ಹಿಂದಿಯಲ್ಲಿ ‘ಕೆಜಿಎಫ್ 2’ ವಿತರಣೆ ಮಾಡಿದ್ದ ಫರ್ಹಾನ್​ ಅಖ್ತರ್​ ಹೊಸ ಸಾಧನೆ; ಮುಂದಿನ ಗುರಿ ಹಾಲಿವುಡ್

ಹಿಂದಿಯಲ್ಲಿ ‘ಕೆಜಿಎಫ್ 2’ ವಿತರಣೆ ಮಾಡಿದ್ದ ಫರ್ಹಾನ್​ ಅಖ್ತರ್​ ಹೊಸ ಸಾಧನೆ; ಮುಂದಿನ ಗುರಿ ಹಾಲಿವುಡ್
ಫರ್ಹಾನ್

ಮಾರ್ವೆಲ್​ ಸ್ಟುಡಿಯೋ ನಿರ್ಮಾಣದ ‘ಮಿಸ್​ ಮಾರ್ವೆಲ್​’ ಸೀರಿಸ್ ಸಿದ್ಧಗೊಳ್ಳುತ್ತಿದೆ. ಇದರಲ್ಲಿ ಫರ್ಹಾನ್ ಅಖ್ತರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

TV9kannada Web Team

| Edited By: Rajesh Duggumane

May 09, 2022 | 7:00 AM

‘ಕೆಜಿಎಫ್ 2’ ಚಿತ್ರ (KGF Chapter 2) ಬಾಲಿವುಡ್​ನಲ್ಲಿ 400+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾವನ್ನು ಹಿಂದಿಯಲ್ಲಿ ಫರ್ಹಾನ್ ಅಖ್ತರ್ ಒಡೆತನದ ಎಕ್ಸೆಲ್​ ಎಂಟರ್​ಟೇನ್​ಮೆಂಟ್ (Excel Entertainment)​ ಮೂಲಕ ಬಿಡುಗಡೆ ಮಾಡಲಾಗಿತ್ತು. ಈಗ ಫರ್ಹಾನ್​ ಅಖ್ತರ್ (Farhan Akhtar)​ ಅವರ ಮುಂದಿನ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​ ಸಿಕ್ಕಿದೆ. ಭಾರತದ ಯಾವ ಕಲಾವಿದರು ಮಾಡದ ಸಾಧನೆಯನ್ನು ಅವರು ಮಾಡಿ ತೋರಿಸಿದ್ದಾರೆ. ಹಾಲಿವುಡ್​ನ ಮಾರ್ವೆಲ್​ ಸ್ಟುಡಿಯೋದಲ್ಲಿ ಕೆಲಸ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ.

ಮಾರ್ವೆಲ್​ ಸ್ಟುಡಿಯೋ ನಿರ್ಮಾಣದ ‘ಮಿಸ್​ ಮಾರ್ವೆಲ್​’ ಸೀರಿಸ್ ಸಿದ್ಧಗೊಳ್ಳುತ್ತಿದೆ. ಇದರಲ್ಲಿ ಫರ್ಹಾನ್ ಅಖ್ತರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತದ ಹೀರೋ ಒಬ್ಬರು ಮಾರ್ವೆಲ್ ಸ್ಟುಡಿಯೋ ನಿರ್ಮಾಣದ ಪ್ರಾಜೆಕ್ಟ್​ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಫರ್ಹಾನ್ ಅವರು ನಿರ್ವಹಿಸುತ್ತಿರುವ ಪಾತ್ರ ಹೇಗಿದೆ ಎಂಬ ವಿಚಾರ ಇನ್ನಷ್ಟೇ ತಿಳಿಯಬೇಕಿದೆ.

‘ಮಿಸ್ ಮಾರ್ವೆಲ್​’ ಇದು ಸೂಪರ್​ಹೀರೋ ಸೀರಿಸ್. ಕಮಲಾ ಖಾನ್/ಮಿಸ್​ ಮಾರ್ವೆಲ್​ ಪಾತ್ರದ ಸುತ್ತ ಈ ಕಥೆ ಸಾಗುತ್ತದೆ. ಕಮಲಾ ಸೂಪರ್​​ಹೀರೋ ಶಕ್ತಿಯನ್ನು ಹೊಂದಿರುತ್ತಾಳೆ. ಇಮಾನ್ ವೆಲ್ಲಾನಿ ಅವರು ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಪಾಕಿಸ್ತಾನದ ಫವಾದ್ ಖಾನ್ ಕೂಡ ಈ ಸೀರಿಸ್​ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಫರ್ಹಾನ್ ಅಖ್ತರ್ ಪತ್ನಿ ಶಿಬಾನಿ ದಂಡೇಕರ್​ ಅವರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ‘ಇದಕ್ಕಾಗಿ ಕಾಯಲು ಸಾಧ್ಯವಿಲ್ಲ. ಮಾರ್ವೆಲ್ ಯೂನಿವರ್ಸ್‌ನ ಭಾಗವಾಗಿರುವ ಮೊದಲ ಭಾರತೀಯ ನಟ’ ಎಂದು ಬರೆದುಕೊಂಡಿದ್ದಾರೆ ಅವರು. ‘ಮಿಸ್ ಮಾರ್ವೆಲ್​’ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿಲ್ಲ. ಇದು ಸೀರಿಸ್ ಆದ ಕಾರಣ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಜೂನ್ 8ರಿಂದ ಈ ಶೋ ಪ್ರಸಾರಗೊಳ್ಳಲಿದೆ.

ಇತ್ತೀಚೆಗೆ ವಿವಾಹವಾಗಿರುವ ಫರ್ಹಾನ್:

ಬಾಲಿವುಡ್​ ಪ್ರಯಣ ಪಕ್ಷಿಗಳಾದ ಫರ್ಹಾನ್​ ಅಖ್ತರ್​ ಹಾಗೂ ಶಿಬಾನಿ ದಂಡೇಕರ್​ ಅವರು ಫೆ.19ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಹಾರಾಷ್ಟ್ರದ ಖಂಡಾಲದಲ್ಲಿ ಈ ಮದುವೆ ನಡೆಯಿತು. ಫರ್ಹಾನ್​ ಅಖ್ತರ್​ ಅವರಿಗೆ 48 ವರ್ಷ ವಯಸ್ಸು. 41ರ ಪ್ರಾಯದ ಶಿಬಾನಿ ದಂಡೇಕರ್​ ಜೊತೆ ಅವರು ವೈವಾಹಿಕ ಜೀವನ ಆರಂಭಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮೊದಲೇ ಫರ್ಹಾನ್​ ಅಖ್ತರ್​ ಮತ್ತು ಶಿಬಾನಿ ದಂಡೇಕರ್ ಮದುವೆ ನೆರವೇರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಅದಕ್ಕೆ ಕಾಲ ಕೂಡಿಬಂದಿರಲಿಲ್ಲ. ಇತ್ತೀಚೆಗೆ ಈ ಜೋಡಿಯ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada