ವೈರಲ್ ಆಯ್ತು ‘ಡಾಕ್ಟರ್ ಸ್ಟ್ರೇಂಜ್’ ಚಿತ್ರದ ಕ್ಲಿಪ್; ಸಿನಿಮಾ ಬಗ್ಗೆ ಫ್ಯಾನ್ಸ್ ಕಡೆಯಿಂದ ಬಂತು ಗಂಭೀರ ದೂರ
ಹೊಸ ವಿಡಿಯೋದಲ್ಲಿ ಸಖತ್ ಆ್ಯಕ್ಷನ್ ಇದೆ. ಹೀರೋ ಹಾಗೂ ವಿಲನ್ ನಡುವಿನ ಫೈಟ್ ದೃಶ್ಯ ಇದರಲ್ಲಿದೆ. ಕೆಲವರು ಈ ವಿಡಿಯೋ ನೋಡಿ ಖುಷಿ ಪಟ್ಟಿದ್ದಾರೆ. ಆದರೆ, ಕೆಲವರು ಸಿಜಿಐ ಬಗ್ಗೆ ದೂರು ನೀಡಿದ್ದಾರೆ.
ಮಾರ್ವೆಲ್ ಸಿನಿಮಾಗಳಿಗೆ (Marvel Movies) ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ‘ಸ್ಪೈಡರ್ ಮ್ಯಾನ್: ನೋ ವೇ ಹೋಂ’ ಚಿತ್ರ ಭಾರತದಲ್ಲಿ 250 ಕೋಟಿ ರೂಪಾಯಿ ಗಳಿಸಿದ್ದು ಇದಕ್ಕೆ ತಾಜಾ ಉದಾಹರಣೆ. ಈಗ ‘ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್’ ಸಿನಿಮಾ (Doctor Strange in the Multiverse of Madness) ತೆರೆಗೆ ಬರುತ್ತಿದೆ. ‘ಡಾಕ್ಟರ್ ಸ್ಟ್ರೇಂಜ್’ ಚಿತ್ರದ ಸೀಕ್ವೆಲ್ ಇದಾಗಿದ್ದು, ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದೆ. ಮೇ 6ರಂದು ಸಿನಿಮಾ ತೆರೆಗೆ ಬರುತ್ತಿದ್ದು, ಅದಕ್ಕೂ ಮೊದಲು ಸಿನಿಮಾದ ಕ್ಲಿಪ್ ಒಂದು ವೈರಲ್ ಆಗಿದೆ. ಇದಕ್ಕೆ ಅಭಿಮಾನಿಗಳಿಂದ ದೂರುಗಳ ಸುರಿಮಳೆ ಬಂದಿದೆ.
ಬೆನೆಡಿಕ್ಟ್ ಕಂಬರ್ಬ್ಯಾಚ್ ‘ಡಾಕ್ಟರ್ ಸ್ಟ್ರೇಂಜ್’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಸಿನಿಮಾ ತೆರೆಗೆ ಬಂದ ನಂತರದಲ್ಲಿ ಮಾರ್ವೆಲ್ ಸರಣಿಯ ‘ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್’ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾ ಮೂಲಕ ಹೊಸ ಮಾರ್ವೆಲ್ ಪಾತ್ರಗಳನ್ನು ಪರಿಚಯಿಸುವ ಆಲೋಚನೆ ನಿರ್ಮಾಣ ಸಂಸ್ಥೆಗೆ ಇದೆ ಎನ್ನಲಾಗಿದೆ. ಟ್ರೇಲರ್ ಮೂಲಕ ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈಗ ವೈರಲ್ ಆಗುತ್ತಿರುವ ಕ್ಲಿಪ್ ನೋಡಿ ಫ್ಯಾನ್ಸ್ ಸಿಜಿಐ ಬಗ್ಗೆ ದೂರುತ್ತಿದ್ದಾರೆ.
.@IMDb has released a new exclusive #MultiverseOfMadness clip of the #DoctorStrange vs Gargantos fight! pic.twitter.com/uRsAICfQPt
— Doctor Strange Updates (@DrStrangeUpdate) April 28, 2022
ಹೊಸ ವಿಡಿಯೋದಲ್ಲಿ ಸಖತ್ ಆ್ಯಕ್ಷನ್ ಇದೆ. ಹೀರೋ ಹಾಗೂ ವಿಲನ್ ನಡುವಿನ ಫೈಟ್ ದೃಶ್ಯ ಇದರಲ್ಲಿದೆ. ಕೆಲವರು ಈ ವಿಡಿಯೋ ನೋಡಿ ಖುಷಿ ಪಟ್ಟಿದ್ದಾರೆ. ಆದರೆ, ಕೆಲವರು ಸಿಜಿಐ ಬಗ್ಗೆ ದೂರು ನೀಡಿದ್ದಾರೆ. ‘ದೃಶ್ಯಗಳು ಸರಿಯಾಗಿ ಮೂಡಿ ಬಂದಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ನನಗೆ ಸಿಜಿಐ ಇಷ್ಟವಾಗಿಲ್ಲ. ನಾನು ದೂರುತ್ತಿಲ್ಲ. ಆದರೆ ಇನ್ನೂ ಕೆಲವು ತಿಂಗಳು ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಡೆಸಬಹುದಿತ್ತು’ ಎನ್ನುವ ಮಾತುಗಳನ್ನು ಅಭಿಮಾನಿಗಳು ಹೇಳಿದ್ದಾರೆ.
‘ಸ್ಪೈಡರ್ ಮ್ಯಾನ್: ನೋ ವೇ ಹೋಂ’ ಚಿತ್ರದಲ್ಲಿ ಬರುವ ಪಾತ್ರವೊಂದು ಗೇ. ಈ ಕಾರಣಕ್ಕೆ ಸಿನಿಮಾವನ್ನು ನೋಡಿದ ಸೆನ್ಸಾರ್ ಮಂಡಳಿಯವರು ಚಿತ್ರವನ್ನು ಸೌದಿ ಅರೇಬಿಯಾದಲ್ಲಿ ಪ್ರದರ್ಶನ ಮಾಡದಂತೆ ಸೂಚನೆ ನೀಡಿದೆ ಎಂಬ ವಿಚಾರ ಇತ್ತೀಚೆಗೆ ಸುದ್ದಿ ಆಗಿತ್ತು. ಸ್ಯಾಮ್ ರೈಮಿ ಅವರು ‘ಡಾಕ್ಟರ್ ಸ್ಟ್ರೇಂಜ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ಸ್ಪೈಡರ್ ಮ್ಯಾನ್’ ಟ್ರಿಲಜಿಯನ್ನು ನಿರ್ದೇಶನ ಮಾಡಿದ ಖ್ಯಾತಿ ಇವರಿಗೆ ಇದೆ. ಸೌದಿ ಅರೇಬಿಯಾದಲ್ಲಿ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್ ರದ್ದು ಮಾಡಲಾಗಿದೆ ಎನ್ನಲಾಗಿತ್ತು. ಆದರೆ, ಚಿತ್ರತಂಡ ಇದನ್ನು ಅಲ್ಲಗಳೆದಿತ್ತು.
ಇದನ್ನೂ ಓದಿ: ಗಳಿಕೆಯಲ್ಲಿ ‘ಸ್ಪೈಡರ್ ಮ್ಯಾನ್’ ಹೊಸ ದಾಖಲೆ; ಕೊರೊನಾ ಮಧ್ಯೆಯೂ ಬಂಗಾರದ ಬೆಳೆ ತೆಗೆದ ಹಾಲಿವುಡ್ ಸಿನಿಮಾ
30 ಕೋಟಿ ರೂಪಾಯಿ ಕೊಟ್ಟು ಮನೆ ಖರೀದಿಸಿದ ‘ಸ್ಪೈಡರ್ ಮ್ಯಾನ್’ ಲವ್ಬರ್ಡ್ಸ್; ಇದರಲ್ಲಿದೆ ಹಲವು ಸೌಲಭ್ಯ