ಪಾರ್ಟ್ನರ್​ ಎಂದು ಒಪ್ಪಿಕೊಂಡ ಸಿದ್ದಾರ್ಥ್​; ಅದಿತಿ ರಾವ್​ ಹೈದರಿ ಜೊತೆಗಿನ ಲವ್​ ಅಧಿಕೃತ

ಅದಿತಿ ರಾವ್​ ಹೈದರಿ ಜೊತೆ ಸಿದ್ದಾರ್ಥ್​ ಅವರ ಓಡಾಟ ಇತ್ತೀಚೆಗೆ ಜೋರಾಗಿದೆ. ಶೀಘ್ರದಲ್ಲೇ ಈ ಜೋಡಿಯಿಂದ ಮದುವೆ ಬಗ್ಗೆ ಬ್ರೇಕಿಂಗ್​ ನ್ಯೂಸ್​ ಹೊರಬರಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರರಂಗದಲ್ಲಿ ಇಬ್ಬರೂ ಬ್ಯುಸಿ ಆಗಿದ್ದಾರೆ. ಅದಿತಿಯನ್ನು ತಮ್ಮ ಪಾರ್ಟ್ನರ್​ ಎಂದು ಸಿದ್ದಾರ್ಥ್​ ಒಪ್ಪಿಕೊಂಡಿದ್ದಾರೆ.

ಪಾರ್ಟ್ನರ್​ ಎಂದು ಒಪ್ಪಿಕೊಂಡ ಸಿದ್ದಾರ್ಥ್​; ಅದಿತಿ ರಾವ್​ ಹೈದರಿ ಜೊತೆಗಿನ ಲವ್​ ಅಧಿಕೃತ
ಅದಿತಿ ರಾವ್ ಹೈದರಿ, ಸಿದ್ದಾರ್ಥ್​
Follow us
ಮದನ್​ ಕುಮಾರ್​
|

Updated on: Oct 29, 2023 | 7:41 AM

ಖ್ಯಾತ ನಟಿ ಅದಿತಿ ರಾವ್​ ಹೈದರಿ (Aditi Rao Hydari) ಅವರು ಹಲವು ತಿಂಗಳಿಂದ ನಟ ಸಿದ್ಧಾರ್ಥ್​ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ. ತಾವಿಬ್ಬರೂ ಪ್ರೇಮಿಗಳು ಎಂದು ಈ ಜೋಡಿ ಎಂದಿಗೂ ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಈಗ ಅದಿತಿ ರಾವ್​ ಹೈದರಿಯನ್ನು ‘ಪಾರ್ಟ್ನರ್​’ ಎಂದು ಕರೆಯುವ ಮೂಲಕ ಸಿದ್ದಾರ್ಥ್ (Siddharth)​ ಅವರು ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಆದಷ್ಟು ಬೇಗ ಈ ಪ್ರೇಮಿಗಳು ಮದುವೆ ಆಗಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ. ಈ ಜೋಡಿ ಸೂಪರ್​ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಇಬ್ಬರ ಫೋಟೋ ವೈರಲ್​ ಆಗುತ್ತಿದೆ.

ಬಾಲಿವುಡ್​ನಲ್ಲಿ ಮತ್ತು ದಕ್ಷಿಣ ಭಾರತದಲ್ಲಿ ಅದಿತಿ ರಾವ್​ ಹೈದರಿ ಅವರು ಗುರುತಿಸಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ ಸಖತ್​ ಡಿಮ್ಯಾಂಡ್​ ಇದೆ. ಅನೇಕ ಹಿಟ್​ ಸಿನಿಮಾಗಳನ್ನು ಅವರು ನೀಡಿದ್ದಾರೆ. ಶನಿವಾರ (ಅಕ್ಟೋಬರ್ 28) ಅವರಿಗೆ ಜನ್ಮದಿನದ ಸಂಭ್ರಮ. ಈ ಖುಷಿಯಲ್ಲಿ ಸಿದ್ದಾರ್ಥ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯ ತಿಳಿಸಿದ್ದಾರೆ. ತಮ್ಮಿಬ್ಬರ ಫೋಟೋವನ್ನು ಹಂಚಿಕೊಂಡು, ಅದಕ್ಕೆ ಕವನದ ರೀತಿಯಲ್ಲಿ ಕ್ಯಾಪ್ಷನ್​ ಬರೆದಿದ್ದಾರೆ. ಇದರಲ್ಲಿ ‘ಪಾರ್ಟ್ನರ್​’ ಎಂಬ ಪದವನ್ನು ಅವರು ಬಳಕೆ ಮಾಡಿದ್ದಾರೆ. ಆ ಮೂಲಕ ತಮ್ಮ ಪ್ರೀತಿಯನ್ನು ಅವರು ಒಪ್ಪಿಕೊಂಡಿದ್ದಾರೆ.

ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ಫೋಟೋಗೆ ಕಮೆಂಟ್​ ಮಾಡಿದ್ದಾರೆ. ದಿಯಾ ಮಿರ್ಜಾ, ಪತ್ರಲೇಖಾ ಅವರು ಅದಿತಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಅದಿತಿ ಅವರಿಗೆ ಈಗ 37 ವರ್ಷ ವಯಸ್ಸು. ಹಿಂದಿ ಮಾತ್ರವಲ್ಲದೇ ಇಂಗ್ಲಿಷ್​ ಸಿನಿಮಾಗಳಿಂದಲೂ ಅವರಿಗೆ ಆಫರ್​ ಬರುತ್ತಿದೆ. ಜೊತೆಗೆ, ವೆಬ್​ ಸೀರಿಸ್​ಗಳಲ್ಲೂ ಅವರು ನಟಿಸುತ್ತಿದ್ದಾರೆ. ಸಿದ್ದಾರ್ಥ್​ ಜೊತೆಗಿನ ಲವ್​ ಕಾರಣದಿಂದಲೂ ಅವರ ಆಗಾಗ ಸುದ್ದಿ ಆಗುತ್ತಾರೆ.

ಇದನ್ನೂ ಓದಿ: ಅದಿತಿ ರಾವ್ ಹೈದರಿಗೆ ಬರ್ತ್​ಡೇ ಸಂಭ್ರಮ

ಈ ಮೊದಲು ಅದಿತಿ ರಾವ್​ ಹೈದರಿ ಅವರು ನಟ ಸತ್ಯದೀಪ್​ ಮಿಶ್ರಾ ಜೊತೆ ಮದುವೆ ಆಗಿದ್ದರು. ಆದರೆ 2013ರಲ್ಲಿ ಅವರು ವಿಚ್ಛೇದನ ಪಡೆದರು. ಅದೇ ರೀತಿ, ಸಿದ್ದಾರ್ಥ್​ ಕೂಡ ಮೇಘನಾ ನಾರಾಯಣ್​ ಜೊತೆ 2003ರಲ್ಲಿ ಮದುವೆಯಾಗಿ 2007ರಲ್ಲಿ ಡಿವೋರ್ಸ್​ ಪಡೆದರು. ಈಗ ಅದಿತಿ ರಾವ್​ ಹೈದರಿ ಜೊತೆ ಸಿದ್ದಾರ್ಥ್​ ಅವರ ಓಡಾಟ ಜೋರಾಗಿದೆ. ಶೀಘ್ರದಲ್ಲೇ ಈ ಜೋಡಿಯಿಂದ ಮದುವೆ ಬಗ್ಗೆ ಬ್ರೇಕಿಂಗ್​ ನ್ಯೂಸ್​ ಹೊರಬರಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರರಂಗದಲ್ಲಿ ಇಬ್ಬರೂ ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!