ಸ್ಪೈಡರ್ ಮ್ಯಾನ್ ಮತ್ತು ಥೋರ್ ಕ್ಯಾರೆಕ್ಟರ್​ಗಳಿಂದ ಪ್ರೇರಿತ ಎನ್​ಟಾರ್ಕ್​​ 125 ಸ್ಕೂಟರ್​ಗಳನ್ನು ಲಾಂಚ್ ಮಾಡಲಿದೆ ಟಿವಿಎಸ್ ಮೋಟಾರ್ಸ್​​ ಕಂಪನಿ

ಸೂಪರ್ ಸ್ಕ್ವ್ಯಾಡ್​​ ಎಡಿಶನಲ್ಲಿ ಎನ್ ಟಾರ್ಕ್ 125 ಸ್ಕೂಟರ್​ಗಳನ್ನು ಲಾಂಚ್ ಮಾಡಲು ಟಿವಿಎಸ್ ಕಂಪನಿಯು ಡಿಸ್ನಿ ಇಂಡಿಯಾದ ಗ್ರಾಹಕ ಉತ್ಪಾದನೆ ವ್ಯಾಪಾರ ವ್ಯವಸ್ಥೆಯೊಂದಿಗೆ ಸಹಭಾಗಿತ್ವ ಸಾಧಿಸಿದೆ.

TV9kannada Web Team

| Edited By: shivaprasad.hs

Dec 19, 2021 | 8:20 AM

ಟಿವಿಎಸ್ ಮೊಟಾರು ಕಂಪನಿಯು ಮಾರ್ವಲ್ ಸ್ಪೈಡರ್ ಮ್ಯಾನ್ ಮತ್ತು ಥೋರ್ ಕ್ಯಾರೆಕ್ಟರ್ಗಳಿಂದ ಪ್ರೇರಿತಗೊಂಡು ತಯಾರಿಸಿರುವ ಎನ್​ಟಾರ್ಕ್​​​ 125 ಸ್ಕೂಟರಗಳನ್ನು ಈಗಾಗಲೇ ಲಭ್ಯವಿರುವ ಸೂಪರ್​ಸ್ಕ್ವ್ಯಾಡ್​​ ಎಡಿಶನಲ್ಲಿ ಲಾಂಚ್ ಮಾಡುವ ಘೋಷಣೆಯನ್ನು ಗುರುವಾರ ಮಾಡಿದೆ. ಅಂದಹಾಗೆ, ದೆಹಲಿಯಲ್ಲಿ ಹೊಸದಾಗಿ ಲಾಂಚ್ ಆಗಲಿರುವ ಸ್ಕೂಟರ್​ಗಳ ಎಕ್ಸ್ ಶೋರೂಮ್ ಬೆಲೆ ರೂ. 84,850 ಆಗಿರಲಿದೆ. ಟಿವಿಎಸ್ ಕಂಪನಿಯು, ಅಸ್ತಿತ್ವದಲ್ಲಿರುವ ಸುಪರ್ ಸ್ಕ್ವಾಡ್ ಎಡಿಶನಲ್ಲಿ ಮಾರ್ವೆಲ್ ಸುಪರ್ ಹೀರೋಗಳಾದ-ಐರನ್ ಮ್ಯಾನ್, ಬ್ಲ್ಯಾಕ್ ಪ್ಯಾಂಥರ್ ಮತ್ತು ಕಾಪ್ಟನ್ ಅಮೇರಿಕನಿಂದ ಪ್ರೇರಿತಗೊಂಡಿರುವ ಸ್ಕೂಟರ್​ಗಳನ್ನು ಹೊಂದಿದ್ದು ಹೊಸದಾಗಿ ಲಾಂಚ್ ಆಗಲಿರುವ ಸ್ಕೂಟರ್​ಗಳು ಅವುಗಳ ಶ್ರೇಣಿಗೆ ಸೇರಲಿವೆ.

ಸೂಪರ್ ಸ್ಕ್ವ್ಯಾಡ್​​ ಎಡಿಶನಲ್ಲಿ ಎನ್ ಟಾರ್ಕ್ 125 ಸ್ಕೂಟರ್​ಗಳನ್ನು ಲಾಂಚ್ ಮಾಡಲು ಟಿವಿಎಸ್ ಕಂಪನಿಯು ಡಿಸ್ನಿ ಇಂಡಿಯಾದ ಗ್ರಾಹಕ ಉತ್ಪಾದನೆ ವ್ಯಾಪಾರ ವ್ಯವಸ್ಥೆಯೊಂದಿಗೆ ಸಹಭಾಗಿತ್ವ ಸಾಧಿಸಿದೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಎನ್ ಟಾರ್ಕ್ 125 ಸ್ಕೂಟರ್ ಗಳು ಆರ್ಟಿ-ಫೈ ತಂತ್ರಜ್ಞಾನದ ಮೂಲಕ ಭಾರತದ ಪ್ರಪ್ರಥಮ ಬ್ಲ್ಯೂಟೂತ್-ಕನೆಕ್ಟೆಡ್ ದ್ವಿಚಕ್ರ ವಾಹನಗಳೆನಿಸಿಕೊಳ್ಳಲಿವೆ. ಹೊರಭಾಗದಲ್ಲಿ ಸೂಪರ್ ಹೀರೋಗಳ ಸ್ಟೈಲಿಂಗ್ ಹೊರತುಪಡಿಸಿದರೆ, ಟಿವಿಎಸ್ ಸೂಪರ್ ಸ್ಕ್ವ್ಯಾಡ್ ಆವೃತ್ತಿಯಲ್ಲಿರುವ ಸ್ಕೂಟರ್ ಮತ್ತು ಹೊಸದಾಗಿ ಲಾಂಚ್ ಆಗುತ್ತಿರುವ ಸ್ಕೂಟರ್ಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ.

‘ಮಾರ್ವೆಲ್ ಸೂಪರ್ ಹೀರೋಗಳಾದ ಸ್ಪೈಡರ್ ಮ್ಯಾನ್ ಮತ್ತು ಥೋರ್ ಅವರಿಂದ ಪ್ರೇರೇಪಣೆ ಹೊಂದಿ ತಯಾರಿಸಿರುವ ಎರಡು ಹೊಸ ಆವೃತ್ತಿಗಳನ್ನು ಲಾಂಚ್ ಮಾಡಲು ನಮ್ಮಲ್ಲಿ ಉತ್ಸುಕತೆ ಹೆಚ್ಚಿದೆ. ಈ ಎರಡು ಮಾರ್ವೆಲ್ ಕ್ಯಾರೆಕ್ಟರ್ಗಳು ಬಹಳ ಜನಪ್ರಿಯ ಆಗಿರುವುದರ ಜೊತೆಗೆ ಅಪಾರ ಅಭಿಮಾನ ಬಳಗವನ್ನು ಹೊಂದಿವೆ. ಸಾರ್ವಜನಿಕರೊಂದಿಗೂ ನಮ್ಮ ಸಂತಸವನ್ನು ಹಂಚಿಕೊಳ್ಳುವ ಇರಾದೆ ನಮ್ಮದು,’ ಎಂದು ಟಿವಿಎಸ್ ಮೋಟಾರ್ ಕಂಪನಿಯ ಸೀನಿಯರ್ ವೈಸ್ ಪ್ರೆಸಿಡೆಂಟ್ (ಮಾರ್ಕೆಟಿಂಗ್) ಅನಿರುದ್ಧ ಹವಾಲ್ದಾರ್ ಹೇಳಿದ್ದಾರೆ.

ಇದನ್ನೂ ಓದಿ:   Viral Video: ಮಿರಿಂಡಾ ಗೋಲ್​ಗಪ್ಪ ತಿಂದಿದ್ದೀರಾ? ಅರೇ ಇದೇನು ಎಂಬ ಕುತೂಹಲವೇ?; ವಿಡಿಯೋ ನೋಡಿ

Follow us on

Click on your DTH Provider to Add TV9 Kannada