ವಿವಾಹ ಆದ ಐದು ವರ್ಷದ ಬಳಿಕ ಮದುವೆ ವಿಡಿಯೋ ರಿವೀಲ್ ಮಾಡಿದ ದೀಪಿಕಾ-ರಣವೀರ್
‘ಕಾಫಿ ವಿತ್ ಕರಣ್’ ಎಂಟನೇ ಸೀಸನ್ನ ಮೊದಲ ಎಪಿಸೋಡ್ ಹಾಟ್ಸ್ಟಾರ್ನಲ್ಲಿ ರಿಲೀಸ್ ಆಗಿದೆ. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಈ ಶೋಗೆ ಆಗಮಿಸಿದ್ದಾರೆ. ಈ ಎಪಿಸೋಡ್ನಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ಈ ದಂಪತಿ ಹೇಳಿಕೊಂಡಿದ್ದಾರೆ.
ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ (Deepika Padukone) 2018ರ ನವೆಂಬರ್ 14ರಂದು ಇಟಲಿಯಲ್ಲಿ ಮದುವೆ ಆದರು. ಇವರ ಮದುವೆ ನಡೆದು ಐದು ವರ್ಷ ಆಗಿದೆ. ಆದರೆ, ಇಲ್ಲಿಯವರೆಗೆ ಇವರು ವಿವಾಹದ ವಿಡಿಯೋ ರಿವೀಲ್ ಮಾಡಿರಲಿಲ್ಲ. ಇದಕ್ಕಾಗಿ ಫ್ಯಾನ್ಸ್ ಕಾಯುತ್ತಲೇ ಇದ್ದರು. ಇದೇ ಮೊದಲ ಬಾರಿಗೆ ಇವರ ಮದುವೆ ವಿಡಿಯೋ ರಿವೀಲ್ ಆಗಿದೆ. ‘ಕಾಫಿ ವಿತ್ ಕರಣ್ ಸೀಸನ್ 8’ರಲ್ಲಿ ವಿವಾಹದ ವಿಡಿಯೋ ಬಿಡುಗಡೆ ಮಾಡಲಾಗಿದೆ. ತಮ್ಮ ಲವ್ ಸ್ಟೋರಿ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
‘ಕಾಫಿ ವಿತ್ ಕರಣ್’ ಎಂಟನೇ ಸೀಸನ್ನ ಮೊದಲ ಎಪಿಸೋಡ್ ಹಾಟ್ಸ್ಟಾರ್ನಲ್ಲಿ ರಿಲೀಸ್ ಆಗಿದೆ. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಈ ಶೋಗೆ ಆಗಮಿಸಿದ್ದಾರೆ. ಈ ಎಪಿಸೋಡ್ನಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ಈ ದಂಪತಿ ಹೇಳಿಕೊಂಡಿದ್ದಾರೆ. ಸದ್ಯ ಈ ಎಪಿಸೋಡ್ ಗಮನ ಸೆಳೆಯುತ್ತಿದೆ. ಈ ಎಪಿಸೋಡ್ನಲ್ಲಿ ಮದುವೆ ವಿಡಿಯೋ ರಿವೀಲ್ ಆಗಿದೆ.
ವಿವಾಹದ ವಿಡಿಯೋದಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಬಗ್ಗೆ ಕುಟುಂಬದವರು ಮಾತನಾಡಿದ್ದಾರೆ. ರಣವೀರ್ ಸಿಂಗ್ ಅವರು ಸಖತ್ ಎನರ್ಜಿಟಿಕ್ ಆಗಿರುತ್ತಾರೆ. ರಣವೀರ್ ಕುಟುಂಬದಲ್ಲಿ ಇರುವವರು ಎಲ್ಲರೂ ಸೈಲೆಂಟ್ ಅಂತೆ. ಆದರೆ, ರಣವೀರ್ ಮಾತ್ರ ಈ ರೀತಿ ವರ್ತಿಸುತ್ತಾರಂತೆ. ‘ನಾನು ದೀಪಿಕಾನ ಮದುವೆ ಆಗುತ್ತೇನೆ’ ಎಂದು ರಣವೀರ್ ಸಿಂಗ್ ಹೇಳಿದ್ದರಂತೆ. ನಂತರ ಇದು ನಿಜವಾಯಿತು. ಇಬ್ಬರೂ ಸಾಂಪ್ರದಾಯಿಕವಾಗಿ ಹಸೆಮಣೆ ಏರಿದ್ದಾರೆ.
Deepika, Ranveer unveil precious wedding video at ‘Koffee With Karan 8’
Read @ANI Story | https://t.co/Yixc3DgauJ#DeepikaPadukone #DeepVeer #RanveerSingh #KoffeeWithKaran pic.twitter.com/SpJZjuk2IN
— ANI Digital (@ani_digital) October 26, 2023
View this post on Instagram
ಇದನ್ನೂ ಓದಿ: ‘ಡಾನ್ 3’ಗೆ ರಣವೀರ್ ಸಿಂಗ್ ಎಂಟ್ರಿ; ಶಾರುಖ್ ಖಾನ್ ಹೊರ ನಡೆದ ವಿಚಾರ ಖಚಿತವಾಯ್ತು
ರಣವೀರ್ ಸಿಂಗ್ ಹಾಗೂ ದೀಪಿಕಾ ಇಟಲಿಯಲ್ಲಿ ಮದುವೆ ಆದರು. ಆ ಬಳಿಕ ಬೆಂಗಳೂರು ಹಾಗೂ ಮುಂಬೈನಲ್ಲಿ ರಿಸೆಪ್ಷನ್ ಆಯೋಜನೆ ಮಾಡಲಾಗಿತ್ತು. ಇವರ ಮದುವೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಈ ದಂಪತಿ ತಮ್ಮ ತಮ್ಮ ವೃತ್ತಿ ಬದುಕಿನಲ್ಲಿ ಬ್ಯುಸಿ ಆಗಿದ್ದಾರೆ. ಇವರನ್ನು ಮತ್ತೆ ತೆರೆಮೇಲೇ ಒಟ್ಟಾಗಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ