‘ಕೆಜಿಎಫ್​ 2’ ಎದುರು 3ನೇ ವಾರವೂ ಮಂಕಾದ ಸ್ಟಾರ್​ ಸಿನಿಮಾಗಳು; ಇನ್ನೂ ನಿಂತಿಲ್ಲ ರಾಕಿ ಭಾಯ್​ ಹವಾ

KGF: Chapter 2 Collection: ಈ ವೀಕೆಂಡ್​ನಲ್ಲಿಯೂ ಯಶ್​ ಅಭಿಮಾನಿಗಳು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾವನ್ನು ನೋಡಿ ಎಂಜಾಯ್​ ಮಾಡಲಿದ್ದಾರೆ. ಇದರಿಂದ ಚಿತ್ರದ ಕಲೆಕ್ಷನ್​ ಇನ್ನಷ್ಟು ಹೆಚ್ಚಲಿದೆ.

‘ಕೆಜಿಎಫ್​ 2’ ಎದುರು 3ನೇ ವಾರವೂ ಮಂಕಾದ ಸ್ಟಾರ್​ ಸಿನಿಮಾಗಳು; ಇನ್ನೂ ನಿಂತಿಲ್ಲ ರಾಕಿ ಭಾಯ್​ ಹವಾ
ಟೈಗರ್​ ಶ್ರಾಫ್​, ಚಿರಂಜೀವಿ, ಅಜಯ್​ ದೇವಗನ್​, ಯಶ್​
Follow us
TV9 Web
| Updated By: ಮದನ್​ ಕುಮಾರ್​

Updated on: Apr 30, 2022 | 9:18 AM

ನಟ ಯಶ್​ (Yash) ವೃತ್ತಿಜೀವನಕ್ಕೆ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಿಂದ ಅತಿ ದೊಡ್ಡ ಗೆಲುವು ಸಿಕ್ಕಿದೆ. ಈಗ ಅವರು ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ‘ರಾಕಿಂಗ್​ ಸ್ಟಾರ್​’ ಯಶ್​​ ಕಾಲ್​ಶೀಟ್​ ಪಡೆಯಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಸಾಲುಗಟ್ಟಿ ನಿಂತಿವೆ. ಪ್ರಶಾಂತ್​ ನೀಲ್​ ನಿರ್ದೇಶನಕ್ಕೆ ಇಡೀ ದೇಶವೇ ಭೇಷ್​ ಎಂದಿದೆ. ಹಿಂದಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಚಿತ್ರರಂಗದವರು ಕೂಡ ಸ್ಯಾಂಡಲ್​ವುಡ್​ ಕಡೆಗೆ ತಿರುಗಿ ನೋಡುವಂತಾಗಿದೆ. ಏ.14ರಂದು ‘ಕೆಜಿಎಫ್​ 2’ (KGF 2) ಸಿನಿಮಾ ಬಿಡುಗಡೆ ಆಯಿತು. ಈಗ ಮೂರನೇ ವಾರಕ್ಕೆ ಈ ಚಿತ್ರ ಕಾಲಿಟ್ಟಿದೆ. ಇನ್ನೂ ಅನೇಕ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಉತ್ತರ ಭಾರತದ ಪ್ರೇಕ್ಷಕರು ಮುಗಿಬಿದ್ದು ಈ ಸಿನಿಮಾವನ್ನು ನೋಡಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ (KGF: Chapter 2) ಚಿತ್ರಕ್ಕೆ ಎದುರಾಳಿಯಾಗಿ ನಿಲ್ಲಲು ಯಾವ ಸಿನಿಮಾಗೂ ಸಾಧ್ಯವಾಗಿಲ್ಲ. ಅಚ್ಚರಿ ಎಂದರೆ ಮೂರನೇ ವಾರವೂ ಈ ಸಿನಿಮಾದ ಎದುರು ಸ್ಟಾರ್​ ನಟರ ಚಿತ್ರಗಳು ಕೂಡ ಸೊರಗಿವೆ. ಇದರಿಂದ ಗಲ್ಲಾ ಪೆಟ್ಟಿಗೆಯಲ್ಲಿ ರಾಕಿ ಭಾಯ್​ ಅಧಿಪತ್ಯ ಮುಂದುವರಿಯಲು ಸಹಕಾರಿ ಆಗಿದೆ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಿಗೆ ಡಬ್​ ಆಗಿ ತೆರೆಕಂಡಿತು. ಎಲ್ಲ ಭಾಷೆಯಲ್ಲೂ ಈ ಸಿನಿಮಾವನ್ನು ಜನರು ಒಪ್ಪಿಕೊಂಡಿದ್ದಾರೆ. ನಿರ್ಮಾಪಕ ವಿಜಯ್​ ಕಿರಗಂದೂರು ಅವರಿಗೆ ಈ ಚಿತ್ರದಿಂದ ಭರ್ಜರಿ ಲಾಭ ಆಗಿದೆ. ‘ಕೆಜಿಎಫ್​ 2’ ಜೊತೆಗೆ ತೆರೆಕಂಡಿದ್ದ ‘ಬೀಸ್ಟ್​’ ಸಿನಿಮಾ ಹೇಳ ಹೆಸರಿಲ್ಲದಂತೆ ಹೋಯಿತು. ಒಂದು ವಾರದ ಬಳಿಕ ಹಿಂದಿಯಲ್ಲಿ ರಿಲೀಸ್​ ಆದ ‘ಜೆರ್ಸಿ’ ಚಿತ್ರ ಕೂಡ ಮಕಾಡೆ ಮಲಗಿತು. ಹೀಗೆ ದಳಪತಿ ವಿಜಯ್​, ಶಾಹಿದ್​ ಕಪೂರ್​ ಅವರಂತಹ ಸ್ಟಾರ್​ ನಟರ ಚಿತ್ರಗಳೇ ‘ಕೆಜಿಎಫ್​ 2’ ಎದುರು ಮಂಡಿ ಊರಿದವು.

ಮೂರನೇ ವಾರವೂ ಪರಿಸ್ಥಿತಿ ಏನೂ ಬದಲಾಗಿಲ್ಲ. ಹಿಂದಿಯಲ್ಲಿ ಅಜಯ್​ ದೇವಗನ್​ ನಟನೆಯ ‘ರನ್​ವೇ 34’ ಸಿನಿಮಾ ರಿಲೀಸ್​ ಆಗಿದೆ. ಆ್ಯಕ್ಷನ್​ ಹೀರೋ ಟೈಗರ್​ ಶ್ರಾಫ್​ ನಟನೆಯ ‘ಹೀರೋಪಂತಿ 2’ ಬಿಡುಗಡೆ ಆಗಿದೆ. ತೆಲುಗಿನಲ್ಲಿ ಚಿರಂಜೀವಿ ಮತ್ತು ರಾಮ್​ ಚರಣ್​ ಅಭಿನಯದ ‘ಆಚಾರ್ಯ’ ಚಿತ್ರ ತೆರೆಗೆ ಬಂದಿದೆ. ಈ ಎಲ್ಲ ಸ್ಟಾರ್​ ನಟರ ಚಿತ್ರಗಳು ಮೊದಲ ದಿನ ಉತ್ತಮ ಕಲೆಕ್ಷನ್​ ಮಾಡಲು ಸಾಧ್ಯವಾಗಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಈ ಸಿನಿಮಾಗಳು ಮೂಡಿಬಂದಿಲ್ಲದ ಕಾರಣ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರಕ್ಕೆ ಅನುಕೂಲ ಆಗಿದೆ. ಈ ವೀಕೆಂಡ್​ನಲ್ಲಿಯೂ (ಏ.30 ಮತ್ತು ಮೇ 1) ಜನರು ಯಶ್​ ಸಿನಿಮಾವನ್ನು ನೋಡಿ ಎಂಜಾಯ್​ ಮಾಡಲಿದ್ದಾರೆ. ಇದರಿಂದ ಚಿತ್ರದ ಕಲೆಕ್ಷನ್​ ಇನ್ನಷ್ಟು ಹೆಚ್ಚಲಿದೆ.

ಹಿಂದಿ ಮಾರುಕಟ್ಟೆಯಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಹೊಸ ದಾಖಲೆ ಬರೆದಿದೆ. ಘಟಾನುಘಟಿ ಸ್ಟಾರ್​ ನಟರ ಸಿನಿಮಾಗಳು ಮಾಡಿದ್ದ ಕಲೆಕ್ಷನ್​ಗಿಂತಲೂ ಹೆಚ್ಚಿನ ಕಮಾಯಿ ಮಾಡುವ ಮೂಲಕ ಯಶ್​ ಜಯಭೇರಿ ಭಾರಿಸಿದ್ದಾರೆ. ಮೂರನೇ ವಾರಕ್ಕೆ ಈ ಸಿನಿಮಾ ಹಿಂದಿ ಬಾಕ್ಸ್​ ಆಫೀಸ್​ನಲ್ಲಿ 350 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ವಿಶ್ವಾದ್ಯಂತ ಎಲ್ಲ ಭಾಷಗಳಿಂದ ಸಾವಿರ ಕೋಟಿ ರೂಪಾಯಿ ಸಮೀಪಿಸಿದೆ. ಇಂದಿಗೂ ಹಲವು ಕಡೆಗಳಲ್ಲಿ ಈ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ