AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಗರು ಪಲ್ಯ’ ಚಿತ್ರ ನೋಡಿದ ಶ್ರುತಿಗೆ ನೆನಪಾಯ್ತು ‘ಕಾಂತಾರ’, ‘ಕೆಜಿಎಫ್​ 2’; ಕಾರಣ ಏನು?

‘ಟಗರು ಪಲ್ಯ’ ಚಿತ್ರ ನೋಡಿದ ಶ್ರುತಿಗೆ ನೆನಪಾಯ್ತು ‘ಕಾಂತಾರ’, ‘ಕೆಜಿಎಫ್​ 2’; ಕಾರಣ ಏನು?

ಮದನ್​ ಕುಮಾರ್​
|

Updated on: Oct 27, 2023 | 3:22 PM

Share

ಅಮೃತಾ ಪ್ರೇಮ್​, ನಾಗಭೂಷಣ್​, ರಂಗಾಯಣ ರಘು, ತಾರಾ ಮುಂತಾದವರು ‘ಟಗರು ಪಲ್ಯ’ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಡಾಲಿ ಧನಂಜಯ್​ ನಿರ್ಮಾಣ ಮಾಡಿದ್ದು, ಉಮೇಶ್​ ಕೆ. ಕೃಪ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದ ಬಳಿಕ ಹಿರಿಯ ನಟಿ ಶ್ರುತಿ ಅವರು ಅನಿಸಿಕೆ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ (ಅ.26) ಟಗರು ಪಲ್ಯ’ (Tagaru Palya) ಸಿನಿಮಾದ ಪ್ರೀಮಿಯರ್​ ಶೋ ನಡೆಯಿತು. ಅದರಲ್ಲಿ ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಭಾಗಿ ಆಗಿದ್ದರು. ಸಿನಿಮಾ ನೋಡಿದ ಬಳಿಕ ಎಲ್ಲರೂ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅಮೃತಾ ಪ್ರೇಮ್​ (Amrutha Prem), ನಾಗಭೂಷಣ್​, ರಂಗಾಯಣ ರಘು, ತಾರಾ ಮುಂತಾದವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಡಾಲಿ ಧನಂಜಯ್​ ನಿರ್ಮಾಣ ಮಾಡಿದ್ದು, ಉಮೇಶ್​ ಕೆ. ಕೃಪ ನಿರ್ದೇಶನ ಮಾಡಿದ್ದಾರೆ. ಅಮೃತಾ ಪ್ರೇಮ್​ ಅವರಿಗೆ ಇದು ಚೊಚ್ಚಲ ಸಿನಿಮಾ. ಇದರಲ್ಲಿ ಅಪ್ಪಟ ಗ್ರಾಮೀಣ ಸೊಗಡಿನ ಮತ್ತು ಕನ್ನಡದ ಮಣ್ಣಿನ ಕಹಾನಿ ಇದೆ. ಹಾಗಾಗಿ ಸಿನಿಮಾ ನೋಡಿದ ಬಳಿಕ ಹಿರಿಯ ನಟಿ ಶ್ರುತಿ (Shruthi) ಅವರಿಗೆ ‘ಕಾಂತಾರ’, ‘ಕೆಜಿಎಫ್​ 2’ ಸಿನಿಮಾಗಳ ನೆನಪಾಗಿದೆ. ಅಮೃತಾ ಅಭಿನಯಕ್ಕೆ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More