ಸಲಿಂಗಕಾಮ ಪಾತ್ರದಿಂದ ಈ ದೇಶಗಳಲ್ಲಿ ಬ್ಯಾನ್ ಆದ ‘ಡಾಕ್ಟರ್​ ಸ್ಟ್ರೇಂಜ್​’ ಸಿನಿಮಾ

‘ಸ್ಪೈಡರ್​ ಮ್ಯಾನ್​: ನೋ ವೇ ಹೋಂ’ ಸಿನಿಮಾ ಭಾರತದ ಮಾರುಕಟ್ಟೆಯಲ್ಲಿ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಈಗ ತೆರೆಗೆ ಬರುತ್ತಿರುವ ‘ಡಾಕ್ಟರ್​ ಸ್ಟ್ರೇಂಜ್ ಇನ್​ ​ ದಿ ಮಲ್ಟಿವರ್ಸ್​ ಆಫ್ ಮ್ಯಾಡ್​ನೆಸ್​’ ಸಿನಿಮಾ ಕೂಡ ಒಳ್ಳೆಯ ಗಳಿಕೆ ಮಾಡುವ ಸೂಚನೆ ಸಿಕ್ಕಿದೆ.

ಸಲಿಂಗಕಾಮ ಪಾತ್ರದಿಂದ ಈ ದೇಶಗಳಲ್ಲಿ ಬ್ಯಾನ್ ಆದ ‘ಡಾಕ್ಟರ್​ ಸ್ಟ್ರೇಂಜ್​’ ಸಿನಿಮಾ
ಡಾಕ್ಟರ್ ಸ್ಟ್ರೇಂಜ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Apr 23, 2022 | 1:01 PM

ಮಾರ್ವೆಲ್ (Marvel) ಸರಣಿಯ ಬಹುನಿರೀಕ್ಷಿತ ಸಿನಿಮಾ ‘ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್​ ಮ್ಯಾಡ್​ನೆಸ್’ ಸಿನಿಮಾ (Doctor Strange in the Multiverse of Madness ) ಮೇ 6ರಂದು ತೆರೆಗೆ ಬರುತ್ತಿದೆ. ಟ್ರೇಲರ್ ಮೂಲಕ ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಆದರೆ, ಈ ಸಿನಿಮಾ ರಿಲೀಸ್​ಗೂ ಮೊದಲೇ ಸಂಕಷ್ಟಕ್ಕೆ ತುತ್ತಾಗಿದೆ. ಸಿನಿಮಾದಲ್ಲಿ ಸಲಿಂಗಕಾಮದ ವಿಚಾರ ಹೇಳಲಾಗುತ್ತಿದೆ ಎನ್ನಲಾಗಿದೆ. ಸೌದಿ ಅರೇಬಿಯಾದಲ್ಲಿ (Saudi Arabia) ಸಲಿಂಗಕಾಮ ಬ್ಯಾನ್. ಹೀಗಾಗಿ, ‘ಡಾಕ್ಟರ್ ಸ್ಟ್ರೇಂಜ್’ ಸಿನಿಮಾಗೆ ನಿಷೇಧ ಹೇರಲಾಗಿದೆ ಎಂದು ವರದಿ ಆಗಿದೆ.

ಬೆನೆಡಿಕ್ಟ್​ ಕಂಬರ್​​ಬ್ಯಾಚ್ ‘ಡಾಕ್ಟರ್ ಸ್ಟ್ರೇಂಜ್’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಬರುವ ಪಾತ್ರವೊಂದು ಗೇ. ಈ ಕಾರಣಕ್ಕೆ ಸಿನಿಮಾವನ್ನು ನೋಡಿದ ಸೆನ್ಸಾರ್ ಮಂಡಳಿಯವರು ಚಿತ್ರವನ್ನು ಸೌದಿ ಅರೇಬಿಯಾದಲ್ಲಿ ಪ್ರದರ್​ಶನ ಮಾಡದಂತೆ ಸೂಚನೆ ನೀಡಿದೆ.

‘ಸ್ಪೈಡರ್ ಮ್ಯಾನ್​: ನೋ ವೇ ಹೋಮ್​’ ಸಿನಿಮಾ ತೆರೆಗೆ ಬಂದ ನಂತರದಲ್ಲಿ ಮಾರ್ವೆಲ್​ ಸರಣಿಯ ‘ಡಾಕ್ಟರ್​ ಸ್ಟ್ರೇಂಜ್ ಇನ್​ ​ ದಿ ಮಲ್ಟಿವರ್ಸ್​ ಆಫ್ ಮ್ಯಾಡ್​ನೆಸ್​’ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾ ಮೂಲಕ ಹೊಸ ಮಾರ್ವೆಲ್ ಪಾತ್ರಗಳನ್ನು ಪರಿಚಯಿಸುವ ಆಲೋಚನೆ ಚಿತ್ರತಂಡಕ್ಕೆ ಇದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಕೆಲ ಹಳೆಯ ಪಾತ್ರಗಳನ್ನು ಕೂಡ ಪರಿಚಯಿಸಲಾಗುತ್ತಿದೆ.

ಸ್ಯಾಮ್ ರೈಮಿ ಅವರು ‘ಡಾಕ್ಟರ್​ ಸ್ಟ್ರೇಂಜ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ಸ್ಪೈಡರ್ ಮ್ಯಾನ್’ ಟ್ರಿಲಜಿಯನ್ನು ನಿರ್ದೇಶನ ಮಾಡಿದ ಖ್ಯಾತಿ ಇವರಿಗೆ ಇದೆ. ಸೌದಿ ಅರೇಬಿಯಾದಲ್ಲಿ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್ ರದ್ದು ಮಾಡಲಾಗಿದೆ. ಹೀಗಾಗಿ, ಸೌದಿ, ಖತಾರ್ ಹಾಗೂ ಕುವಯತ್​ನಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿಲ್ಲ.

‘ಸ್ಪೈಡರ್​ ಮ್ಯಾನ್​: ನೋ ವೇ ಹೋಂ’ ಸಿನಿಮಾ ಭಾರತದ ಮಾರುಕಟ್ಟೆಯಲ್ಲಿ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಈ ಕಾರಣಕ್ಕೆ ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ 260 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈಗ ತೆರೆಗೆ ಬರುತ್ತಿರುವ ‘ಡಾಕ್ಟರ್​ ಸ್ಟ್ರೇಂಜ್  ಇನ್​ ​ ದಿ ಮಲ್ಟಿವರ್ಸ್​ ಆಫ್ ಮ್ಯಾಡ್​ನೆಸ್​’ ಸಿನಿಮಾ ಕೂಡ ಒಳ್ಳೆಯ ಗಳಿಕೆ ಮಾಡುವ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ಗಳಿಕೆಯಲ್ಲಿ ‘ಸ್ಪೈಡರ್​ ಮ್ಯಾನ್​’ ಹೊಸ ದಾಖಲೆ; ಕೊರೊನಾ ಮಧ್ಯೆಯೂ ಬಂಗಾರದ ಬೆಳೆ ತೆಗೆದ ಹಾಲಿವುಡ್​​ ಸಿನಿಮಾ

30 ಕೋಟಿ ರೂಪಾಯಿ ಕೊಟ್ಟು ಮನೆ ಖರೀದಿಸಿದ ‘ಸ್ಪೈಡರ್​ ಮ್ಯಾನ್’​ ಲವ್​ಬರ್ಡ್ಸ್; ಇದರಲ್ಲಿದೆ ಹಲವು ಸೌಲಭ್ಯ​

Published On - 12:36 pm, Sat, 23 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ