AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ಬಾಲಿವುಡ್​ ನಿರ್ದೇಶಕರಿಂದ ಮೆಚ್ಚುಗೆ ಪಡೆದ ಕನ್ನಡದ ‘ಡ್ಯಾಡ್​’ ಸಿನಿಮಾ ಟೀಸರ್​

‘ಡ್ಯಾಡ್’ ಸಿನಿಮಾಗೆ ಶಿವಹರಿ ವರ್ಮಾ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಅವರ ಕಾರ್ಯವನ್ನು ಬಾಲಿವುಡ್​ ನಿರ್ದೇಶಕ ಸುಭಾಷ್​ ಘಾಯ್​ ಶ್ಲಾಘಿಸಿದ್ದಾರೆ. ಅರ್ಜುನ್ ಕೃಷ್ಣ ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ವಿಶಾಲ್ ರಾಘವ್, ನೃತ್ಯ ಬೋಪಣ್ಣ, ಮಾಹಿಕಾ ಮಹಿ ಅವರು ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಖ್ಯಾತ ಬಾಲಿವುಡ್​ ನಿರ್ದೇಶಕರಿಂದ ಮೆಚ್ಚುಗೆ ಪಡೆದ ಕನ್ನಡದ ‘ಡ್ಯಾಡ್​’ ಸಿನಿಮಾ ಟೀಸರ್​
‘ಡ್ಯಾಡ್​’ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
|

Updated on: Oct 25, 2023 | 3:56 PM

Share

ಕನ್ನಡದ ‘ಡ್ಯಾಡ್’ ಸಿನಿಮಾ (DAD Movie) ಟೀಸರ್​ ಬಿಡುಗಡೆ ಆಗಿದೆ. ಆಯುಧ ಪೂಜೆ ಪ್ರಯುಕ್ತ ಈ ಟೀಸರ್​ ಲಾಂಚ್​ ಮಾಡಲಾಗಿದೆ. ಇದರ ಥೀಮ್​ ಕೂಡ ಅದೇ ರೀತಿ ಇದೆ. ಸಿನಿಪ್ರಿಯರು ಮಾತ್ರವಲ್ಲದೇ ಬಾಲಿವುಡ್​ನ ಹಿರಿಯ ನಿರ್ದೇಶಕ ಸುಭಾಷ್​ ಘಾಯ್​ ಅವರು ಕೂಡ ಈ ಟೀಸರ್​ (DAD Movie Teaser) ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ‘ಡ್ಯಾಡ್​’ ಸಿನಿಮಾದಲ್ಲಿ ಒಂದು ಖಡಕ್​ ಆದಂತಹ ಕಥೆ ಇದೆ ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ. ರಾಜ್ಯ, ಭಾಷೆಯ ಗಡಿಯನ್ನೂ ಮೀರಿ ಈ ಸಿನಿಮಾದ ಟೀಸರ್​ ಗಮನ ಸೆಳೆಯುತ್ತಿದೆ. ಹಿಂದಿಯ ‘ಖಳನಾಯಕ್​’, ‘ತಾಲ್​’, ‘ಸೌದಾಗರ್​’, ‘ಸ್ವದೇಶ್​’ ಮಂತಾದ ಸಿನಿಮಾಗಳ ನಿರ್ದೇಶಕ ಸುಭಾಷ್​ ಭಾಯ್ (Subhash Ghai)​ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ‘ಡ್ಯಾಡ್​’ ಟೀಸರ್​ ಶೇರ್​ ಮಾಡಿಕೊಂಡಿದ್ದಾರೆ. ಆ ಮೂಲಕ ಬಾಲಿವುಡ್​ ಮಂದಿ ಕೂಡ ಈ ಚಿತ್ರದ ಬಗ್ಗೆ ಗಮನ ಹರಿಸುವಂತೆ ಮಾಡಿದ್ದಾರೆ.

‘ದೇವರಾಜ್ ಅಲಿಯಾಸ್ ಡೇವಿಡ್’ ಎಂಬುದು ‘ಡ್ಯಾಡ್’ ಶೀರ್ಷಿಕೆಯ ವಿಸ್ತೃತ ರೂಪ. ಸಿನಿಮಾದ ಕಥೆಗೆ ಈ ಡಿಫರೆಂಟ್​ ಟೈಟಲ್​ ಸೂಕ್ತವಾಗಿದೆ. ಅರ್ಜುನ್ ಕೃಷ್ಣ ಅವರು ಈ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದಾರೆ. ಚಿತ್ರದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಸಾಮಾನ್ಯವಾಗಿ ಎಲ್ಲರಿಗೂ ಎರಡು ಮುಖ ಇರುತ್ತದೆ. ಸಮಾಜದ ಎದುರು ಒಂದು ಮುಖ ಮಾತ್ರ ಕಾಣುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಆಗಾಗ ಕಷ್ಟಗಳು ಮುತ್ತಿಕೊಂಡರೆ, ದುಷ್ಟರು ಕಾಟ ನೀಡಿದರೆ, ನ್ಯಾಯ ಸಿಗದೇ ಇದ್ದಾಗ ಆತನ 2ನೇ ಮುಖ ಅನಾವರಣಗೊಳ್ಳುತ್ತದೆ. ಇಂಥ ಒಂದು ಎಳೆಯನ್ನು ಡ್ಯಾಡ್ ಸಿನಿಮಾ ಹೊಂದಿದೆ’ ಎಂದು ಅವರು ಹೇಳಿದ್ದಾರೆ.

View this post on Instagram

A post shared by SG (@subhashghai1)

ಅರ್ಜುನ್ ಕೃಷ್ಣ ಅವರು ಎಂಬಿಎ ಪೂರ್ಣಗೊಳಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕುಂದಾಪುರದ ವಿಶಾಲ್ ರಾಘವ್ ಅವರು ‘ಡ್ಯಾಡ್​’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ನೃತ್ಯ ಬೋಪಣ್ಣ ಹಾಗೂ ಮಾಹಿಕಾ ಮಹಿ ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ. ಈಗಾಗಲೇ ಈ ಸಿನಿಮಾಗೆ ಶೂಟಿಂಗ್​ ಮುಕ್ತಾಯ ಆಗಿದೆ. ಈಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಕೂಡ ಕೊನೇ ಹಂತದಲ್ಲಿವೆ.

ಇದನ್ನೂ ಓದಿ: ಜನಮನ ಗೆಲ್ಲುತ್ತಿದೆ ‘ಗರಡಿ’ ಸಿನಿಮಾದ ‘ಬಡವನ ಹೃದಯ..’ ಸಾಂಗ್​

ಈ ಚಿತ್ರದ ಮೂರು ಹಾಡುಗಳು ಬಿಡುಗಡೆ ಆಗಿವೆ. ನಟನಾ ಮುಂಜು ಅವರಿಗೂ ಈ ಸಿನಿಮಾದಲ್ಲೊಂದು ಪ್ರಮುಖ ಪಾತ್ರವಿದೆ. ಅನೇಕ ಹೊಸಬರಿಗೆ ಈ ಸಿನಿಮಾದಲ್ಲಿ ಅವಕಾಶ ನೀಡಲಾಗಿದೆ. ಅವರ ಜೊತೆ ಹಿರಿಯ ಕಲಾವಿದರಾದ ಸುಚೇಂದ್ರ ಪ್ರಸಾದ್, ಅರುಣಾ ಬಾಲರಾಜ್, ಸಿದ್ಲಿಂಗು ಶ್ರೀಧರ್ ಕೂಡ ನಟಿಸಿದ್ದಾರೆ.

‘ಡ್ಯಾಡ್’ ಸಿನಿಮಾ ಟೀಸರ್​ :

‘ಡ್ಯಾಡ್​’ ಸಿನಿಮಾ ಮೂಲಕ ಹೊಸ ಖಳನಟರು ಪರಿಚಯಗೊಳ್ಳಲಿದ್ದಾರೆ. ಶಿವಹರಿ ವರ್ಮಾ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಅವರ ಕಾರ್ಯವನ್ನು ಸುಭಾಷ್​ ಘಾಯ್​ ಶ್ಲಾಘಿಸಿದ್ದಾರೆ. ಮುಂಬೈ ಮೂಲದ ಆಕಾಶ್ ಸೇಠ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅನಿಲ್ ಕುಮಾರ್ ಕೆ. ಅವರು ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಅಲ್ಲದೇ ವಿಎಫ್ಎಕ್ಸ್ ಹಾಗೂ ಪೋಸ್ಟರ್ ವಿನ್ಯಾಸದ ಕಾರ್ಯವನ್ನೂ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು