ಭಾರತದಲ್ಲಿ ಭರ್ಜರಿ ಓಪನಿಂಗ್ ಪಡೆದ ಹಾಲಿವುಡ್ ಸಿನಿಮಾ ‘ಡಾಕ್ಟರ್ ಸ್ಟ್ರೇಂಜ್’ ಸೀಕ್ವೆಲ್; ಮೊದಲ ದಿನ ಗಳಿಸಿದ್ದೆಷ್ಟು?
‘ಡಾಕ್ಟರ್ ಸ್ಟ್ರೇಂಜ್’ ಸೀಕ್ವೆಲ್ನಿಂದ ಯಶ್ ನಟನೆಯ ‘ಕೆಜಿಎಫ್ 2’ ಕಲೆಕ್ಷನ್ಗೆ ಕೊಂಚ ಹೊಡೆತ ಬೀಳುವ ಸಾಧ್ಯತೆ ಇದೆ. ಈಗಾಗಲೇ ‘ಕೆಜಿಎಫ್ 2’ ಹಿಂದಿಯಲ್ಲಿ 400 ಕೋಟಿ ರೂಪಾಯಿ ಕ್ಲಬ್ ಸೇರಿದೆ.
ಹಾಲಿವುಡ್ (Hollywood) ಸಿನಿಮಾಗೆ ಭಾರತ ದೊಡ್ಡ ಮಾತುಕಟ್ಟೆ. ಅದರಲ್ಲೂ ಮಾರ್ವೆಲ್ ಸಿನಿಮಾಗಳನ್ನು ಭಾರತದ ಸಿನಿಪ್ರಿಯರು ಮೆಚ್ಚಿಕೊಳ್ಳುತ್ತಾರೆ. ಈ ಚಿತ್ರಗಳು ಭಾರತದಲ್ಲಿ ಒಳ್ಳೆಯ ಓಪನಿಂಗ್ ಪಡೆದುಕೊಳ್ಳುತ್ತವೆ. ಈಗ ‘ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್’ ಸಿನಿಮಾ (Doctor Strange in the Multiverse of Madness) ತೆರೆಗೆ ಬಂದಿದೆ. ಮೊದಲ ದಿನ (ಮೇ 6) ಈ ಚಿತ್ರ 27.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ‘ಡಾಕ್ಟರ್ ಸ್ಟ್ರೇಂಜ್’ ಸಿನಿಮಾದ ಸೀಕ್ವೆಲ್ ಇದಾಗಿದೆ.
ಈ ಮೊದಲು ತೆರೆಗೆ ಬಂದಿದ್ದ ಮಾರ್ವೆಲ್ ಸ್ಟುಡಿಯೋಸ್ನ ‘ಸ್ಪೈಡರ್ ಮ್ಯಾನ್: ನೋ ವೇ ಹೋಂ’ ಸಿನಿಮಾ ಮೊದಲ ದಿನ 33 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ಸಿನಿಮಾಗಿಂತ ಸುಮಾರು ಆರು ಕೋಟಿ ರೂಪಾಯಿ ಕಡಿಮೆ ಗಳಿಕೆ ಮಾಡಿದೆ. ‘ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್’ ಭಾರತದ ಕಲೆಕ್ಷನ್ ಬಗ್ಗೆ ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಬೆನೆಡಿಕ್ಟ್ ಕಂಬರ್ಬ್ಯಾಚ್ ‘ಡಾಕ್ಟರ್ ಸ್ಟ್ರೇಂಜ್’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದಲ್ಲಿ ಅತಿ ಉತ್ತಮ ಓಪನಿಂಗ್ ಪಡೆದ ನಾಲ್ಕನೇ ಹಾಲಿವುಡ್ ಸಿನಿಮಾ ಇದಾಗಿದೆ. ‘ಅವೆಂಜರ್ಸ್: ಎಂಡ್ಗೇಮ್’ (53.10 ಕೋಟಿ ರೂಪಾಯಿ), ‘ಸ್ಪೈಡರ್ ಮ್ಯಾನ್: ನೋ ವೇ ಹೋಂ’ (32.67 ಕೋಟಿ ರೂಪಾಯಿ) ಮತ್ತು ‘ಅವೆಂಜರ್ಸ್: ಇನ್ಫಿನಿಟಿ ವಾರ್’ (31.30 ಕೋಟಿ ರೂಪಾಯಿ) ಈ ಮೊದಲು ಒಳ್ಳೆಯ ಓಪನಿಂಗ್ ಪಡೆದ ಹಾಲಿವುಡ್ ಚಿತ್ರಗಳಾಗಿವೆ.
#DoctorStrange is MARVEL-ous on Day 1… 4TH BIGGEST HOLLYWOOD OPENER in #India… *Day 1* biz… ⭐ [2019] #AvengersEndgame: ₹ 53.10 cr ⭐ [2021] #SpiderMan: ₹ 32.67 cr ⭐ [2018] #AvengersInfinityWar: ₹ 31.30 cr ⭐ [2022] #DoctorStrange: ₹ 27.50 cr#India biz. All versions. pic.twitter.com/1VWKthczJw
— taran adarsh (@taran_adarsh) May 7, 2022
ಅಮೆರಿಕದಲ್ಲಿಯೂ ಸಿನಿಮಾ ಭರ್ಜರಿ ಓಪನಿಂಗ್ ಪಡೆದಿದೆ. ಮೊದಲ ದಿನ ಈ ಸಿನಿಮಾ 277 ಕೋಟಿ ರೂಪಾಯಿ ಬಾಚಿಕೊಂಡಿದೆ. ವಾರಾಂತ್ಯಕ್ಕೆ ಈ ಸಿನಿಮಾ ಅಮೆರಿಕದಲ್ಲಿ 1,346 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ ಎಂದು ಟ್ರೇಡ್ ಅನಲಿಸ್ಟ್ಗಳು ಊಹಿಸಿದ್ದಾರೆ. ಸ್ಯಾಮ್ ರೈಮಿ ಅವರು ‘ಡಾಕ್ಟರ್ ಸ್ಟ್ರೇಂಜ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ಸ್ಪೈಡರ್ ಮ್ಯಾನ್’ ಟ್ರಿಲಜಿಯನ್ನು ನಿರ್ದೇಶನ ಮಾಡಿದ ಖ್ಯಾತಿ ಇವರಿಗೆ ಇದೆ.
‘ಡಾಕ್ಟರ್ ಸ್ಟ್ರೇಂಜ್’ ಸೀಕ್ವೆಲ್ನಿಂದ ಯಶ್ ನಟನೆಯ ‘ಕೆಜಿಎಫ್ 2’ ಕಲೆಕ್ಷನ್ಗೆ ಕೊಂಚ ಹೊಡೆತ ಬೀಳುವ ಸಾಧ್ಯತೆ ಇದೆ. ಈಗಾಗಲೇ ‘ಕೆಜಿಎಫ್ 2’ ಹಿಂದಿಯಲ್ಲಿ 400 ಕೋಟಿ ರೂಪಾಯಿ ಕ್ಲಬ್ ಸೇರಿದೆ.
Published On - 1:30 pm, Sat, 7 May 22