Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್​ಗೆ ವಯಸ್ಸಾಗುವುದಿಲ್ಲ ಏಕೆ? ಆನಂದ್ ಮಹೀಂದ್ರಾ ಬಳಿ ಇದೆ ಉತ್ತರ

‘ಜಿಂದಾ ಬಂದಾ..’ ಹಾಡಿನ ವಿಡಿಯೋನ ಆನಂದ್ ಮಹೀಂದ್ರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಶಾರುಖ್ ಖಾನ್ ಅವರನ್ನು ಬಾಯ್ತುಂಬ ಹೊಗಳಿದ್ದಾರೆ.

ಶಾರುಖ್ ಖಾನ್​ಗೆ ವಯಸ್ಸಾಗುವುದಿಲ್ಲ ಏಕೆ? ಆನಂದ್ ಮಹೀಂದ್ರಾ ಬಳಿ ಇದೆ ಉತ್ತರ
ಆನಂದ್ ಮಹಿಂದ್ರಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Aug 02, 2023 | 12:23 PM

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ (Jawan Movie) ಸಾಕಷ್ಟು ಅದ್ದೂರಿಯಾಗಿ ಸಿದ್ಧವಾಗುತ್ತಿದೆ. ‘ಪಠಾಣ್’ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಅವರು ‘ಜವಾನ್’ ಚಿತ್ರಕ್ಕಾಗಿ ನೀರಿನಂತೆ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಜಿಂದಾ ಬಂದಾ..’ ಹಾಡು ಅದ್ದೂರಿಯಾಗಿ ಮೂಡಿ ಬಂದಿದೆ. ಸಿನಿಮಾ ಎಷ್ಟು ಗ್ರ್ಯಾಂಡ್ ಆಗಿ ಇರಬಹುದು ಎಂಬುದನ್ನು ಈ ಹಾಡು ತೋರಿಸಿದೆ. ಶಾರುಖ್ ಖಾನ್ ಅವರು ಈ ಹಾಡಿನಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. 57ನೇ ವಯಸ್ಸಿನಲ್ಲೂ ಅವರು ಅನೇಕರನ್ನು ನಾಚಿಸುವಂತೆ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಈ ಬಗ್ಗೆ ಮಹೀಂದ್ರಾ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ. ಈ ವೇಳೆ ಅವರು ಶಾರುಖ್ ಖಾನ್ (Shah Rukh Khan) ಅವರ ಫಿಟ್ನೆಸ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಶಾರುಖ್ ಖಾನ್ ಅವರು ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುತ್ತಾರೆ. ಅವರು ಜಿಮ್​ನಲ್ಲಿ ನಿತ್ಯ ವರ್ಕೌಟ್ ಮಾಡುತ್ತಾರೆ. ತಿನ್ನುವ ಆಹಾರದ ಬಗ್ಗೆ ಕಾಳಜಿ ವಹಿಸುತ್ತಾರೆ. ಹೀಗಾಗಿ 57ನೇ ವಯಸ್ಸಿನಲ್ಲೂ ಅವರು ಯಂಗ್ ಆಗಿ ಕಾಣಿಸುತ್ತಾರೆ. ಇದನ್ನು ಅನೇಕರು ಒಪ್ಪಿಕೊಂಡಿದ್ದಾರೆ. ಆ್ಯಕ್ಷನ್ ದೃಶ್ಯಗಳನ್ನು ಮಾಡಲು ಅವರು ಎಂದಿಗೂ ಹಿಂದೇಟು ಹಾಕುವುದಿಲ್ಲ. ಡ್ಯಾನ್ಸ್ ವಿಚಾರದಲ್ಲೂ ಅಷ್ಟೇ. ಅವರು ಹಾಕುವ ಸ್ಟೆಪ್ಸ್ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ‘ಜಿಂದಾ ಬಂದಾ..’ ಹಾಡಿನಲ್ಲೂ ಅವರು ಮೈಚಳಿ ಬಿಟ್ಟು ಕುಣಿದಿದ್ದಾರೆ.

‘ಜಿಂದಾ ಬಂದಾ..’ ಹಾಡಿನ ವಿಡಿಯೋನ ಆನಂದ್ ಮಹೀಂದ್ರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಶಾರುಖ್ ಖಾನ್ ಅವರನ್ನು ಬಾಯ್ತುಂಬ ಹೊಗಳಿದ್ದಾರೆ. ‘ಈ ಹೀರೋಗೆ 57 ವರ್ಷ ವಯಸ್ಸಾಗಿದೆಯೇ? ಅವರ ದೇಹದಲ್ಲಿ ವಯಸ್ಸಾಗುವ ಪ್ರಕ್ರಿಯೆಯು ಗುರುತ್ವಾಕರ್ಷಣೆಯ ಬಲಗಳನ್ನು ವಿರೋಧಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಶಾರುಖ್ ಅವರು ಫಿಟ್ನೆಸ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ‘ನಿಮ್ಮ ಚಿತ್ರದ ಟಿಕೆಟ್​ ನೀವೇ ಖರೀದಿ ಮಾಡ್ತೀರಾ?’: ಟ್ರೋಲ್​ ಮಾಡಲು ಬಂದವರಿಗೆ ಶಾರುಖ್​ ನೀಡಿದ ಉತ್ತರ ಏನು?

ಸತತ ಸೋಲಿನಿಂದ ಶಾರುಖ್ ಖಾನ್ ಅವರ ಮಾರುಕಟ್ಟೆ ಕುಸಿದಿತ್ತು. ಆದರೆ, ಯಾವಾಗ ‘ಪಠಾಣ್’ ಸಿನಿಮಾ ಯಶಸ್ಸು ಕಂಡಿತೋ ಅಲ್ಲಿಂದ ಶಾರುಖ್ ಬೇಡಿಕೆ ಮತ್ತೆ ಹೆಚ್ಚಿದೆ. ಹೋಂ ಬ್ಯಾನರ್​ ‘ರೆಡ್ ಚಿಲ್ಲೀಸ್’ ಅಡಿಯಲ್ಲಿ ಗೌರಿ ಖಾನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಯನತಾರಾ ಈ ಚಿತ್ರದ ನಾಯಕಿ. ವಿಜಯ್ ಸೇತುಪತಿ ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ.

ಶಾರುಖ್ ಖಾನ್ ಅವರ ‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂದು ರಿಲೀಸ್ ಆಗುತ್ತಿದೆ. ಇದಲ್ಲದೆ, ‘ಡಂಕಿ’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ರಾಜ್​ಕುಮಾರ್ ಹಿರಾನಿ ಅವರ ನಿರ್ದೇಶನ ಇದೆ. ಈ ಚಿತ್ರ ಕ್ರಿಸ್​ಮಸ್ ಪ್ರಯುಕ್ತ ಡಿಸೆಂಬರ್ 25ರಂದು ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ