ಸಾಲದ ಸುಳಿಯಲ್ಲಿ ‘ಆಚಾರ್ಯ’ ವಿತರಕರು; ನಷ್ಟ ಭರಿಸಲು ಚಿರಂಜೀವಿಗೆ ಪತ್ರ ಬರೆದ ಕರ್ನಾಟಕದ ಡಿಸ್ಟ್ರಿಬ್ಯೂಟರ್

ರಾಯಚೂರು ಮೂಲದ ವಿತರಕ, ಪ್ರದರ್ಶಕ ರಾಜ್​ಗೋಪಾಲ್ ಬಾಲಾಜಿ ಅವರು ಚಿರಂಜೀವಿಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ, ಶೇ.75 ನಷ್ಟ ಅನುಭವಿಸಿರುವ ಬಗ್ಗೆ ಅವರು ದೂರಿದ್ದಾರೆ. ‘

ಸಾಲದ ಸುಳಿಯಲ್ಲಿ ‘ಆಚಾರ್ಯ’ ವಿತರಕರು; ನಷ್ಟ ಭರಿಸಲು ಚಿರಂಜೀವಿಗೆ ಪತ್ರ ಬರೆದ ಕರ್ನಾಟಕದ ಡಿಸ್ಟ್ರಿಬ್ಯೂಟರ್
ಆಚಾರ್ಯ ಸಿನಿಮಾ
Follow us
| Updated By: ರಾಜೇಶ್ ದುಗ್ಗುಮನೆ

Updated on: May 07, 2022 | 1:09 PM

‘ಆಚಾರ್ಯ’ ಸಿನಿಮಾ (Acharya Movie) ಯಾವ ರೀತಿಯಲ್ಲಿ ಸೋತಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ರಾಮ್​ ಚರಣ್ (Ram Charan) ಹಾಗೂ ಚಿರಂಜೀವಿ (Chiranjeevi) ಒಟ್ಟಾಗಿ ನಟಿಸಿದ ಸಿನಿಮಾ ಈ ರೀತಿಯ ಸೋಲು ಕಂಡಿತಲ್ಲ ಎನ್ನುವ ಬೇಸರ ಫ್ಯಾನ್ಸ್​ಗೆ ಇದೆ. ಇನ್ನು, ಈ ಸಿನಿಮಾ ವಿತರಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ನಷ್ಟ ಭರಿಸುವಂತೆ ಕೆಲವರು ನಿರ್ಮಾಣ ಸಂಸ್ಥೆಗೆ ಕೋರುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಕರ್ನಾಟಕದ ವಿತರಕರೊಬ್ಬರು ಚಿರಂಜೀವಿಗೆ ಪತ್ರ ಬರೆದಿದ್ದಾರೆ. ನಷ್ಟ ಭರಿಸಲು ಆಗ್ರಹಿಸಿದ್ದಾರೆ.

ರಾಯಚೂರು ಮೂಲದ ವಿತರಕ, ಪ್ರದರ್ಶಕ ರಾಜ್​ಗೋಪಾಲ್ ಬಾಲಾಜಿ ಅವರು ಚಿರಂಜೀವಿಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ, ಶೇ.75 ನಷ್ಟ ಅನುಭವಿಸಿರುವ ಬಗ್ಗೆ ಅವರು ದೂರಿದ್ದಾರೆ. ‘ಆಚಾರ್ಯ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಇದರಿಂದ ನನಗೆ ತುಂಬಾ ನಿರಾಸೆಯಾಗಿದೆ. ನಾನು ಒಂದು ವರ್ಷದ ಹಿಂದೆ ಈ ಸಿನಿಮಾ ಬುಕ್ ಮಾಡಿದ್ದೆ. ಒಪ್ಪಿಕೊಂಡಂತೆ ಸಿನಿಮಾ ಬಿಡುಗಡೆಗೂ ಮುನ್ನ ಸಂಪೂರ್ಣ ಹಣ ನೀಡಿದ್ದೇನೆ. ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ ಎಂದು ಹೈದರಾಬಾದ್ ಮಂದಿ ಅಂದುಕೊಂಡಿದ್ದಾರೆ. ಆದರೆ, ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಓಡುತ್ತಿಲ್ಲ. ಈ ಸಿನಿಮಾದಿಂದ ನನಗೆ ಭಾರೀ ನಷ್ಟವಾಗಿದೆ’ ಎಂದು ಪತ್ರದಲ್ಲಿ ಹೇಳಿದ್ದಾರೆ ರಾಜ್​ಗೋಪಾಲ್ ಬಾಲಾಜಿ.

‘ಈ ಸಿನಿಮಾದಿಂದ ತೀವ್ರ ಬಿಕ್ಕಟ್ಟಿನಲ್ಲಿ ವಿತರಕರಿಗೆ ಪರಿಹಾರ ನೀಡಬೇಕು ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ. ನಾವು ಇಲ್ಲಿಯವರೆಗೆ ಹೂಡಿಕೆ ಮಾಡಿದ ಮೊತ್ತದ ಶೇ. 25 ಮಾತ್ರ ಹಣ ಬಂದಿದೆ. ಶೇ. 75  ನಷ್ಟವಾಗಿದೆ. ನಾನು ಸಾಲ ಮಾಡಿ ಈ ಚಿತ್ರಕ್ಕೆ ಹೂಡಿಕೆ ಮಾಡಿದ್ದೇನೆ. ಆದರೆ ಎಲ್ಲವೂ ನಷ್ಟವಾಗಿದೆ. ಈಗ ದೊಡ್ಡ ಸಾಲದ ಸುಳಿಗೆ ಬಿದ್ದಿದ್ದೇನೆ’ ಎಂದು ಬೇಸರ ತೋಡಿಕೊಂಡಿದ್ದಾರೆ ಅವರು.

ಇದನ್ನೂ ಓದಿ
Image
Acharya Box Office: ಬಾಕ್ಸಾಫೀಸ್​ನಲ್ಲಿ ಮಕಾಡೆ ಮಲಗಿದ ‘ಆಚಾರ್ಯ’; ಇದುವರೆಗೆ ಆದ ಕಲೆಕ್ಷನ್ ಎಷ್ಟು?
Image
ರಾಜಮೌಳಿ ಜತೆ ಕೆಲಸ ಮಾಡಿದ್ದಕ್ಕೆ ರಾಮ್​ಚರಣ್ ಹೊಸ​ ಚಿತ್ರಕ್ಕೆ ಸೋಲು?; ಆತಂಕದಲ್ಲಿ ಜ್ಯೂ.ಎನ್​ಟಿಆರ್​ ಫ್ಯಾನ್ಸ್
Image
Rashmika Mandanna: ರಶ್ಮಿಕಾ ಮಂದಣ್ಣ ರಿಜೆಕ್ಟ್ ಮಾಡಿದ್ದ ಈ ಸಿನಿಮಾಗಳು ಸೋತಿದ್ದು ಹಾಗೀಗಲ್ಲ
Image
‘ಕೆಜಿಎಫ್​ 2’ ಎದುರು 3ನೇ ವಾರವೂ ಮಂಕಾದ ಸ್ಟಾರ್​ ಸಿನಿಮಾಗಳು; ಇನ್ನೂ ನಿಂತಿಲ್ಲ ರಾಕಿ ಭಾಯ್​ ಹವಾ

ಮತ್ತೆ ಮುನ್ನೆಲೆಗೆ ಮೂಢನಂಬಿಕೆ

ನಿರ್ದೇಶಕ ರಾಜಮೌಳಿ ಅವರು ಬಣ್ಣದ ಲೋಕದಲ್ಲಿ ಮಾಡಿದ ಮೋಡಿ ತುಂಬಾನೇ ದೊಡ್ಡದು. ಅವರ ಜತೆ ಕೆಲಸ ಮಾಡಬೇಕು ಎಂಬುದು ಅನೇಕರ ಕನಸು. ಆದರೆ, ಎಲ್ಲರಿಗೂ ಆ ಅವಕಾಶ ಸಿಗುವುದಿಲ್ಲ. ರಾಜಮೌಳಿ ನಿರ್ದೇಶನದ ಸಿನಿಮಾ ತೆರೆಗೆ ಬಂತು ಎಂದಾದರೆ ಗೆಲುವು ಖಚಿತ. ಆದರೆ, ಈ ನಿರ್ದೇಶಕನ ಜತೆ ಕೆಲಸ ಮಾಡಿದ ನಂತರ ಬೇರೆ ನಿರ್ದೇಶಕರ ಜತೆ ಕೈ ಜೋಡಿಸಿದರೆ ಸೋಲು ಉಣ್ಣಬೇಕಾಗುತ್ತದೆ ಎನ್ನುವ ಮೂಢನಂಬಿಕೆ ಟಾಲಿವುಡ್​ನಲ್ಲಿದೆ. ಕಾಕತಾಳಿಯವೋ ಎಂಬಂತೆ, ಪ್ರತಿ ಬಾರಿಯೂ ಇದು ಸಾಬೀತಾಗುತ್ತಿದೆ. ಈಗ ಈ ವಿಚಾರ ಮತ್ತೆ ಮುನ್ನೆಲೆಗೆ ಬರಲು ಕಾರಣ ‘ಆಚಾರ್ಯ’ ಸಿನಿಮಾ.

2001ರಲ್ಲಿ ರಾಜಮೌಳಿ ನಿರ್ದೇಶಿಸಿದ ‘ಸ್ಟೂಡೆಂಟ್​ ನಂಬರ್​ 1’ ಚಿತ್ರಕ್ಕೆ ಜ್ಯೂ. ಎನ್​ಟಿಆರ್​ ಹೀರೋ ಆಗಿದ್ದರು. ಆ ಸಿನಿಮಾದಲ್ಲಿ ಜ್ಯೂ. ಎನ್​ಟಿಆರ್​​ಗೆ ದೊಡ್ಡ ಗೆಲುವು ಸಿಕ್ಕಿತು. ಆದರೆ ನಂತರ ಅವರು ನಟಿಸಿದ ‘ಸುಬ್ಬ’ ಸಿನಿಮಾ ಫ್ಲಾಪ್​ ಆಯಿತು. ಬಳಿಕ ರಾಜಮೌಳಿ ಮತ್ತು ಜ್ಯೂ. ಎನ್​ಟಿಆರ್ ಜೊತೆಯಾಗಿ ‘ಸಿಂಹಾದ್ರಿ’ ಸಿನಿಮಾ ಮಾಡಿ ಯಶಸ್ಸು ಕಂಡರು. ಆ ಬಳಿಕ ಜ್ಯೂ. ಎನ್​ಟಿಆರ್ ನಟಿಸಿದ ‘ಆಂಧ್ರಾವಾಲ’ ಸೋತು ಸುಣ್ಣವಾಯಿತು. ರಾಜಮೌಳಿ ಜೊತೆ ‘ಮಗಧೀರ’ ಚಿತ್ರ ಮಾಡಿ ಗೆದ್ದಿದ್ದ ರಾಮ್​ ಚರಣ್​ ಅವರು ನಂತರ ‘ಆರೆಂಜ್’​ ಸಿನಿಮಾದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದರು. ಪ್ರಭಾಸ್​ ವಿಚಾರದಲ್ಲೂ ಈ ನಂಬಿಕೆ ನಿಜವಾಗಿದೆ. ರಾಜಮೌಳಿ ನಿರ್ದೇಶಿಸಿದ ‘ಚತ್ರಪತಿ’ ಸಿನಿಮಾದಲ್ಲಿ ಪ್ರಭಾಸ್​ಗೆ ಗೆಲುವು ಸಿಕ್ಕಿತ್ತು. ನಂತರ ಮಾಡಿದ ‘ಪೌರ್ಣಮಿ’ ಚಿತ್ರದಲ್ಲಿ ಅವರು ಸೋಲು ಕಂಡರು. ‘ಬಾಹುಬಲಿ’ ಬಳಿಕ ಪ್ರಭಾಸ್​ ನಟಿಸಿದ ‘ಸಾಹೋ’, ‘ರಾಧೆ ಶ್ಯಾಮ್​’ ಚಿತ್ರ ಫ್ಲಾಪ್ ಆಯಿತು.

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಸಿನಿಮಾದಲ್ಲಿ ರಾಮ್​ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ತೆರೆಗೆ ಬಂದ ರಾಮ್​ ಚರಣ್ ಸಿನಿಮಾ ‘ಆಚಾರ್ಯ’. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಮಕಾಡೆ ಮಲಗಿದೆ. ಬುಕ್​ ಮೈ ಶೋನಲ್ಲಿ ಕೇವಲ 59 ರೇಟಿಂಗ್ ಪಡೆದುಕೊಂಡಿದೆ. ರಾಮ್​ ಚರಣ್ ಹಾಗೂ ಚಿರಂಜೀವಿ ಒಟ್ಟಾಗಿ ನಟಿಸಿದ ಈ ಸಿನಿಮಾ ಹೀನಾಯವಾಗಿ ಸೋತಿತಲ್ಲ ಎನ್ನುವ ಬೇಸರ ಫ್ಯಾನ್ಸ್​ಗೆ ಇದೆ. ಈ ಮಧ್ಯೆ ಎಲ್ಲರೂ ರಾಜಮೌಳಿ ನೆನಪಿಸಿಕೊಳ್ಳುತ್ತಿದ್ದಾರೆ. ‘ರಾಮ್​ ಚರಣ್ ಸೋಲಿಗೆ ರಾಜಮೌಳಿ ಜತೆ ಕೆಲಸ ಮಾಡಿದ್ದೇ ಕಾರಣ’ ಎಂದು ಫ್ಯಾನ್ಸ್ ಶಪಿಸುತ್ತಿದ್ದಾರೆ.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ