ್ ಯಾದವ್ ಅವರ ಜೀವನ ಸಿನಿಮಾ ಆಗುತ್ತಿದೆ.

ತೆರೆಗೆ ಬರಲಿದೆ ಲಾಲೂ ಪ್ರಸಾದ್ ಯಾದವ್ ಜೀವನ ಕತೆ
ಲಾಲೂ ಪ್ರಸಾದ್ ಯಾದವ್
Follow us
ಮಂಜುನಾಥ ಸಿ.
|

Updated on: Oct 27, 2023 | 7:22 PM

ಬಾಲಿವುಡ್​ನಲ್ಲಿ (Bollywood) ಬಯೋಪಿಕ್​ ಜಮಾನಾ ಮುಗಿಯುತ್ತಲೇ ಇಲ್ಲ. ಕಳೆದ ಕೆಲವು ವರ್ಷಗಳಿಂದಲೂ ಸತತವಾಗಿ ಒಂದರ ಮೇಲೊಂದು ಬಯೋಪಿಕ್​ಗಳು ಬಾಲಿವುಡ್​ನಲ್ಲಿ ಬರುತ್ತಲೇ ಇವೆ. ಮೊದಲು ಕ್ರೀಡಾಪಟುಗಳ ಸಾಲು-ಸಾಲು ಬಯೋಪಿಕ್​ಗಳು ಬಂದವು. ಬಳಿಕ ರಾಜಕಾರಣಿ (Politician), ವಿಜ್ಞಾನಿ ಹೀಗೆ ಪಟ್ಟಿ ಮುಂದುವರೆಯುತ್ತಲೇ ಇದೆ. ನರೇಂದ್ರ ಮೋದಿಯ ಜೀವನ ಆಧರಿಸಿದ ಸಿನಿಮಾ ಸಹ ತೆರೆಗೆ ಬಂತು. ಇದೀಗ ಭಾರತದ ಜನಪ್ರಿಯ, ವರ್ಣರಂಜಿತ ರಾಜಕಾರಣಿಯೊಬ್ಬರ ಜೀವನ ತೆರೆಗೆ ಬರಲು ಸಜ್ಜಾಗುತ್ತಿದೆ.

ಅತ್ಯಂತ ವರ್ಣರಂಜಿತ, ಜನಪ್ರಿಯ ರಾಜಕಾರಣಿ ಲಾಲೂ ಪ್ರಸಾದ್ ಯಾದವ್ ಅವರ ಜೀವನ ತೆರೆಗೆ ಬರಲು ಸಜ್ಜಾಗುತ್ತಿದೆ. ರಾಜಕೀಯ ಹಾಗೂ ವೈಯಕ್ತಿಕ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡ, ಹಾಸ್ಯ ಪೃವೃತ್ತಿಯ ಅಷ್ಟೆ ಚತುರ ರಾಜಕಾರಣಿಯೂ ಆಗಿರುವ ಲಾಲೂ ಪ್ರಸಾದ್ ಯಾದವ್ ಅವರ ಜೀವನ, ರಾಜಕೀಯದ ಪ್ರಮುಖ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ.

ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಪಕ್ಷವೇ ತಮ್ಮ ನಾಯಕನ ಕುರಿತಾದ ಸಿನಿಮಾ ಮಾಡಲು ಮುಂದಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಇದೀಗ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಪ್ರಕಾಶ್ ಝಾರ ನಿರ್ಮಾಣ ಸಂಸ್ಥೆಯು ಯಾದವ್ ಕುಟುಂಬದಿಂದ ಅಗತ್ಯ ಒಪ್ಪಿಗೆಗಳನ್ನು ಪಡೆದಿದ್ದು, ಚಿತ್ರಕತೆ ನೀಡಿ ಒಪ್ಪಿಗೆಯನ್ನು ಪಡೆದು ನಿರ್ಮಾಣ ಕಾರ್ಯವನ್ನು ಆರಂಭಿಸಿದೆ. ಲಾಲೂ ಪ್ರಸಾದ್ ಯಾದವ್​ರ ಪುತ್ರ ತೇಜಸ್ವಿ ಯಾದವ್ ಅವರೂ ಸಹ ಈ ಸಿನಿಮಾಕ್ಕೆ ಬಂಡವಾಳ ತೊಡಗಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಎರಡು ಭಾಗದಲ್ಲಿ ರಿಲೀಸ್ ಆಗಲಿದೆ ವೈಎಸ್​ ಜಗನ್ ಬಯೋಪಿಕ್; ಗಮನ ಸೆಳೆದ ಪೋಸ್ಟರ್

ಲಾಲೂ ಪ್ರಸಾದ್ ಯಾದವ್​ರ ಖಾಸಗಿ ಜೀವನದ ಬಗ್ಗೆ ಹೆಚ್ಚು ಮಂದಿ ಅರಿಯದ ವಿಷಯಗಳನ್ನು ಈ ಸಿನಿಮಾದ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಇದಾಗಿರಲಿದೆ ಎಂದು ರಾಷ್ಟ್ರೀಯ ಜನತಾ ದಳ ಪಕ್ಷದ ಪ್ರಮುಖರು ಹೇಳಿರುವಂತೆ ಪಿಂಕ್​ವಿಲ್ಲಾ ವರದಿ ಮಾಡಿದೆ. ಪಾತ್ರಧಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ಬಾಲಿವುಡ್​ನ ಕೆಲವು ಖ್ಯಾತನಾಮ ನಟರ ಹೆಸರುಗಳು ಪಟ್ಟಿಯಲ್ಲಿದ್ದು, ಶೀಘ್ರವೇ ನಟರನ್ನು ಅಂತಿಮಗೊಳಿಸಲಾಗುತ್ತದೆ.

ಲಾಲೂ ಪ್ರಸಾದ್ ಯಾದವ್ ಅವರದ್ದು ಸುದೀರ್ಘವಾದ ರಾಜಕೀಯ ಜೀವನ. 1973ರಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಪ್ರವೇಶಿಸಿದ ಲಾಲೂ ಪ್ರಸಾದ್ ಯಾದವ್ ತಮ್ಮ 29ನೇ ವಯಸ್ಸಿನಲ್ಲಿಯೇ ಸಂಸದರಾಗಿ ಚುನಾಯಿತರಾಗಿದ್ದರು. ಆ ಬಳಿಕ ಬಿಹಾರ ವಿಧಾನಸಭೆ ಪ್ರತಿಪಕ್ಷ ನಾಯಕ, ಬಿಹಾರ ಮುಖ್ಯ ಮಂತ್ರಿ, ಕೇಂದ್ರ ರೈಲ್ವೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸುದೀರ್ಘ ರಾಜಕೀಯ ಜೀವನದಲ್ಲಿ ಹಲವು ಏರು-ಪೇರುಗಳನ್ನು ಸಹ ಲಾಲೂ ಪ್ರಸಾದ್ ಯಾದವ್ ಕಂಡಿದ್ದು, ಮೇವು ಹಗರಣ, ರೈಲ್ವೆ ನೇಮಕಾತಿ ಮತ್ತು ಟೆಂಡರ್ ಹಗರಣ, ಅಕ್ರಮ ಆಸ್ತಿ ಗಳಿಕೆ ಇನ್ನೂ ಕೆಲವು ಹಗರಣಗಳಲ್ಲಿ ಲಾಲೂ ಹೆಸರು ಕೇಳಿ ಬಂದಿತ್ತು ಹಾಗೂ ಮೇವು ಹಗರಣದಲ್ಲಿ ಅವರಿಗೆ ಶಿಕ್ಷೆ ಸಹ ಆಗಿತ್ತು.

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್