ಟ್ರಯಾಂಗಲ್ ಲವ್ ಸ್ಟೋರಿ ಸಿನಿಮಾದಲ್ಲಿ ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್?
ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಅವರು ಡೇಟ್ ಮಾಡಿದ್ದರು. ದೀಪಿಕಾ ತುಂಬಾನೇ ಗಂಭೀರವಾಗಿ ರಣಬೀರ್ ಅವರನ್ನು ಪ್ರೀತಿಸಿದ್ದರು. ಆದರೆ, ರಣಬೀರ್ ಮೋಸ ಮಾಡಿದ ಕಾರಣಕ್ಕೆ ಬ್ರೇಕಪ್ ಆಯಿತು ಎನ್ನಲಾಗಿದೆ. ಆ ಬಳಿಕವೂ ರಣಬೀರ್ ಹಾಗೂ ದೀಪಿಕಾ ಒಟ್ಟಾಗಿ ನಟಿಸಿದ್ದರು ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.
ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಅವರು ‘ಕಾಫಿ ವಿತ್ ಕರಣ್ ಸೀಸನ್ 8’ರ (Koffee With Karan 8) ಮೊದಲ ಅತಿಥಿಯಾಗಿ ಆಗಮಿಸಿದ್ದಾರೆ. ಈ ಶೋನಲ್ಲಿ ಹಲವು ವಿಚಾರಗಳನ್ನು ಫಿಲ್ಟರ್ ಇಲ್ಲದೆ ಮಾತನಾಡಲಾಗುತ್ತದೆ. ಈ ಕಾರಣದಿಂದಲೇ ಶೋ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ರಣವೀರ್ ಹಾಗೂ ದೀಪಿಕಾ ಪಡುಕೋಣೆ (Deepika Padukone) ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮಧ್ಯೆ ಪ್ರೀತಿ ಹುಟ್ಟಿದ್ದು ಹೇಗೆ ಎಂಬುದನ್ನು ರಣವೀರ್ ಸಿಂಗ್ ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದರ ಜೊತೆಗೆ ಟ್ರಯಾಂಗಲ್ ಲವ್ಸ್ಟೋರಿ ಸಿನಿಮಾ ಕುರಿತು ಇವರು ಚರ್ಚೆ ನಡೆಸಿದ್ದಾರೆ. ರಣವೀರ್ ಸಿಂಗ್ (Ranveer Singh) ನೀಡಿರೋ ಹೇಳಿಕೆ ಸಾಕಷ್ಟು ಅಚ್ಚರಿ ಮೂಡಿಸಿದೆ.
‘ಕಾಫಿ ವಿತ್ ಕರಣ್’ ಶೋನಲ್ಲಿ ರ‍್ಯಾಪಿಡ್ ಫೈರ್ ರೌಂಡ್ ಸಾಕಷ್ಟು ಕುತೂಹಲ ಮೂಡಿಸುತ್ತದೆ. ಇಲ್ಲಿ ಹಲವು ವಿವಾದಾತ್ಮಕ ಪ್ರಶ್ನೆ ಕೇಳಲಾಗುತ್ತದೆ. ಕೆಲವು ಸೆಲೆಬ್ರಿಟಿಗಳು ಉತ್ತರ ನೀಡಿದರೆ, ಇನ್ನೂ ಕೆಲವು ಸೆಲೆಬ್ರಿಟಿಗಳು ಸೈಲೆಂಟ್ ಆಗಿರುತ್ತಾರೆ. ಈ ಬಾರಿ ರಣವೀರ್ ಸಿಂಗ್ಗೆ ಒಂದು ಅಚ್ಚರಿಯ ಪ್ರಶ್ನೆ ಎದುರಾಯಿತು. ಅವರು ಮುಚ್ಚುಮರೆ ಇಲ್ಲದೆ ಇದಕ್ಕೆ ಉತ್ತರ ನೀಡಿದ್ದಾರೆ. ‘ಟ್ರಯಾಂಗಲ್ ಲವ್ಸ್ಟೋರಿ ಸಿನಿಮಾ ಮಾಡಿದರೆ ನಿಮ್ಮಿಬ್ಬರ ಜೊತೆ (ರಣವೀರ್, ದೀಪಿಕಾ) ನಟಿಸೋಕೆ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ’ ಎಂದು ಕರಣ್ ಜೋಹರ್ ಅವರು ರಣವೀರ್ ಸಿಂಗ್ಗೆ ಕೇಳಿದರು. ಇದಕ್ಕೆ ಅವರು ಯೋಚಿಸದೇ ‘ರಣಬೀರ್ ಕಪೂರ್’ ಎನ್ನುವ ಉತ್ತರ ನೀಡಿದರು.
ಇದನ್ನೂ ಓದಿ: ವಿವಾಹ ಆದ ಐದು ವರ್ಷದ ಬಳಿಕ ಮದುವೆ ವಿಡಿಯೋ ರಿವೀಲ್ ಮಾಡಿದ ದೀಪಿಕಾ-ರಣವೀರ್
ಈ ಮೊದಲು ‘ಸಂಗಮ್’ ಚಿತ್ರವನ್ನು ರಿಮೇಕ್ ಮಾಡಲು ಕರಣ್ ಜೋಹರ್ ಚಿಂತಿಸಿದ್ದರು. ರಣವೀರ್ ಸಿಂಗ್, ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ವಿಚಾರದ ಬಗ್ಗೆ ರಣವೀರ್ ಸಿಂಗ್ ಕೇಳಿದ್ದಾರೆ. ಇದಕ್ಕೆ ಕರಣ್ ಜೋಹರ್ ಅವರ ಕಡೆಯಿಂದ ಪಾಸಿಟಿವ್ ಉತ್ತರ ಬಂದಿದೆ. ‘ನಾನು ಸಂಗಮ್’ ಚಿತ್ರವನ್ನು ಯಾವಾಗ ಬೇಕಾದರೂ ಮಾಡಬಹುದು’ ಎಂದರು ಅವರು. ದೀಪಿಕಾ ಕೂಡ ಓಕೆ ಎಂದರು. ಈ ಮೂವರು ಒಂದೇ ಸಿನಿಮಾದಲ್ಲಿ ನಟಿಸುತ್ತಾರಾ ಎನ್ನುವ ಕುತೂಹಲ ಮೂಡಿದೆ.
ಇದನ್ನೂ ಓದಿ: ‘ಸಿಂಗಂ ಅಗೇನ್’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆಗೆ ಶಕ್ತಿ ಶೆಟ್ಟಿ ಪಾತ್ರ
ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಅವರು ಡೇಟ್ ಮಾಡಿದ್ದರು. ಇಬ್ಬರ ಸಂಬಂಧ ಮುರಿದು ಬಿತ್ತು. ದೀಪಿಕಾ ತುಂಬಾನೇ ಗಂಭೀರವಾಗಿ ರಣಬೀರ್ ಅವರನ್ನು ಪ್ರೀತಿಸಿದ್ದರು. ಆದರೆ, ರಣಬೀರ್ ಮೋಸ ಮಾಡಿದ ಕಾರಣಕ್ಕೆ ಬ್ರೇಕಪ್ ಆಯಿತು ಎನ್ನಲಾಗಿದೆ. ಆ ಬಳಿಕವೂ ರಣಬೀರ್ ಹಾಗೂ ದೀಪಿಕಾ ಒಟ್ಟಾಗಿ ನಟಿಸಿದರು ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ರಣವೀರ್ ಸಿಂಗ್ ಹಾಗೂ ದೀಪಿಕಾ 2012ರಿಂದ ಡೇಟ್ ಮಾಡೋಕೆ ಆರಂಭಿಸಿದರು. 2018ರಲ್ಲಿ ಇವರು ಮದುವೆ ಆದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.