AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋವಾ ಸಿನಿಮೋತ್ಸವದಲ್ಲಿ ಮಿಂಚಲಿವೆ ದಕ್ಷಿಣದ ಸಿನಿಮಾಗಳು: ಕನ್ನಡದ ಸಿನಿಮಾಗಳು ಯಾವುವು?

IFFI 2023 Goa: ಗೋವಾ ಸಿನಿಮಾ ಉತ್ಸವ ಎಂದೇ ಕರೆಯಲಾಗುವ ಇಂಟರ್ನ್ಯಾಷನಲ್ ಫಿಲಂ ಫೆಸ್ಟ್ ಆಫ್ ಇಂಡಿಯಾ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಈ ಬಾರಿ ದಕ್ಷಿಣದ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿದೆ.

ಗೋವಾ ಸಿನಿಮೋತ್ಸವದಲ್ಲಿ ಮಿಂಚಲಿವೆ ದಕ್ಷಿಣದ ಸಿನಿಮಾಗಳು: ಕನ್ನಡದ ಸಿನಿಮಾಗಳು ಯಾವುವು?
ಸಿನಿಮೋತ್ಸವ
ಮಂಜುನಾಥ ಸಿ.
|

Updated on: Oct 28, 2023 | 3:54 PM

Share

ಗೋವಾ ಸಿನಿಮಾ ಉತ್ಸವ ಎಂದೇ ಕರೆಯಲಾಗುವ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ (Film Festival) ಘೋಷಣೆಯಾಗಿದ್ದು, ಸಿನಿಮಾ ಪ್ರವೇಶಕ್ಕೆ ಆಹ್ವಾನ ನೀಡಲಾಗಿದೆ. ಬಾಕ್ಸ್ ಆಫೀಸ್​ನಲ್ಲಿ ಈಗಾಗಲೇ ಕಮಾಲ್ ತೋರಿಸುತ್ತಿರುವ ದಕ್ಷಿಣ ಭಾರತದ ಸಿನಿಮಾಗಳು, ಗೋವಾ ಸಿನಿಮೋತ್ಸವದಲ್ಲಿಯೂ ಕಮಾಲ್ ಮಾಡುವುದು ಪಕ್ಕಾ ಆಗಿದ್ದು, ಕೇವಲ ಕಲಾತ್ಮಕ ಅಥವಾ ಬ್ರಿಜ್ ಸಿನಿಮಾಗಳು ಮಾತ್ರವೇ ಅಲ್ಲದೆ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಯಶಸ್ಸು ಕಂಡ ದಕ್ಷಿಣದ ಸಿನಿಮಾಗಳು ಸಹ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲಿವೆ.

ಕನ್ನಡದ ‘ಕಾಂತಾರ’ ಸಿನಿಮಾ ಈ ವರ್ಷ ಗೋವಾ ಸಿನಿಮೋತ್ಸವದ ಪ್ರಮುಖ ಸಿನಿಮಾಗಳಲ್ಲಿ ಒಂದಾಗಿದೆ. ಅದರ ಜೊತೆಗೆ ಕನ್ನಡದ ‘ಪಿಂಕಿ ಎಲ್ಲಿ?’, ಇನ್ನೂ ಕೆಲವು ಕನ್ನಡ ಸಿನಿಮಾಗಳು ಸಹ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ. ‘ಕೆಜಿಎಫ್ 2’ ಸಿನಿಮಾ ಸಹ ಪಾಪ್ಯುಲರ್ ಸಿನಿಮಾ ವಿಭಾಗದಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ:‘ಟಗರು ಪಲ್ಯ’ ಚಿತ್ರ ನೋಡಿದ ಶ್ರುತಿಗೆ ನೆನಪಾಯ್ತು ‘ಕಾಂತಾರ’, ‘ಕೆಜಿಎಫ್​ 2’; ಕಾರಣ ಏನು?

ಇನ್ನು ತಮಿಳಿನ ‘ಪೊನ್ನಿಯಿನ್ ಸೆಲ್ವನ್ 2’ ಹಾಗೂ ವೆಟ್ರಿಮಾರನ್ ನಿರ್ದೇಶನದ ‘ವಿಡುದಲೈ 1’ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇನ್ನೂ ಕೆಲವು ತಮಿಳು ಸಿನಿಮಾಗಳು ಪ್ರದರ್ಶನಗೊಳ್ಳಲಿದ್ದು, ‘ಪೊನ್ನಿಯಿನ್ ಸೆಲ್ವನ್ 2’, ‘ವಿಡುದಲೈ 1’ ಹೆಚ್ಚು ಗಮನ ಸೆಳೆದಿರುವ ಸಿನಿಮಾಗಳು. ಇನ್ನು ಮಲಯಾಳಂನ ‘2018’, ‘ನಾನ್​ದಾನ್ ಕೇಸ್ ಕುಡು’ ಸಿನಿಮಾಗಳು ಪ್ರದರ್ಶನ ಗೊಳ್ಳಲಿವೆ. ತೆಲುಗಿನ ‘ಆರ್​ಆರ್​ಆರ್’ ಸಿನಿಮಾ ಪ್ರದರ್ಶನ ಗೊಳ್ಳಲಿದೆ.

‘ಕಾಂತಾರ’, ‘ಪೊನ್ನಿಯಿನ್ ಸೆಲ್ವನ್ 2’ ಹಾಗೂ ವೆಟ್ರಿಮಾರನ್ ನಿರ್ದೇಶನದ ‘ವಿಡುದಲೈ 1’, ‘2018’, ‘ನಾನ್​ದಾನ್ ಕೇಸ್ ಕುಡು’  ಇನ್ನೂ ಕೆಲವು ಸಿನಿಮಾಗಳು ಪನೋರಮಾ ವಿಭಾಗದಲ್ಲಿ ಈಗಾಗಲೇ ಪ್ರವೇಶ ಪಡೆದಿವೆ. ಇದರ ಜೊತೆಗೆ ಹಿಂದಿಯ ‘ದಿ ಕಾಶ್ಮೀರ್ ಫೈಲ್ಸ್’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ಸಹ ಪ್ರದರ್ಶನ ಗೊಳ್ಳಲಿವೆ.

ನವೆಂಬರ್ 20ಕ್ಕೆ ಗೋವಾ ಸಿನಿಮೋತ್ಸವವು ಆರಂಭಗೊಳ್ಳಲಿದ್ದು, ನವೆಂಬರ್ 28ಕ್ಕೆ ಸಿನಿಮೋತ್ಸವ ಅಂತ್ಯವಾಗಲಿದೆ. ಹಾಲಿವುಡ್​ನ ಜನಪ್ರಿಯ ನಟ, ನಿರ್ಮಾಪಕ ಮೈಖಲ್ ಡಗ್ಲಸ್ ಅವರಿಗೆ ಸಿನಿಮೋತ್ಸವದಲ್ಲಿ ಸತ್ಯಜಿತ್ ರೇ ಜೀವನಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಈಗಾಗಲೇ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರು ಘೋಷಣೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ