AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

30 ಕೋಟಿ ರೂಪಾಯಿ ಕೊಟ್ಟು ಮನೆ ಖರೀದಿಸಿದ ‘ಸ್ಪೈಡರ್​ ಮ್ಯಾನ್’​ ಲವ್​ಬರ್ಡ್ಸ್; ಇದರಲ್ಲಿದೆ ಹಲವು ಸೌಲಭ್ಯ​

ಟಾಮ್​ ಹಾಲೆಂಡ್​ ಹಾಗೂ ಜೆಂಡೆಯಾ ‘ಸ್ಪೈಡರ್​ ಮ್ಯಾನ್​: ಹೋಮ್​ಕಮಿಂಗ್​’ ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಂಡರು. ಸೆಟ್​ನಲ್ಲಿ ಇವರು ಒಟ್ಟಾಗಿ ಸಾಕಷ್ಟು ಸಮಯ ಕಳೆದಿದ್ದಾರೆ. ಆರಂಭದಲ್ಲಿ ಗೆಳೆಯರಾಗಿದ್ದ ಇಬ್ಬರೂ, ನಂತರ ಪ್ರೇಮಿಗಳಾದರು.

30 ಕೋಟಿ ರೂಪಾಯಿ ಕೊಟ್ಟು ಮನೆ ಖರೀದಿಸಿದ ‘ಸ್ಪೈಡರ್​ ಮ್ಯಾನ್’​ ಲವ್​ಬರ್ಡ್ಸ್; ಇದರಲ್ಲಿದೆ ಹಲವು ಸೌಲಭ್ಯ​
ಟಾಮ್​ ಹಾಲೆಂಡ್​-ಜೆಂಡೆಯಾ
TV9 Web
| Edited By: |

Updated on:Feb 01, 2022 | 4:42 PM

Share

ಟಾಮ್ ಹಾಲೆಂಡ್ (Tom Holland) ಹಾಗೂ ಜೆಂಡೆಯಾ (Zendaya ) ನಟನೆಯ ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’  (Spider-Man: No Way Home) ಕಳೆದ ವರ್ಷ ಡಿಸೆಂಬರ್​ 16ರಂದು ಬಿಡುಗಡೆಯಾಗಿ ಬಾಕ್ಸ್​ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡಿದೆ. ಕೊವಿಡ್​ ಮಧ್ಯೆಯೂ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ವಿಶ್ವಮಟ್ಟದಲ್ಲಿ ಬಾಕ್ಸ್​ ಆಫೀಸ್​ ಉಡೀಸ್​ ಮಾಡಿದೆ. ಈ ಮೂಲಕ ಸಿನಿಮಾ ಹೊಸ ದಾಖಲೆ ಬರೆದಿದೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಟಾಮ್​ ಹಾಲೆಂಡ್​ ಹಾಗೂ ಜೆಂಡೆಯಾ ನಿಜ ಜೀವನದಲ್ಲಿ ಲವ್​ ಬರ್ಡ್ಸ್​. ಇಬ್ಬರೂ ಈಗ ಇಂಗ್ಲೆಂಡ್​ನಲ್ಲಿ 30 ಕೋಟಿ ರೂಪಾಯಿ ಬೆಲೆ ಬಾಳುವ ಮನೆ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಟಾಮ್​ ಹಾಲೆಂಡ್​ ಹಾಗೂ ಜೆಂಡೆಯಾ ‘ಸ್ಪೈಡರ್​ ಮ್ಯಾನ್​: ಹೋಮ್​ಕಮಿಂಗ್​’ ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಂಡರು. ಸೆಟ್​ನಲ್ಲಿ ಇವರು ಒಟ್ಟಾಗಿ ಸಾಕಷ್ಟು ಸಮಯ ಕಳೆದಿದ್ದಾರೆ. ಆರಂಭದಲ್ಲಿ ಗೆಳೆಯರಾಗಿದ್ದ ಇಬ್ಬರೂ, ನಂತರ ಪ್ರೇಮಿಗಳಾದರು. ಇಬ್ಬರೂ ಸಾಕಷ್ಟು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಅನೇಕ ಪಾರ್ಟಿಗಳಲ್ಲಿ ಕೈ ಕೈ ಹಿಡಿದುಕೊಂಡು ಓಡಾಡಿದ್ದಾರೆ. ಈಗ ಇವರು ಒಟ್ಟಾಗಿ ಲಂಡನ್​ನಲ್ಲಿ 30 ಕೋಟಿ ಮೌಲ್ಯದ ಮನೆ ಖರೀದಿಸಿದ್ದಾರೆ ಈ ಬಗ್ಗೆ ಮಿರರ್​ ಪತ್ರಿಕೆ ವರದಿ ಮಾಡಿದೆ.

ಈ ಮನೆ ತುಂಬಾನೇ ಐಷಾರಾಮಿ ಆಗಿದೆ ಎಂದು ವರದಿ ಆಗಿದೆ. ಈ ನಿವಾಸದಲ್ಲಿ ಜಿಮ್​, ಸಿನಿಮಾ ಹಾಲ್​ ಸೇರಿ ಸಾಕಷ್ಟು ಸೌಲಭ್ಯಗಳು ಈ ಮನೆಯಲ್ಲಿವೆ. ಇನ್ನೂ ಕೆಲ ಸೌಲಭ್ಯಗಳು ಈ ಮನೆಯಲ್ಲಿ ಲಭ್ಯವಿದೆ ಎನ್ನಲಾಗಿದೆ. ಇಬ್ಬರಿಗೂ ಲಂಡನ್​ನಲ್ಲಿ ಮನೆ ಖರೀದಿ ಮಾಡಬೇಕು ಎಂದು ಆಸೆಪಟ್ಟಿದ್ದರು. ಅವರ ಆಸೆ ಈಗ ಈಡೇರಿದೆ.

ಕೊವಿಡ್​ ಹೆಚ್ಚುತ್ತಿರುವ ಕಾರಣ ಯಾರೂ ಅಷ್ಟಾಗಿ ಚಿತ್ರಮಂದಿರದತ್ತ ಮುಖ ಮಾಡುತ್ತಿಲ್ಲ. ದೇಶದ ಬಹುತೇಕ ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆ ನಿಯಮ ಜಾರಿಗೆ ಬಂದಿದೆ. ಈ ಕಾರಣಕ್ಕೆ ಈ ಸಿನಿಮಾ ಶೀಘ್ರವೇ ಒಟಿಟಿಯಲ್ಲಿ ಬರಬಹುದು ಎಂದು ಭಾವಿಸಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಇನ್ನೂ ಒಂದು ತಿಂಗಳಕಾಲ ಈ ಸಿನಿಮಾ ಪ್ರದರ್ಶನ ಕಾಣಲಿದೆ. ಚಿತ್ರ ನೋಡೋಕೆ ಈಗಲೂ ಜನರು ಬರುತ್ತಿದ್ದಾರೆ. ಹೀಗಾಗಿ, ಮಲ್ಟಿಪ್ಲೆಕ್ಸ್​ಗಳು ಈ ಸಿನಿಮಾವನ್ನು ಮುಂದಿನ ಒಂದು ತಿಂಗಳು ಪ್ರದರ್ಶನ ಮಾಡಲು ನಿರ್ಧರಿಸಿವೆ. ಆ ಬಳಿಕವೇ ಚಿತ್ರ ಒಟಿಟಿಗೆ ಕಾಲಿಡಲಿದೆ. ಹೀಗಾಗಿ, ಈ ಸಿನಿಮಾ ಕಲೆಕ್ಷನ್​ ಮತ್ತಷ್ಟು ಹೆಚ್ಚಲಿದೆ.

ಗಳಿಕೆ ವಿಚಾರದಲ್ಲಿ ‘ಅವತಾರ್​’ ಸಿನಿಮಾ ಮೊದಲ ಸ್ಥಾನದಲ್ಲಿದೆ. ಈ ಸಿನಿಮಾ 21,240 ಕೋಟಿ ರೂಪಾಯಿ ಗಳಿಸಿತ್ತು. ‘ಅವೇಂಜರ್ಸ್​: ಎಂಡ್​ಗೇಮ್​’ 20,870 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಎರಡನೇ ಸ್ಥಾನದಲ್ಲಿದೆ. 1997ರಲ್ಲಿ ತೆರೆಗೆ ಬಂದ ‘ಟೈಟಾನಿಕ್​’ ಚಿತ್ರದ ದಾಖಲೆಯನ್ನು ಮುರಿಯೋಕೆ ಅನೇಕ ಚಿತ್ರಗಳ ಬಳಿ ಈಗಲೂ ಸಾಧ್ಯವಾಗಿಲ್ಲ. ಈ ಚಿತ್ರ ಮೂರನೇ ಸ್ಥಾನದಲ್ಲಿದೆ. ಈ ಸಿನಿಮಾ 16,315 ಕೋಟಿ ರೂಪಾಯಿ ಗಳಿಕೆ ಮಾಡಿದೆ. ನಾಲ್ಕನೇ ಸ್ಥಾನದಲ್ಲಿರುವ ‘ಸ್ಟಾರ್​ ವಾರ್ಸ್​: ದಿ ಫೋರ್ಸ್​ ಅವೇಕನ್ಸ್’ 15,427 ಕೋಟಿ ರೂಪಾಯಿ ಗಳಿಸಿದೆ. ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ 12,999 ಕೋಟಿ ರೂಪಾಯಿ ಬಾಚಿಕೊಂಡಿದೆ.

ಇದನ್ನೂ ಓದಿ: ಭಾರತದಲ್ಲಿ 263 ಕೋಟಿ ಕಲೆಕ್ಷನ್ ಮಾಡಿದ ‘ಸ್ಪೈಡರ್​ ಮ್ಯಾನ್​’ ಒಟಿಟಿಗೆ ಬರೋದು ಯಾವಾಗ? ಇಲ್ಲಿದೆ ಉತ್ತರ 

ಗಳಿಕೆಯಲ್ಲಿ ‘ಸ್ಪೈಡರ್​ ಮ್ಯಾನ್​’ ಹೊಸ ದಾಖಲೆ; ಕೊರೊನಾ ಮಧ್ಯೆಯೂ ಬಂಗಾರದ ಬೆಳೆ ತೆಗೆದ ಹಾಲಿವುಡ್​​ ಸಿನಿಮಾ

Published On - 3:10 pm, Tue, 1 February 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್