AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡಾನ್​ 3’ಗೆ ರಣವೀರ್ ಸಿಂಗ್ ಎಂಟ್ರಿ; ಶಾರುಖ್ ಖಾನ್ ಹೊರ ನಡೆದ ವಿಚಾರ ಖಚಿತವಾಯ್ತು

Don 3: ಫರ್ಹಾನ್ ಅಖ್ತರ್ ನಿರ್ದೇಶನದ 'ಡಾನ್ 3' ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದೆ. ಟೀಸರ್ ನೋಡಿದ ರಣ್ವೀರ್ ಸಿಂಗ್ ಅಭಿಮಾನಿಗಳಿಗೆ ಖುಷಿಯಾದರೆ ಶಾರುಖ್ ಖಾನ್ ಅಭಿಮಾನಿಗಳಿಗೆ ಬೇಸರವಾಗಿದೆ.

‘ಡಾನ್​ 3’ಗೆ ರಣವೀರ್ ಸಿಂಗ್ ಎಂಟ್ರಿ; ಶಾರುಖ್ ಖಾನ್ ಹೊರ ನಡೆದ ವಿಚಾರ ಖಚಿತವಾಯ್ತು
ಡಾನ್ 3
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Aug 09, 2023 | 1:15 PM

Share

ಫರ್ಹಾನ್ ಅಖ್ತರ್ (Farhan Akhtar) ನಿರ್ದೇಶನದ ‘ಡಾನ್’ (Don) ಹಾಗೂ ‘ಡಾನ್ 2’ (Don 2) ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರಗಳಲ್ಲಿ ಡಾನ್ ಆಗಿ ಮಿಂಚಿದ್ದು ಶಾರುಖ್ ಖಾನ್. ಅವರು ‘ಡಾನ್ 3’ ಸಿನಿಮಾದಲ್ಲಿ ಮುಂದುವರಿಯಲ್ಲ ಅನ್ನೋ ಸುದ್ದಿ ಈ ಮೊದಲು ಹರಿದಾಡಿತ್ತು. ಈಗ ಇದು ಖಚಿತಗೊಂಡಿದೆ. ‘ಡಾನ್ 3’ ಸಿನಿಮಾದಿಂದ ಶಾರುಖ್ ಖಾನ್ ಹೊರ ನಡೆದಿದ್ದು, ರಣವೀರ್ ಸಿಂಗ್ ಎಂಟ್ರಿ ಆಗಿದೆ. ಈ ಕುರಿತು ಹೊಸ ಪ್ರೋಮೋ ರಿಲೀಸ್ ಮಾಡಲಾಗಿದೆ. ಶಾರುಖ್ ಖಾನ್ (Shah Rukh Khan) ಅಭಿಮಾನಿಗಳು ಇದನ್ನು ವಿರೋಧಿಸಿದ್ದಾರೆ. ಡಾನ್ ಪಾತ್ರವನ್ನು ಶಾರುಖ್ ಖಾನ್ ಬಿಟ್ಟು ಬೇರಾರೂ ಸರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಸೀಕ್ವೆಲ್​ಗಳಲ್ಲಿ ಹೀರೋ ಬದಲಾಗುವುದು ಇದೇ ಮೊದಲೇನೂ ಅಲ್ಲ. ಅಕ್ಷಯ್ ಕುಮಾರ್ ‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ನಟಿಸಿದ್ದರು. ಅದರ ಸೀಕ್ವೆಲ್​ನಲ್ಲಿ ಕಾರ್ತಿಕ್ ಆರ್ಯನ್ ಬಣ್ಣ ಹಚ್ಚಿದರು. ಈ ಚಿತ್ರ ಕೂಡ ಹಿಟ್ ಆಯಿತು. ಹೀರೋ ಬದಲಾವಣೆ ಸೋಲು-ಗೆಲುವನ್ನು ನಿರ್ಧರಿಸುವುದಿಲ್ಲ ಎಂಬ ನಂಬಿಕೆಯಲ್ಲಿ ನಿರ್ದೇಶಕ ಫರ್ಹಾನ್ ಅಖ್ತರ್ ಇದ್ದಾರೆ. ಈ ಕಾರಣಕ್ಕೆ ‘ಡಾನ್ 3’ ಚಿತ್ರದಲ್ಲಿ ಶಾರುಖ್ ಖಾನ್ ಬದಲು ರಣವೀರ್ ಸಿಂಗ್​ಗೆ ಮಣೆ ಹಾಕಿದ್ದಾರೆ ಫರ್ಹಾನ್ ಅಖ್ತರ್.

ಹೊಸ ಡಾನ್​ನ ಪರಿಚಯಿಸಲು ಪ್ರೋಮೋ ಒಂದನ್ನು ರಿಲೀಸ್ ಮಾಡಲಾಗಿದೆ. ಇದರಲ್ಲಿ ಮಸ್ತ್ ಆಗಿ ಎಂಟ್ರಿ ಕೊಟ್ಟಿದ್ದಾರೆ ರಣವೀರ್ ಸಿಂಗ್. ರಣವೀರ್ ಸಿಂಗ್ ಅವರು ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಕೂಡ ಸಾಧಾರಣ ಗೆಲುವು ಎಂಬ ಹಣೆಪಟ್ಟಿ ಪಡೆದಿದೆ. ಈಗ ‘ಡಾನ್ 3’ ಮೂಲಕ ಅವರಿಗೆ ಗೆಲುವು ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಶಾರುಖ್ ಖಾನ್ ಅವರ ಒಟ್ಟೂ ಆಸ್ತಿ ಎಷ್ಟು ಗೊತ್ತಾ? ಭಾರತದ ಶ್ರೀಮಂತ ನಟನ ಬಳಿ ಇದೆ ಸಾವಿರಾರು ಕೋಟಿ ರೂಪಾಯಿ ಆಸ್ತಿ

ರಿತೇಶ್ ಸಿದ್ವಾನಿ ಹಾಗೂ ಫರ್ಹಾನ್ ಅಖ್ತರ್ ‘ಎಕ್ಸೆಲ್ ಎಂಟರ್​ಟೇನ್​ಮೆಂಟ್’ ನಿರ್ಮಾಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಈ ನಿರ್ಮಾಣ ಸಂಸ್ಥೆ ಅಡಿಯಲ್ಲಿ ‘ಡಾನ್ 3’ ಸಿದ್ಧವಾಗುತ್ತಿದೆ. ಶಾರುಖ್ ಖಾನ್ ಅವರು ಸಿನಿಮಾದಿಂದ ಹೊರ ನಡೆಯಲು ಸಂಭಾವನೆ ವಿಚಾರವೂ ಕಾರಣ ಎನ್ನಲಾಗುತ್ತಿದೆ. ಶಾರುಖ್ ಖಾನ್ ಬೇಡಿಕೆ ಹೆಚ್ಚಿದೆ. ‘ಪಠಾಣ್’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಬಾಚಿಕೊಂಡಿದೆ. ಹೀಗಾಗಿ ಅವರು ಹೆಚ್ಚಿನ ಸಂಭಾವನೆ ಕೇಳಿದ್ದಾರೆ. ಆದರೆ, ಅದನ್ನು ನೀಡಲು ಫರ್ಹಾನ್ ಬಳಿ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅವರು ಚಿತ್ರದಿಂದ ಹೊರ ನಡೆದಿದ್ದಾರೆ ಎಂದು ತಿಳಿದು ಬಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್